ತಿರುವನಂತಪುರಂ :ದೇವರನಾಡು ಕೇರಳದಲ್ಲಿ ಕೋವಿಡ್ ಮತ್ತೆ ಅಟ್ಟಹಾಸ ಮುಂದುವರಿಸಿದೆ. ಹೊಸದಾಗಿ 15,637 ಪ್ರಕರಣ ದಾಖಲಾಗಿವೆ. ಒಂದೇ ದಿನ 128 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತರ ಸಂಖ್ಯೆ 14,938ಕ್ಕೆ ತಲುಪಿದೆ. ಒಟ್ಟು ಪ್ರಕರಣಗಳ ಸಂಖ್ಯೆ 31,03,310ಕ್ಕೆ ಏರಿದೆ. ಪ್ರಸ್ತುತ 1,17,708 ಸಕ್ರಿಯ ಪ್ರಕರಣಗಳಿವೆ.
ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು 2,030 ಪ್ರಕರಣ ದಾಖಲಾಗಿವೆ. ಕೋಯಿಕ್ಕೋಡ್‌ನಲ್ಲಿ 2,022 ಮತ್ತು ಎರ್ನಾಕುಲಂನಲ್ಲಿ 1,894 ಪ್ರಕರಣ ದಾಖಲಾಗಿವೆ. ಹೊಸದಾಗಿ ದಾಖಲಾದ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳು (14,717) ರಾಜ್ಯದ ಹೊರಗಿನಿಂದ ಬಂದಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪಾಸಿಟಿವ್ ಪ್ರಮಾಣವು ಶೇ.10.03ರಷ್ಟಿದೆ.