ಕರ್ನಾಟಕ

karnataka

ETV Bharat / bharat

ಮಳೆಗಾಗಿ ಪ್ರಾರ್ಥಿಸಿ ನೇಗಿಲು ಹಿಡಿದ ಮಹಿಳೆಯರು: 85 ವರ್ಷದ ವೃದ್ಧೆಯೂ ಭಾಗಿ - ನೇಗಿಲು ಹೊಡೆದ ಮಹಿಳೆಯರು 85 ವರ್ಷದ ವೃದ್ಧೆಯೂ ಭಾಗಿ

ದೇಶದ ಹಲವಾರು ಭಾಗಗಳಲ್ಲಿ ಸಾಕಷ್ಟು ಮಳೆ ಸುರಿಯುತ್ತಿದ್ದರೂ, ಉತ್ತರ ಪ್ರದೇಶದ ಹಲವಾರು ಭಾಗಗಳಲ್ಲಿ ಇನ್ನೂ ಮಳೆ ಬಂದಿಲ್ಲ. ಅದರಲ್ಲೂ ಇಟಾವಾದಲ್ಲಿ ಮಳೆ ಇಲ್ಲದೇ ಕೃಷಿಕರು ಪರದಾಡುವಂತಾಗಿದೆ. ಮಳೆ ಇಲ್ಲದೇ ಬೆಳೆ ಹಾಳಾಗುವ ಭೀತಿ ಈಗ ರೈತರಿಗೆ ಕಾಡತೊಡಗಿದೆ.

Women_ plow _in the field _for raining water
Women_ plow _in the field _for raining water

By

Published : Jul 14, 2022, 4:39 PM IST

ಇಟಾವಾ: ಹೊಲದಲ್ಲಿ ಬಿತ್ತನೆ ಮಾಡುವ ಸಮಯ ಬಂದಿದ್ದರೂ ಇಟಾವಾ ಜಿಲ್ಲೆಯಲ್ಲಿ ಮಾತ್ರ ಈವರೆಗೂ ಮಳೆಯಾಗಿಲ್ಲ. ಇಂಥ ಸಂದರ್ಭದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕೃಷಿಕ ಮಹಿಳೆಯರು ಹೊಲದಲ್ಲಿ ಬಿತ್ತನೆಗಾಗಿ ನೇಗಿಲು ಹೊಡೆಯುವ ಮಾಡಿದ್ದಾರೆ. ಅದರಲ್ಲಿ 85 ವರ್ಷದ ವೃದ್ಧೆಯೊಬ್ಬರು ಸಹ ಭಾಗಿಯಾಗಿದ್ದು ವಿಶೇಷವಾಗಿದೆ. ಮಹಿಳೆಯರು ನೇಗಿಲು ಹೊಡೆದರೆ ಭಗವಾನ್ ಇಂದ್ರದೇವ ಪ್ರಸನ್ನನಾಗಿ ಮಳೆ ಸುರಿಸುತ್ತಾನೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಹೀಗಾಗಿಯೇ ಮಹಿಳೆಯರೆಲ್ಲ ಸೇರಿ ನೇಗಿಲು ಹೊಡೆದಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿ ನೇಗಿಲು ಹೊಡೆದ ಮಹಿಳೆಯರು

ದೇಶದ ಹಲವಾರು ಭಾಗಗಳಲ್ಲಿ ಸಾಕಷ್ಟು ಮಳೆ ಸುರಿಯುತ್ತಿದ್ದರೂ, ಉತ್ತರ ಪ್ರದೇಶದ ಹಲವಾರು ಭಾಗಗಳಲ್ಲಿ ಇನ್ನೂ ಮಳೆ ಬಂದಿಲ್ಲ. ಅದರಲ್ಲೂ ಇಟಾವಾದಲ್ಲಿ ಮಳೆ ಇಲ್ಲದೇ ಕೃಷಿಕರು ಪರದಾಡುವಂತಾಗಿದೆ. ಮಳೆ ಇಲ್ಲದೆ ಬೆಳೆ ಹಾಳಾಗುವ ಭೀತಿ ಈಗ ರೈತರಿಗೆ ಕಾಡತೊಡಗಿದೆ.

ಮಳೆಗಾಗಿ ಪ್ರಾರ್ಥಿಸಿ ನೇಗಿಲು ಹೊಡೆದ ಮಹಿಳೆಯರು
ಮಳೆಗಾಗಿ ಪ್ರಾರ್ಥಿಸಿ ನೇಗಿಲು ಹೊಡೆದ ಮಹಿಳೆಯರು

ABOUT THE AUTHOR

...view details