ಕರ್ನಾಟಕ

karnataka

ಬಿಹಾರದಲ್ಲಿ ಸೇತುವೆ ಕುಸಿತ.. ಬಿಜೆಪಿ ಟೀಕೆಗೆ ಆರ್​​ಜೆಡಿ ತಿರುಗೇಟು! ... ಪಕ್ಷಗಳ ನಡುವೆ ಟ್ವೀಟ್​ ವಾರ್​!

By

Published : Jun 5, 2023, 9:05 AM IST

ಬಿಹಾರದಲ್ಲಿ ಬಾಗಲ್ಪುರ ಸೇತುವೆ ಕುಸಿತಗೊಂಡಿದೆ. ಸುಮಾರು 1700 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ವಿಚಾರವಾಗಿ ಈಗ ಆರ್​ಜೆಡಿ - ಬಿಜೆಪಿ ನಡುವೆ ವಾಕ್ಸಮರ ಶುರುವಾಗಿದೆ.

RJD slams BJP leaders for blaming Bihar govt over bridge collapse
ಬಿಹಾರದಲ್ಲಿ ಸೇತುವೆ ಕುಸಿತ.. ಬಿಜೆಪಿ ಟೀಕೆಗೆ ಆರ್​​ಜೆಡಿ ತಿರುಗೇಟು

ಪಾಟ್ನಾ(ಬಿಹಾರ): ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿದ್ದ ನಾಲ್ಕು ಪಥಗಳ ನಿರ್ಮಾಣ ಹಂತದ ಸೇತುವೆಯ ಕುಸಿತಕ್ಕೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಬಿಜೆಪಿ ದೂಷಿಸಿದೆ. ಈ ನಡುವೆ ಬಿಹಾರ ಸರ್ಕಾರವನ್ನು ಟೀಕಿಸಿದ ಬಿಜೆಪಿಯನ್ನ ಪಾಲುದಾರ ಪಕ್ಷ ರಾಷ್ಟ್ರೀಯ ಜನತಾ ದಳ ಆರ್‌ಜೆಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಬಾಗಲ್ಪುರ ಸೇತುವೆ ಕುಸಿತದ ಬಗ್ಗೆ ಮಾತನಾಡಿರುವ ಆರ್‌ಜೆಡಿ ವಕ್ತಾರ ಶಕ್ತಿ ಸಿಂಗ್ ಯಾದವ್, "ನಂದ ಕಿಶೋರ್ ಯಾದವ್, ಮಂಗಲ್ ಪಾಂಡೆ ಮತ್ತು ನಿತಿನ್ ನವೀನ್ ಅವರ ಅಧಿಕಾರಾವಧಿಯಲ್ಲಿ ಈ ದೋಷಪೂರಿತ ಸೇತುವೆ ನಿರ್ಮಾಣವಾಗಿದೆ. ಅವರು ಬಿಜೆಪಿಯ ಶಾಸಕರು ಮತ್ತು 2017 ರಿಂದ 2022 ರ ನಡುವೆ ನಿರ್ಮಾಣದ ಸಮಯದಲ್ಲಿ ಅವರು ಸಚಿವರಾಗಿದ್ದರು‘‘ ಎಂದು ಅವರು ಟೀಕಿಸಿದ್ದಾರೆ.

‘‘ಕಳೆದ ವರ್ಷ ಏಪ್ರಿಲ್ 30ರಂದು ಸೇತುವೆ ಕುಸಿದಾಗ ನಿತಿನ್ ನವೀನ್ ಅವರು ರಸ್ತೆ ನಿರ್ಮಾಣ ಖಾತೆ ಸಚಿವರಾಗಿದ್ದರು. ಬಿಜೆಪಿ ಸರ್ಕಾರದ ಭಾಗವಾಗಿದ್ದಾಗ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಮತ್ತು ಅಮಿತ್ ಮಾಳವೀಯ ಒಪ್ಪಿಕೊಳ್ಳಬಹುದೇ? ನಂದ್ ಕಿಶೋರ್ ಯಾದವ್ ಮಂಗಲ್ ಪಾಂಡೆ ಮತ್ತು ನಿತಿನ್ ನವೀನ್ ತಮ್ಮ ನಾಯಕರ ಹೇಳಿಕೆಗಳನ್ನು ಬೆಂಬಲಿಸುತ್ತಾರಾ ಎಂದು ಶಕ್ತಿ ಸಿಂಗ್​ ಯಾದವ್​ ಪ್ರಶ್ನಿಸಿದ್ದಾರೆ.

ಸೇತುವೆ ಕುಸಿತದ ವಿಡಿಯೋವನ್ನು ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ ಹಿನ್ನೆಲೆಯಲ್ಲಿ ಆರ್​ಜೆಡಿ ಈ ಪ್ರತಿಕ್ರಿಯೆ ನೀಡಿದೆ. "ಭಾಗಲ್ಪುರದ ಸುಲ್ತಂಗಂಜ್ ಪ್ರದೇಶ ಮತ್ತು ಖಗಾರಿಯಾ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ನಡುವೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಇಂದು ಕುಸಿದಿದೆ. ಸೇತುವೆಯ ಶಂಕು ಸ್ಥಾಪನೆಯನ್ನು ಸಿಎಂ ನಿತೀಶ್​ ಕುಮಾರ್ ಮಾಡಿದ್ದರು. ಈ ಸೇತುವೆ 2020ರಲ್ಲೇ ಸಂಪೂರ್ಣ ನಿರ್ಮಾಣಗೊಂಡು ಲೋಕಾರ್ಪಣೆ ಆಗಬೇಕಿತ್ತು ಎಂದು ಅಮಿತ್​ ಮಾಳವಿಯಾ ಟ್ವೀಟ್ ಮಾಡಿದ್ದರು.

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಮಾತನಾಡಿ , "ಭಾಗಲ್ಪುರದಲ್ಲಿ ಕುಸಿದಿದ್ದು ಸೇತುವೆ ಅಲ್ಲ, ಬಿಹಾರ ಸರ್ಕಾರದ ಮೇಲಿನ ಜನರ ನಂಬಿಕೆ.. ಆ ನಂಬಿಕೆ ಗಂಗಾ ನದಿಯಲ್ಲಿ ತೇಲಿ ಹೋಗಿದೆ. ಈ ಸೇತುವೆ ಈಗ ಎರಡು ಬಾರಿ ಕುಸಿದಿದೆ, ಇದು ಸ್ಪಷ್ಟವಾಗಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿದೆ ಎಂಬುದನ್ನು ಸಾಬೀತುಪಡಿಸುತ್ತದೆ‘‘ ಎಂದು ಹರಿಹಾಯ್ದಿದ್ದಾರೆ.

"ನೈತಿಕ ಆಧಾರದ ಮೇಲೆ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕು. ಅವರ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ" ಎಂದು ಬಿಜೆಪಿಯ ಬಿಹಾರ ಘಟಕದ ಅಧ್ಯಕ್ಷ ಸಾಮ್ರಾಟ್ ಚೌಧರಿ ಆಗ್ರಹಿಸಿದ್ದಾರೆ.

ಭಾಗಲ್ಪುರದಲ್ಲಿ ಸೇತುವೆ ಕುಸಿದಿದ್ದರಿಂದ "ಎಸ್‌ಡಿಆರ್‌ಎಫ್‌ನ 4 ಬೋಟ್‌ಗಳು ಸ್ಥಳಕ್ಕೆ ಧಾವಿಸಿವೆ. ಒಂದು ಕಡೆ 2 ಮತ್ತು ಇನ್ನೊಂದು ಕಡೆ 2 ಬೋಟ್​ಗಳನ್ನು ನಿಯೋಜಿಸಲಾಗಿದ್ದು, ಎಲ್ಲಾ ಬೋಟ್‌ಗಳು ತಪಾಸಣೆ ನಡೆಸುತ್ತಿವೆ " ಎಂದು ಎಸ್​​ಡಿಆರ್​ಎಫ್​​ನ ಎಸ್‌ಐ ಬೀರೇಂದ್ರ ಕುಮಾರ್ ಹೇಳಿದ್ದಾರೆ.

ಇದನ್ನು ಓದಿ:ಕುಸಿದು ಬಿತ್ತು ನಿರ್ಮಾಣ ಹಂತದ ಬೃಹತ್​ ಸೇತುವೆ : ವಿಡಿಯೋ

ABOUT THE AUTHOR

...view details