ಕರ್ನಾಟಕ

karnataka

ETV Bharat / bharat

2022ರಲ್ಲಿ ದಾಖಲೆ ಮಟ್ಟದಲ್ಲಿ ಶಾಲೆ ಪ್ರವೇಶ ಪಡೆದ ಮಕ್ಕಳು; ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ - ದಾಖಲಾತಿ ಹೆಚ್ಚಿರುವುದು ಪ್ರಮುಖ ಅಂಶ

ಕೋವಿಡ್​ ಸಂದರ್ಭದಲ್ಲಿ ದೀರ್ಘಕಾಲದವರೆಗೆ ಶಾಲೆಗಳನ್ನು ಮುಚ್ಚಲಾಗಿತ್ತು. ಇದಾದ ನಂತರದಲ್ಲಿ ಶಾಲೆಗಳಲ್ಲಿ ದಾಖಲಾತಿ ಪಡೆದ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ.

2022ರಲ್ಲಿ ದಾಖಲೆ ಮಟ್ಟದಲ್ಲಿ ಶಾಲೆ ಪ್ರವೇಶ ಪಡೆದ ಮಕ್ಕಳು; ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
rise-of-enrollment-of-children-in-government-school-in-2022

By

Published : Jan 19, 2023, 11:34 AM IST

ನವದೆಹಲಿ: ಕೋವಿಡ್​ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿದ ನಡುವೆಯೂ 2022ರಲ್ಲಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಶಿಕ್ಷಣದ ವಾರ್ಷಿಕ ಸ್ಥಿತಿ ವರದಿ (ಎಎಸ್​ಇಆರ್​) ತಿಳಿಸಿದೆ. ಕೋವಿಡ್​ ಅವಧಿಯ ಬಳಿಕ ದಾಖಲಾತಿ ಹೆಚ್ಚಿರುವುದು ಈ ವರದಿಯ ಪ್ರಮುಖ ಅಂಶ. 6-14 ವರ್ಷ ವಯಸ್ಸಿನ ಮಕ್ಕಳ ದಾಖಲಾತಿಯನ್ನು 2018ಕ್ಕೆ ಹೋಲಿಸಿದಾಗ ಪ್ರಸ್ತುತ ಶಾಲೆಯಿಂದ ಹೊರಗುಳಿದ ಪ್ರಮಾಣವು ಅರ್ಧದಷ್ಟಿದೆ.

ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದ ದಶಕದ ನಂತರ ಶಾಲೆಯಿಂದ ಹೊರಗುಳಿದ ಮಕ್ಕಳ ಅತ್ಯಂತ ಕಡಿಮೆ ಪ್ರಮಾಣ ಇದಾಗಿದೆ. ಕಳೆದ 15 ವರ್ಷಗಳಲ್ಲಿ 6-14 ವರ್ಷದ ಮಕ್ಕಳ ದಾಖಲಾತಿ ಪ್ರಮಾಣ ಶೇ 95ರಷ್ಟು ಹೆಚ್ಚಿದೆ. ಕೋವಿಡ್​ ಸಮಯದ ಹೊರತಾಗಿ, 2018ಕ್ಕೆ (97.2) ಹೋಲಿಸಿ ನೋಡಿದರೆ ದಾಖಲಾತಿ ಪ್ರಮಾಣ 2022ರಲ್ಲಿ (98.4) ಜಾಸ್ತಿಯಾಗಿದೆ. ಇದರಲ್ಲಿ ಇದೇ ವಯೋಮಾನದ ಶೇ 1.6ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 3ನೇ ವಯಸ್ಸಿಗೆ ಅಂಗನವಾಡಿಯಂತಹ ಶಿಕ್ಷಣಕ್ಕೆ ಸೇರುವ ಮಕ್ಕಳ ಪ್ರಮಾಣವೂ ಕೂಡ 2018ಕ್ಕಿಂತ 2022ರಲ್ಲಿ ಹೆಚ್ಚಳವಾಗಿದೆ. 2022ರಲ್ಲಿ ಶೇ 66.8ರಷ್ಟು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಸೇರಿದರೆ, 2018ರಲ್ಲಿ ಶೇ 57.1 ರಷ್ಟು ಮಕ್ಕಳು ದಾಖಲಾಗಿದ್ದಾರೆ. ಇದರಲ್ಲಿ 4 ವರ್ಷದ ಮಕ್ಕಳು ಅಂಗನವಾಡಿಗೆ ದಾಖಲಾಗುವ ಸಂಖ್ಯೆ ಕೂಡ 2018 (ಶೇ 50.5)ಕ್ಕಿಂತ 2022ರಲ್ಲಿ (ಶೇ. 61.2) ಹೆಚ್ಚಿದೆ.

ಶಾಲೆ ತೊರೆಯಲು ಆರ್ಥಿಕ ಸಂಕಷ್ಟ ಕಾರಣವಲ್ಲ: ಆರ್ಥಿಕ ಸಂಕಷ್ಟದಿಂದ ಮಕ್ಕಳು ಅರ್ಧದಲ್ಲೇ ಶಾಲೆ ತೊರೆಯುವ ಆತಂಕ ಎದುರಾಗಿದ್ದು, ಆದರೆ ಈಗ ಹಾಗಾಗಿಲ್ಲ. ಇದರ ಬದಲಾಗಿ, ಕಡಿಮೆ ಪ್ರಮಾಣದಲ್ಲಿ ಅಂದರೆ ಕೇವಲ ಶೇ 2.8ರಿಂದ 1.6ರಷ್ಟು ಮಕ್ಕಳಷ್ಟೇ ಶಾಲಾ ದಾಖಲಾತಿ ಪಡೆದಿಲ್ಲ. ಪ್ರತಿನಿತ್ಯ ಶಾಲೆಗೆ ಹೋಗುವುದು ಈಗ ಎಲ್ಲಾ ಮಕ್ಕಳ ದೈನಂದಿನ ಅಭ್ಯಾಸವಾಗಿದೆ ಎಂದು ವರದಿ ಉಲ್ಲೇಖಿಸಿದೆ.

2022 ಎಎಸ್​ಇಆರ್​ ವರದಿ ಅನುಸಾರ, ​15-16 ವರ್ಷದ ವಯೋಮಾನದ ಮಕ್ಕಳು ಸರಿಯಾಗಿ ದಾಖಲಾತಿ ಹೊಂದದಿರುವುದನ್ನು ಕಾಣಬಹುದು. ಈ ವಯೋಮಾನದ ಗುಂಪಿನ ಮಕ್ಕಳು ಅತಿ ಹೆಚ್ಚು ಮಟ್ಟದಲ್ಲಿ ಶಾಲೆ ತೊರೆಯುತ್ತಿದ್ದಾರೆ. 2010ರಲ್ಲಿ ಇದೇ ವಯೋಮಾನದ ಶೇ 16.1ರಷ್ಟು ಮಕ್ಕಳು ಶಾಲೆ ಬಿಟ್ಟಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಕುಸಿದ ಮಕ್ಕಳ ಸಂಖ್ಯೆ: ಸರ್ಕಾರ ಸಾರ್ವತ್ರಿಕ ಮಾಧ್ಯಮಿಕ ಶಿಕ್ಷಣಕ್ಕೆ ಒತ್ತು ನೀಡಿದ್ದು ಖಾಸಗಿ ಶಾಲೆಯಲ್ಲಿ ಮಕ್ಕಳ ಇಳಿಕೆಗೆ ಕಾರಣವಾಗಿದೆ. 2018ರಲ್ಲಿ ಶೇ 13.1ರಷ್ಟಿದ್ದ ಸಂಖ್ಯೆ 2022ರಲ್ಲಿ 9.9ಕ್ಕೆ ಇಳಿದಿದೆ. 2022ರಲ್ಲಿ 7.5ರಷ್ಟಿದೆ. ಖಾಸಗಿ ಶಾಲೆಗಳಲ್ಲಿ ದಶಕಗಳ ಕಾಲ ದಾಖಲಾತಿ ಪ್ರಮಾಣ ಹೆಚ್ಚಿತ್ತು. 2018ರಲ್ಲಿ ಶೇ 30.9 ರಷ್ಟು ಮಕ್ಕಳು ಖಾಸಗಿ ಶಾಲೆ ಸೇರಿದರೆ 2022ರಲ್ಲಿ ಈ ಸಂಖ್ಯೆ 25.1ಷ್ಟಾಗಿದೆ. ಬಳಿಕ ಈ ಪ್ರಮಾಣ ಕುಸಿದಿದ್ದು ಖಾಸಗಿ ಶಾಲೆಗಳಲ್ಲಿ ಶೇ 19ರಷ್ಟು ದಾಖಲಾತಿಯಾಗಿದ್ದು, ಗ್ರಾಮೀಣ ಶಾಲೆಗಳಲ್ಲಿ ಶೇ 11ರಷ್ಟು ಮಕ್ಕಳ ದಾಖಲಾತಿ ಏರಿಕೆಯಾಗಿದೆ.ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2006ರಿಂದ 2014ರವರೆಗೆ ಶಾಲಾ ದಾಖಲಾತಿ ಹೊಂದುವ ಮಕ್ಕಳ ಸಂಖ್ಯೆ ಕಡಿಮೆ ಇದೆ. 2018ರವರೆಗೆ ಈ ಸ್ಥಿತಿ ಇದ್ದು, 2018ರ ಬಳಿಕ ಹೆಚ್ಚಿದೆ. 2022ರಲ್ಲಿ ಇದು 72.9ರಷ್ಟು ಹೆಚ್ಚಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ASER ಅಧ್ಯಯನ ಕುರಿತಾಗಿ ಒಂದಿಷ್ಟು ಮಾಹಿತಿ:ಇದು ದೇಶಾದ್ಯಂತ ಪ್ರತಿ ಮನೆಗಳಲ್ಲಿ ನಡೆಸುವ ಸಮೀಕ್ಷೆಯಾಗಿದ್ದು, ಇದು ಗ್ರಾಮೀಣ ಭಾರತದಲ್ಲಿ ಮಕ್ಕಳ ಶಾಲಾ ಶಿಕ್ಷಣ ಮತ್ತು ಕಲಿಕೆಯ ಮಾಹಿತಿ ಒದಗಿಸುತ್ತದೆ. 2005ರಲ್ಲಿ ಮೊದಲ ಬಾರಿ ಎಎಸ್​ಇಆರ್​ ಸಮೀಕ್ಷೆ ನಡೆಸಲಾಗಿದೆ. 10 ವರ್ಷಗಳ ಕಾಲ ವಾರ್ಷಿಕವಾಗಿ ಇದನ್ನು ನಡೆಸಲಾಗಿದೆ. ಕೋವಿಡ್​ ಬಳಿಕ ಮಕ್ಕಳು ಶಾಲೆಗೆ ಮರಳಿರುವ ಅಂಶವನ್ನು ಗಮನದಲ್ಲಿರಿಸಿ ಈ ಅಧ್ಯಯನ ವರದಿ ಬಂದಿದೆ. ಹೊಸ ಸಮೀಕ್ಷೆಯಲ್ಲಿ ಭಾರತದ 19,060 ಗ್ರಾಮಗಳಲ್ಲಿ 3,74,544 ಮನೆ ಮತ್ತು 3 ರಿಂದ 16 ವಯೋಮಾನದ 6,99,597 ಮಕ್ಕಳ ಅಧ್ಯಯನ ನಡೆಸಲಾಗಿದೆ.

ಇದನ್ನೂ ಓದಿ:ಈ ಸರ್ಕಾರಿ ಶಾಲೆಗೆ ಬಂತು ಎಲ್ಲಿಲ್ಲದ ಬೇಡಿಕೆ! ದಾಖಲಾತಿಗಾಗಿ MLA/Minister ಮೊರೆ ಹೋಗುತ್ತಿರುವ ಪೋಷಕರು

ABOUT THE AUTHOR

...view details