ಕರ್ನಾಟಕ

karnataka

ETV Bharat / bharat

ಶಬರಿಮಲೆ: 39 ದಿನಗಳಲ್ಲಿ ₹204 ಕೋಟಿ ಆದಾಯ, 31 ಲಕ್ಷ ಭಕ್ತರಿಂದ ಅಯ್ಯಪ್ಪ ಸ್ವಾಮಿಯ ದರ್ಶನ - Sabarimala Revenue increase

ಶಮರಿಮಲೆಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ದೇಗುಲದ ಆದಾಯವೂ ಹೆಚ್ಚುತ್ತಿದೆ. ಈವರೆಗೆ 200 ಕೋಟಿ ರೂಪಾಯಿ ದಾಟಿದೆ ಎಂದು ಅಯ್ಯಪ್ಪ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಶಬರಿಮಲೆ
ಶಬರಿಮಲೆ

By ETV Bharat Karnataka Team

Published : Dec 27, 2023, 7:40 AM IST

ಶಬರಿಮಲೆ( ಕೇರಳ):ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ದೇಶಾದ್ಯಂತ ಭಕ್ತಸಾಗರವೇ ಹರಿದು ಬರುತ್ತಿದೆ. ಇದರಿಂದ ದೇಗುಲದ ಆದಾಯಕ್ಕೂ ಬೂಸ್ಟ್​ ಸಿಕ್ಕಿದೆ. ಮಂಡಲಪೂಜೆ ನಿಮಿತ್ತ ಗಿರಿಗೆ ಭೇಟಿ ನೀಡುತ್ತಿರುವ ಅಯ್ಯಪ್ಪ ಭಕ್ತರಿಂದ ಕಳೆದ 39 ದಿನಗಳಲ್ಲಿ (ಡಿಸೆಂಬರ್​ 25) 204 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಯ್ಯಪ್ಪ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಟಿಡಿಬಿ ಅಧ್ಯಕ್ಷ ಪಿ.ಎಸ್ ಪ್ರಶಾಂತ್, ಈ ವರ್ಷ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಭಾರಿ ಭಕ್ತ ಸಮೂಹ ಬರುತ್ತಿದೆ. ಕಾಣಿಕೆ, ಪ್ರಸಾದ ಮಾರಾಟದಿಂದಾಗಿ ಈವರೆಗೆ 204 ಕೋಟಿ ರೂಪಾಯಿ ಆದಾಯ ಬಂದಿದೆ. ಇದರಲ್ಲಿ ಇನ್ನೂ ಕೆಲ ಕಾಣಿಕೆ ಹುಂಡಿಗಳನ್ನು ಎಣಿಸಲಾಗಿಲ್ಲ. ಅದರ ಲೆಕ್ಕಾಚಾರದ ಬಳಿಕ ಆದಾಯದ ಮೊತ್ತವು ಹೆಚ್ಚಾಗಲಿದೆ. ಒಟ್ಟು 204.30 ಕೋಟಿ ರೂಪಾಯಿ ಆದಾಯದಲ್ಲಿ 63.89 ಕೋಟಿ ಕಾಣಿಕೆಯಿಂದ ಬಂದಿದ್ದರೆ, ಅರವಣ (ಪ್ರಸಾದ) ಮಾರಾಟದ ಮೂಲಕ 96.32 ಕೋಟಿ ಗಳಿಸಲಾಗಿದೆ. ಇದರ ಜೊತೆಗೆ ಮತ್ತೊಂದು ಸಿಹಿ ನೈವೇದ್ಯವಾದ ಅಪ್ಪಂ ಮಾರಾಟದಿಂದ 12.38 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ಅವರು ಹೇಳಿದರು.

ಮಲೆಗೆ ಭಾರೀ ಭಕ್ತರು:ನಡೆಯುತ್ತಿರುವ ವಾರ್ಷಿಕ ತೀರ್ಥಯಾತ್ರೆಯ ಈ ಋತುವಿನಲ್ಲಿ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಜನದಟ್ಟಣೆ ಕಂಡು ಬರುತ್ತಿದೆ. ಡಿಸೆಂಬರ್​ 25ರ ವರೆಗೂ 31,43,163 ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಲ್ಲಿಗೆ ಬರುತ್ತಿರುವ ಭಕ್ತರಿಗೆ ಟಿಡಿಬಿ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ಮಂಡಳಿಯು ತನ್ನ ಅನ್ನದಾನ ಮಂಡಲಂ ಮೂಲಕ ಡಿಸೆಂಬರ್ 25 ರವರೆಗೆ 7,25,049 ಜನರಿಗೆ ಉಚಿತ ಆಹಾರವನ್ನು ಒದಗಿಸಿದೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್ 27 ರಂದು ಮಂಡಲ ಪೂಜೆಯ ನಂತರ, ದೇವಾಲಯವನ್ನು ರಾತ್ರಿ 11 ಗಂಟೆಗೆ ಮುಚ್ಚಲಾಗುವುದು. ಮಕರವಿಳಕ್ಕು ಆಚರಣೆಗಾಗಿ ಡಿಸೆಂಬರ್ 30 ರಂದು ಮತ್ತೆ ದೇಗುಲವನ್ನು ತೆರೆಯಲಾಗುತ್ತದೆ. ಜನವರಿ 15 ರಂದು ಮಕರವಿಳಕ್ಕು (ಮಕರಜ್ಯೋತಿ) ಆಚರಣೆ ನಡೆಯಲಿದೆ ಎಂದು ಪ್ರಶಾಂತ್ ತಿಳಿಸಿದರು.

ಆದಾಯದಲ್ಲಿ ಕುಸಿತ:ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಆದಾಯದಲ್ಲಿ ಕುಸಿತ ಉಂಟಾಗಿದೆ ಎಂದು ಟ್ರವಾಂಕೂರ್​ ದೇವಸ್ವಂ ಬೋರ್ಡ್​​ (ಟಿಡಿಬಿ) ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿತ್ತು. ಕಳೆದ ಸಲ 28 ದಿನಗಳಲ್ಲಿ 154 ಕೋಟಿ ಬಂದಿದ್ದರೆ, ಈ ಬಾರಿ ಅದು 20 ಕೋಟಿಯಷ್ಟು ಕಡಿಮೆಯಾಗಿ 134 ಕೋಟಿ ರೂಪಾಯಿಯಷ್ಟು ಆದಾಯ ಬಂದಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ:ಗಂಗಾವತಿ: ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ 1050 ಕಿ.ಮೀ ಪಾದಯಾತ್ರೆ

ABOUT THE AUTHOR

...view details