ಕರ್ನಾಟಕ

karnataka

ETV Bharat / bharat

ಈ ಆನೆಗೆ ಅಕ್ಕಿ ಅಂದ್ರೆ ಅಚ್ಚುಮೆಚ್ಚು: ನ್ಯಾಯಬೆಲೆ ಅಂಗಡಿಗಿದು ಅನಧಿಕೃತ ಪಡಿತರದಾರ - ಕೇರಳದ ಪನ್ನಿಯಾರ್​ನಲ್ಲಿ ಅಕ್ಕಿಯನ್ನು ಇಷ್ಟಪಡುವ ಆನೆ

ಕಳೆದ ಮೂರು ದಿನಗಳಿಂದ ಕೇರಳದ ಇಡುಕ್ಕಿ ಜಿಲ್ಲೆಯ ಪನ್ನಿಯಾರ್ ಪ್ರದೇಶದ ಶಾಂತನ್‌ಪಾರಾ ನಿವಾಸಿಗಳಿಗೆ ಪಡಿತರ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಅಕ್ಕಿ ತಿನ್ನಲು ಹಾತೊರೆಯುವ ಆನೆ.

ಈ ಆನೆಗೆ ಅಕ್ಕಿ ಅಂದ್ರ ಬಹಳ ಇಷ್ಟ
ಈ ಆನೆಗೆ ಅಕ್ಕಿ ಅಂದ್ರ ಬಹಳ ಇಷ್ಟ

By

Published : Jan 6, 2022, 9:08 PM IST

ಇಡುಕ್ಕಿ: ಕಳೆದ ಮೂರು ದಿನಗಳಿಂದ ಕೇರಳದ ಇಡುಕ್ಕಿ ಜಿಲ್ಲೆಯ ಪನ್ನಿಯಾರ್ ಪ್ರದೇಶದ ಶಾಂತನ್‌ಪಾರಾ ನಿವಾಸಿಗಳಿಗೆ ಪಡಿತರ ಪೂರೈಕೆ ಸಾಧ್ಯವಾಗುತ್ತಿಲ್ಲ. ಕಾರಣ, ಅಧಿಕಾರಿಗಳು ವಿಧಿಸಿದ ನಿರ್ಬಂಧವಲ್ಲ, ಬದಲಾಗಿ 'ಅಕ್ಕಿ ಪ್ರಿಯ ಆನೆ'.

ಹೌದು, ಈ ಆನೆಗೆ ಅಕ್ಕಿ ಅಂದ್ರೆ ಪಂಚಪ್ರಾಣ. ಈ ಕಾರಣಕ್ಕೆ ಆನೆಯು ತನ್ನ ನೆಚ್ಚಿನ ಧಾನ್ಯ ಹುಡುಕುತ್ತಾ ಈ ಪ್ರದೇಶದಲ್ಲಿ ಪದೇ ಪದೇ ಓಡಾಡುತ್ತಿದ್ದು ಜನರೇ ಅಕ್ಕಿ ಬಳಸಲು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ.

'ಅರಿಕೊಂಬನ್' ಎಂಬ ಅಡ್ಡಹೆಸರಿನ ಈ ಆನೆಯು ಪಡಿತರ ಅಂಗಡಿಗಳನ್ನು ಪುಡಿಗಟ್ಟುತ್ತಿದೆ. ಹಾಗೆಯೇ ತಿನ್ನಲು ಅಕ್ಕಿ ಚೀಲಗಳನ್ನು ಹೊರತೆಗೆದು ತಿಂದು ಹಾಕುತ್ತಿದೆ ಎಂದು ವರದಿಯಾಗಿದೆ. ಅರಿಕೊಂಬನ್ ಕೆಲವೊಮ್ಮೆ ಅಕ್ಕಿಯ ಹುಡುಕಾಟದಲ್ಲಿ ಮನೆಗಳನ್ನೂ ಧ್ವಂಸ ಮಾಡಿದೆ. ಆನೆ ಈ ಪ್ರದೇಶವನ್ನು ಬಿಟ್ಟು ಬೇರೆಡೆಗೆ ಹೋಗಲು ಮುಂದಾಗುತ್ತಿಲ್ಲ. ಅಕ್ಕಿ ಹುಡುಕಿಕೊಂಡು ರಾತ್ರಿ ವೇಳೆ ಸಿಕ್ಕ ಸಿಕ್ಕಲ್ಲೆಲ್ಲಾ ತಿರುಗಾಡುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಮಾಹಿತಿ ಪ್ರಕಾರ, ಕಳೆದ ಮೂರು ದಿನಗಳಲ್ಲಿ ಅರಿಕೊಂಬನ್ ಈ ಪ್ರದೇಶದಲ್ಲಿ ಮೂರು ಪಡಿತರ ಅಂಗಡಿಗಳ ಮೇಲೆ ದಾಳಿ ಮಾಡಿ ಮೂರು ದೊಡ್ಡ ಅಕ್ಕಿ ಚೀಲಗಳನ್ನು ಕಬಳಿಸಿದೆಯಂತೆ.

ಈ ಆನೆ ನೀಡುವ ತೊಂದರೆಯಿಂದ ಪನ್ನಿಯಾರ್ ಎಸ್ಟೇಟ್‌ನಲ್ಲಿ ಕಾರ್ಮಿಕರಿಗೆ ಪಡಿತರ ಪೂರೈಕೆ ಸ್ಥಗಿತಗೊಂಡಿದೆ.

For All Latest Updates

TAGGED:

ABOUT THE AUTHOR

...view details