ನವದೆಹಲಿ: ಕೊರೊನಾ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಕಾಲಿಡುವ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕಬೇಕು. ಬಡವರಿಗೆ, ವಿಶೇಷವಾಗಿ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ತಂತ್ರಜ್ಞಾನ ಬಳಕೆ ಇಲ್ಲದವರಿಗೂ ಬದುಕುವ ಹಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂಟರ್ನೆಟ್ ವ್ಯವಸ್ಥೆ ಇಲ್ಲದವರಿಗೂ ಜೀವಿಸುವ ಹಕ್ಕಿದೆ, ಎಲ್ಲರಿಗೂ ಲಸಿಕೆ ನೀಡಿ: ರಾಹುಲ್ ಗಾಂಧಿ
ವ್ಯಾಕ್ಸಿನೇಷನ್ ಕೇಂದ್ರಕ್ಕೆ ಕಾಲಿಡುವ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಚುಚ್ಚುಮದ್ದನ್ನು ನೀಡಬೇಕು ಮತ್ತು ಅಂತರ್ಜಾಲ ವ್ಯವಸ್ಥೆ ಇಲ್ಲದವರಿಗೂ ಜೀವಿಸುವ ಹಕ್ಕು ಇದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
Right to life also for those without internet, provide walk-in vaccines for all: Rahul Gandhi
ಇಷ್ಟೇ ಅಲ್ಲದೆ, ಕೋವಿಡ್ ಲಸಿಕೆ ಪಡೆಯಲು ಕೋವಿನ್ ನೋಂದಣಿ ಕಡ್ಡಾಯವಾಗಿರಬಾರದು ಎಂದು ವಿರೋಧ ಪಕ್ಷ ಒತ್ತಾಯಿದೆ. ಲಸಿಕೆಗೆ ಕೇವಲ ಆನ್‌ಲೈನ್ ನೋಂದಣಿ ಸಾಕಾಗುವುದಿಲ್ಲ. ವ್ಯಾಕ್ಸಿನೇಷನ್ ಕೇಂದ್ರದಲ್ಲಿ ನಡೆಯುವ ಪ್ರತಿಯೊಬ್ಬ ವ್ಯಕ್ತಿಯು ಲಸಿಕೆ ಪಡೆಯಬೇಕು. ಇಂಟರ್ನೆಟ್ ಪ್ರವೇಶ ಇಲ್ಲದವರಿಗೂ ಜೀವಿಸುವ ಹಕ್ಕಿದೆ ಅವರಿಗೂ ಲಸಿಕೆ ಹಾಕಿ ಎಂದು ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
ಸರ್ಕಾರದ ವ್ಯಾಕ್ಸಿನೇಷನ್ ನೀತಿ ಮತ್ತು ದೇಶದ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವುದಲ್ಲಿ ಕೇಂದ್ರ ವಿಫಲವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
TAGGED:
Rahul Gandhi on vaccination