ಬೆಂಗಳೂರು: ಆಕಾಶದಲ್ಲಿ ನಡೆಯುವ ಖಗೋಳ ಅಚ್ಚರಿಗಳಲ್ಲಿ ಒಂದಾಗಿರುವ ಸೂರ್ಯಗ್ರಹಣವೂ ಇದೇ ಅಕ್ಟೋಬರ್ 14ರಂದು ನಡೆಯಲಿದೆ. ರಿಂಗ್ ಆಫ್ ಫೈರ್ (ಅಗ್ನಿಯ ವರ್ತುಲ)ಎಂದು ಈ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಈ ಸೂರ್ಯಗ್ರಹಣವೂ ಭಾರತದಲ್ಲಿ ಮಾತ್ರ ಗೋಚರಿಸುವುದಿಲ್ಲ.
ಅಕ್ಟೋಬರ್ 14ರಂದು ಸೂರ್ಯ ಗ್ರಹಣವೂ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 11.29ಕ್ಕೆ ಆರಂಭವಾಗಲಿದ್ದು, 11.37ಕ್ಕೆ ಅಂತ್ಯವಾಗಲಿದೆ. ಭಾರತದ ಹೊರತಾಗಿ ಇತರೆ ದೇಶದಲ್ಲಿ ಈ ಸೂರ್ಯ ಗ್ರಹಣ ಕಾಣಲಿದೆ.
ಸೂರ್ಯ ಗ್ರಹಣವು ವಾರ್ಷಿಕವಾಗಿ ನಡೆಯುವ ವಿದ್ಯಮಾನವಾಗಿದೆ. ಸೂರ್ಯನ ಮುಂದೆ ಚಂದ್ರ ಹಾದು ಹೋಗುವಾಗ ಅದರ ಸುತ್ತಲು ಉಂಗುರದಾಕಾರದ ಬೆಳಕನ್ನು ಕಾಣಬಹುದಾಗಿದೆ. ಕಳೆದ ವರ್ಷ ಈ ಸೂರ್ಯಗ್ರಹಣವು 2012ರಲ್ಲಿ ಅಮರಿಕದಲ್ಲಿ ಕಂಡು ಬಂದಿತ್ತು. ಈ ಬಾರಿ ಸಂಭವಿಸಲಿರುವ ಈ ರಿಂಗ್ ಆಫ್ ಫೈರ್ ಅಥವಾ ಅನ್ಯುಲರ್ ಸೂರ್ಯ ಗ್ರಹಣವೂ ಪಶ್ಚಿಮ ಅಮೆರಿಕದ ಕೆಲವು ಭಾಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಖಗೋಳದಲ್ಲಿ ನಡೆಯುವ ಈ ಅಚ್ಚರಿಯನ್ನು ಭಾರತೀಯರು ಕಣ್ತುಂಬಿಕೊಳ್ಳಲು ನೇರವಾಗಿ ಸಾಧ್ಯವಾಗುವುದಿಲ್ಲ ಎಂಬ ಬೇಸರಕ್ಕೆ ನಾಸಾ ಪರಿಹಾರ ಮಾರ್ಗ ನೀಡಿದೆ. ಈ ಸೂರ್ಯಗ್ರಹಣವನ್ನು ನಾಸಾ ತನ್ನ ಯುಟ್ಯೂಬ್ ಚಾನಲ್ನಲ್ಲಿ ಪ್ರಸಾರ ಮಾಡಲು ಮುಂದಾಗಿದೆ. ಅಕ್ಟೋಬರ್ 14ರಂದು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಈ ನೇರ ಪ್ರಸಾರ ಆರಂಭವಾಗಲಿದ್ದು, ಜಗತ್ತಿನೆಲ್ಲೆಡೆ ಜನರು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಏನಿದರ ವಿಶೇಷತೆ: ಸೂರ್ಯ ಭೂಮಿ ನಡುವೆ ಚಂದ್ರ ಬರುವ ಘಟನೆಯೇ ಸೂರ್ಯಗ್ರಹಣವಾಗಿದೆ. ಈ ವೇಳೆ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾನೆ. ಈ ಸಮಯದಲ್ಲಿ ಸೂರ್ಯನ ಕಿರಣಗೂ ಅದರ ಸುತ್ತ ವೃತ್ತಾಕಾರದಲ್ಲಿ ಕಾಣಬಹುದು. ಇದನ್ನು ರಿಂಗ್ ಆಫ್ ಫೈರ್ ಎನ್ನಲಾಗುವುದು. ಒಟ್ಟಾರೆ ಸೂರ್ಯ ಗ್ರಹಣದಲ್ಲಿ ಈ ಅನ್ಯುಲರ್ ಸೂರ್ಯಗ್ರಹಣವೂ ವಿಭಿನ್ನವಾಗಬಹುದು. ಈ ವೇಳೆ ಚಂದ್ರ ಸೂರ್ಯನಿಗಿಂತ ದೊಡ್ಡದಾಗಿ ಕಾಣುತ್ತದೆ. ಇದಕ್ಕೆ ಕಾರಣ ಇದು ಭೂಮಿಗೆ ಸಮೀಪದಲ್ಲಿ ಇರುತ್ತದೆ.
ಎಲ್ಲಿ ಕಾಣಲಿದೆ ಸೂರ್ಯಗ್ರಹಣ: ಅನ್ಯುಲರ್ ಸೂರ್ಯ ಗ್ರಹಣವು ಅಕ್ಟೋಬರ್ 14ರಂದು ಟೆಕ್ಸಾಸ್ ಗಲ್ಫ್ ಕರಾವಳಿ ತೀರದಲ್ಲಿ ಕಾಣಸಿಗಲಿದೆ. ಅಮೆರಿಕದ ಒರೆಗೊನ್, ನೆವಡಾ, ಉತ್ತಾ, ನ್ಯೂ ಮಾಕ್ಸಿಕೊ, ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾದ ಕೆಲವು ಭಾಗ, ಅರಿಜೋನಾ ಸೇರಿದಂತೆ ಕೆಲವು ಪ್ರದೇಶದಲ್ಲಿ ಈ ಕೌತುಕ ಕ್ಷಣ ಕಾಣಲಿದೆ. ಅದು ಕೂಡ ಹವಾಮಾನ ಪ್ರತಿಕೂಲವಾಗಿದ್ದರೆ ಮಾತ್ರ ಎಂದು ನಾಸಾ ತಿಳಿಸಿದೆ. ಮೆಕ್ಸಿಕೋ, ಕೇಂದ್ರ ಅಮೆರಿಕ ಮತ್ತು ದಕ್ಷಿಣ ಅಮೆರಿಕದಿಂದ ಆರಂಭವಾಗಲಿರುವ ಈ ಸೂರ್ಯಗ್ರಹದ ಪ್ರಯಾಣ ಅಟ್ಲಾಂಟಿಕ್ ಸಾಗರದಲ್ಲಿ ಸೂರ್ಯಾಸ್ತ ಮೂಲಕ ಅಂತ್ಯವಾಗಲಿದೆ. ಅಮೆರಿಕದಲ್ಲಿ ಕಾಣಸಿಗಲಿರುವ ಈ ಸೂರ್ಯ ಗ್ರಹಣದ ಅವಧಿ ಸರಾಸರಿ ನಾಲ್ಕರಿಂದ ಐದು ನಿಮಿಷ ಮಾತ್ರ.
ಮುನ್ನೆಚ್ಚರಿಕೆ: ಸೂರ್ಯಗ್ರಹಣವನ್ನು ಎಂದಿಗೂ ಬರೀಗಣ್ಣಿನಿಂದ ನೋಡುವುದು ಸೂಕ್ತವಲ್ಲ. ಇದಕ್ಕೆ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ರಕ್ಷಣಾತ್ಮಕ ಕನ್ನಡಕಗಳು ಧರಿಸಿ ಮಾತ್ರ ನೋಡಬೇಕು. ಇದರಿಂದ ಕಣ್ಣಿಗೆ ಆಗುವ ಶಾಶ್ವತ ಹಾನಿಯನ್ನು ತಡೆಯಬಹುದು. ಕ್ಯಾಮರಾ, ಟೆಲಿಸ್ಕೋಪ್, ಬಯ್ನೊಕ್ಯೂಲರ್ ಅಥವಾ ಇನ್ನಿತರ ಸಾಧನಗಳಿಂದ ಕೂಡ ಸೂಕ್ತ ಫಿಲ್ಟರ್ ಇಲ್ಲದೇ, ವೀಕ್ಷಣೆ ಮಾಡಬೇಡಿ. ಇದಕ್ಕೆ ಪಿನ್ಹೋಲ್ ಪ್ರೋಟೆಕ್ಟರ್ ಬಳಕೆ ಮಾಡಿ ವೀಕ್ಷಣೆ ಮಾಡಬಹುದಾಗಿದೆ.
ಇದನ್ನೂ ಓದಿ:ಆದಿತ್ಯ-ಎಲ್1 ಮಿಷನ್: ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ- ಇಸ್ರೋ