ಹೈದರಾಬಾದ್:ಕೋವಿಡ್‌ನಿಂದ ಉಂಟಾಗುವ SARS-COV-2 ಸೋಂಕಿತ ಮಕ್ಕಳು ಮರಣ ಹೊಂದುತ್ತಾರಾ? ಯುವಕರು ಮತ್ತು ಮಕ್ಕಳ ಮೇಲೆ ಇದರ ಪರಿಣಾಮ ತೀವ್ರವಾಗುತ್ತದೆಯೇ? ಇಲ್ಲ ಎನ್ನುತ್ತಿವೆ ಬ್ರಿಟನ್ ಸಂಶೋಧನೆಗಳು. ಯುಕೆಯಲ್ಲಿ ಸಾರ್ವಜನಿಕ ಆರೋಗ್ಯ ಮಾಹಿತಿಯ ಸಮಗ್ರ ವಿಶ್ಲೇಷಣೆಯ ನಂತರ ಈ ಸಂಗತಿಯನ್ನು ದೃಢೀಕರಿಸಲಾಗಿದೆ.
ಯೂನಿವರ್ಸಿಟಿ ಕಾಲೇಜ್ ಲಂಡನ್, ಬ್ರಿಸ್ಟಲ್ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ ಮತ್ತು ಲಿವರ್‌ಪೂಲ್ ವಿಶ್ವವಿದ್ಯಾಲಯ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದವು. ಈ ವೇಳೆ 18 ವರ್ಷದೊಳಗಿನವರಿಗೂ ಲಸಿಕೆ ನೀಡಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.
ಕೋವಿಡ್ ಕಾಣಿಸಿಕೊಂಡಾಗಿನಿಂದ 2021ರ ಫೆಬ್ರವರಿ ವರೆಗೆ 18 ವರ್ಷದೊಳಗಿನ 251 ಮಂದಿಯನ್ನು ಬ್ರಿಟನ್‌ನಲ್ಲಿ ಐಸಿಯುಗೆ ದಾಖಲಿಸಲಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಂದರೆ ಈ ವಯಸ್ಸಿನ ಪ್ರತಿ 47,903 ಮಂದಿಯಲ್ಲಿ ಒಬ್ಬರನ್ನು ಐಸಿಯುಗೆ ದಾಖಲಿಸಲಾಗುತ್ತದೆ. ಮಕ್ಕಳಲ್ಲಿ ಕೊರೊನಾದಿಂದ ಉಂಟಾಗುವ ಉಸಿರಾಟದ ಕಾಯಿಲೆಯಾದ ಪಿಮ್ಸ್-ಟಿಎಸ್ ನಿಂದ 309 ಯುವಕರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ! ಶೇ.80 ರಷ್ಟು ಸೋಂಕಿತರಲ್ಲಿ ರೂಪಾಂತರಿ ಕೋವಿಡ್ ದೃಢ
ಪ್ರತಿ 38,911 ಜನರಲ್ಲಿ ಒಬ್ಬರಿಗೆ ಪರಿಸ್ಥಿತಿ ನಿರ್ಮಾಣವಾಗುತ್ತೆ. ಕೊರೊನಾದಿಂದ ಒಟ್ಟು 25 ಮಕ್ಕಳು ಮತ್ತು ಯುವಕರು ಸಾವನ್ನಪ್ಪಿದ್ದಾರೆ ಎಂದು ಸಂಶೋಧನೆ ತಿಳಿಸಿದೆ. ಅಂದರೆ ಪ್ರತಿ 10 ದಶಲಕ್ಷ ಜನರಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವುದರಿಂದ ಉಪಯೋಗವಿದೆ ಎಂದು ಸಂಶೋಧನಾ ಸಂಸ್ಥೆಗಳು ಆಶಾಭಾವನೆ ವ್ಯಕ್ತಪಡಿಸಿವೆ.