ಬದೌನ್(ಉತ್ತರ ಪ್ರದೇಶ): ಭೀಕರ ರಸ್ತೆ ಅಪಘಾತವೊಂದರಲ್ಲಿ ಆರು ಮಂದಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬದೌನ್ದಲ್ಲಿ ಸಂಭವಿಸಿದೆ.
ಕಲ್ಲಿದ್ದಲು ಹೊತ್ತು ಸಾಗುತ್ತಿದ್ದ ಟ್ರಕ್ವೊಂದು ಎರಡು ಟೆಂಪೋಗಳಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪ್ರರಕಣ ದಾಖಲಿಸಿಕೊಂಡಿದ್ದಾರೆ.