ನವದೆಹಲಿ:ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು 17 ರಾಜ್ಯಗಳಿಗೆ ಇಂದು 9,871 ಕೋಟಿ ರೂ. PDRD (ಪೋಸ್ಟ್ ಡಿವಲ್ಯೂಷನ್ ರೆವೆನ್ಯೂ ಡಿಫಿಸಿಟ್)ಅನುದಾನದ 7ನೇ ಮಾಸಿಕ ಕಂತನ್ನು ಬಿಡುಗಡೆ ಮಾಡಿದೆ. ಈ ಕಂತಿನ ಬಿಡುಗಡೆಯೊಂದಿಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 69,097 ಕೋಟಿ ರೂ. ಮೊತ್ತವನ್ನು ಅರ್ಹ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಿದ ನಂತರದ ವಿತರಣಾ ಆದಾಯ ಕೊರತೆಯನ್ನ (PDRD) ಅನುದಾನವಾಗಿ ಬಿಡುಗಡೆ ಮಾಡಲಾಗಿದೆ.
ಪಿಡಿಆರ್‌ಡಿ ಅನುದಾನವಾಗಿ 69,097.00 ಕೋಟಿ ರೂ. ಬಿಡುಗಡೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಪಿಡಿಆರ್‌ಡಿ ಅನುದಾನವಾಗಿ 69,097.00 ಕೋಟಿ ರೂ.ಗಳನ್ನು ಬಿಡುಗಡೆಯಾಗಿದ್ದು, ಕರ್ನಾಟಕಕ್ಕೆ ಕೇವಲ 951.42 ಕೋಟಿ ಹಣ ಮಾತ್ರ ಲಭ್ಯವಾದಂತಾಗಿದೆ.
ಈ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22 ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಪಿಡಿಆರ್‌ಡಿ ಅನುದಾನವನ್ನು ಇದರಲ್ಲಿ ಸೇರಿಸಲಾಗಿದೆ. PDRD ಅನುದಾನವನ್ನು ಸಂವಿಧಾನದ 275 ನೇ ವಿಧಿಯ ಅಡಿ ರಾಜ್ಯಗಳಿಗೆ ಒದಗಿಸಲಾಗಿದೆ.
ರಾಜ್ಯಗಳ ಆದಾಯ ಖಾತೆಗಳಲ್ಲಿನ ಅಂತರವನ್ನು ಸರಿದೂಗಿಸಲು 15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಮಾಸಿಕ ಕಂತುಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಆಯೋಗವು ಪಿಡಿಆರ್‌ಡಿ ಅನುದಾನವನ್ನು ಬಿಡುಗಡೆ ಮಾಡಿದೆ.
15ನೇ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂಪಾಯಿಗಳ ಪಿಆರ್‌ಡಿಆರ್ ಅನುದಾನವನ್ನು ಶಿಫಾರಸು ಮಾಡಿತ್ತು. ಈ ಪೈಕಿ, ಈವರೆಗೆ 69,097 ಕೋಟಿ ರೂಪಾಯಿಗಳನ್ನು (58.33) ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ.
15ನೇ ಹಣಕಾಸು ಆಯೋಗವು ಪಿಡಿಆರ್‌ಡಿ ಅನುದಾನಕ್ಕೆ ಶಿಫಾರಸು ಮಾಡಿದ ರಾಜ್ಯಗಳು:
ಕರ್ನಾಟಕ, ಆಂಧ್ರಪ್ರದೇಶ, ಅಸ್ಸೋಂ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.