ರಾಜ್‌ಕೋಟ್(ಗುಜರಾತ್): ಕೋವಿಡ್ ಭೀತಿಯ ನಡುವೆಯೂ ಲಸಿಕೆಯ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಈ ಕಾರಣದಿಂದಾಗಿ ಸಾರ್ವಜನಿಕರನ್ನು ಲಸಿಕೆಪಡೆದುಕೊಳ್ಳಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಎರಡನೇ ಡೋಸ್ ತೆಗೆದುಕೊಂಡವರಿಗೆ ಲಕ್ಕಿ ಡ್ರಾ ಮೂಲಕ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ಸ್ಮಾರ್ಟ್‌ಫೋನ್ ನೀಡಲು ನಿರ್ಧರಿಸಿದೆ.
ಡಿಸೆಂಬರ್‌ನೊಳಗೆ ಲಸಿಕೆಯಎರಡನೇ ಡೋಸ್ ಪಡೆದವರಿಗೆ ಲಕ್ಕಿ ಡ್ರಾ ಮೂಲಕ 50,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ನೀಡಲಾಗುವುದು ಎಂದು ಆರ್‌ಎಂಸಿ ಆಯುಕ್ತ ಅಮಿತ್ ಅರೋರಾ ತಿಳಿಸಿದರು.