ಕರ್ನಾಟಕ

karnataka

ETV Bharat / bharat

ಪ್ರಧಾನಿ, ಯುಪಿ ಸಿಎಂ, ಶಾ ವಿರುದ್ಧ ಮಾತು; ದೇಶ ವಿರೋಧಿ ಹೇಳಿಕೆ ವಿರುದ್ಧ ಎಫ್‌ಐಆರ್‌ - ಉರ್ಸ್‌ನ ಕವ್ವಾಲಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಯುಪಿ ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ

ರೇವಾ ಜಿಲ್ಲೆಯಲ್ಲಿ ಆಯೋಜಿಸಿದ್ದ ಕವ್ವಾಲಿಯಲ್ಲಿ ಯುಪಿಯ ಕವ್ವಾಲ್‌ ಒಬ್ಬರು ಪ್ರಧಾನಿ ಮೋದಿ, ಅಮಿತ್‌ ಶಾ, ಯುಪಿ ಸಿಎಂ ಹಾಗೂ ದೇಶದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

fir registered against qawwal who made objectionable statement on hindustan
ಮಧ್ಯಪ್ರದೇಶದ ಉರ್ಸ್‌ನ ಕವ್ವಾಲಿಯಲ್ಲಿ ಪ್ರಧಾನಿ ಮೋದಿ, ಯುಪಿ ಸಿಎಂ, ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ; ಎಫ್‌ಐಆರ್‌ ದಾಖಲು

By

Published : Mar 31, 2022, 10:58 AM IST

Updated : Mar 31, 2022, 11:44 AM IST

ರೇವಾ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್‌ನ ಉರ್ಸ್‌ನಲ್ಲಿ ನಡೆದ ಕವ್ವಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾನ್ಪುರದ ಕವ್ವಾಲ್‌ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ಯುಪಿ ಸಿಎಂ ಆಯೋಗಿ ಆದಿತ್ಯನಾಥ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ದೇಶದ ವಿರುದ್ಧವೂ ನೀಡಿರುವ ಅವಹೇಳನಕಾರಿ ಹೇಳಿಕೆಯ ವೈರಲ್‌ ವಿಡಿಯೋ ಆಧರಿಸಿ ರೇವಾ ಜಿಲ್ಲೆಯ ಮಂಗವಾನ್‌ ಪೊಲೀಸರು ಕವ್ವಾಲ್ ಷರೀಫ್ ಪರ್ವೇಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ಪಂಚುಲಾಲ್ ಪ್ರಜಾಪತಿ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಪರ್ವೇಜ್‌ ವಿರುದ್ಧ ಐಪಿಸಿ ಸೆಕ್ಷನ್ 505,153 ಮತ್ತು 280 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಂಗವಾನ್ ಪೊಲೀಸ್ ಠಾಣೆಯ ಪ್ರಭಾರಿ ಪಿಕೆ ದಹಿಯಾ ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ರೈಲಿನಲ್ಲಿ ಮಹಿಳೆಯ ಕೆನ್ನೆಗೆ ಮುತ್ತು: ಏಳು ವರ್ಷ ವಿಚಾರಣೆ, ಈಗ ಶಿಕ್ಷೆ ಪ್ರಕಟ

Last Updated : Mar 31, 2022, 11:44 AM IST

ABOUT THE AUTHOR

...view details