ನವದೆಹಲಿ:ಇಂಡೋನೇಷ್ಯಾದಲ್ಲಿ ಸೇಡಿನ ಅಶ್ಲೀಲತೆಗೆ ಸಂಬಂಧಿಸಿದ ತೀರ್ಪು ವಿಶೇಷವಾಗಿದೆ. ವ್ಯಕ್ತಿಯೊಬ್ಬ ಯುವತಿಯ ಖಾಸಗಿ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ, 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯ ಬಳಿಕ 8 ವರ್ಷ ಅಂತರ್ಜಾಲ ಬಳಕೆ ಮಾಡದಂತೆ ನಿಷೇಧ ಹೇರಲಾಗಿದೆ. ಇಂತಹ ತೀರ್ಪು ಬಂದಿದ್ದು ಇದೇ ಮೊದಲಾಗಿದೆ. ವ್ಯಕ್ತಿಗೆ ಅಂತರ್ಜಾಲ ಬಳಸದಂತೆ ನೀಡಿದ ತೀರ್ಪು ಕುತೂಹಲ ಮೂಡಿಸಿದೆ.
ಪ್ರಕರಣವೇನು?:ಯುವತಿಯೊಬ್ಬಳು ವ್ಯಕ್ತಿಯೊಬ್ಬರ ಜೊತೆಗೆ ಆತ್ಮೀಯವಾಗಿ ಕಳೆದ ಕ್ಷಣಗಳ ವಿಡಿಯೋ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಗೆ ಸಿಕ್ಕಿವೆ. ಇದನ್ನಿಟ್ಟುಕೊಂಡ ಆತ ಯುವತಿಗೆ ತನ್ನೊಂದಿಗೆ ಸಖ್ಯ ಬೆಳೆಸಲು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಇದನ್ನು ವಿರೋಧಿಸಿದ್ದ ಯುವತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಕೋರಿದ್ದಳು. ಆದರೆ, ಆತ ಈಕೆಯ ಮನವಿಯನ್ನು ಕಡೆಗಣಿಸಿ ವಿಡಿಯೋವನ್ನು ಹಂಚಿಕೊಂಡಿದ್ದ.
ಇದರಿಂದ ಯುವತಿಯ ಮಾನಹಾನಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಇಂಡೋನೇಷ್ಯಾದ ಬ್ಯಾಂಟೆನ್ ಪ್ರಾಂತ್ಯದ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ವ್ಯಕ್ತಿ ಯುವತಿಯ ಕೋರಿಕೆಯನ್ನು ಧಿಕ್ಕರಿಸಿ ಅನುಮತಿ ಇಲ್ಲದೆಯೇ ಆಕೆಯ ಖಾಸಗಿ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದು ತಪ್ಪೆಂದು ಕೋರ್ಟ್ ಹೇಳಿತು. ಅಲ್ಲದೇ, ಆತನಿಗೆ 6 ವರ್ಷದ ಕಾಲ ಶಿಕ್ಷೆಗೆ ಗುರಿಪಡಿಸಿತು. ಬಳಿಕ 8 ವರ್ಷ ಇಂಟರ್ನೆಟ್ ಬಳಕೆ ಮಾಡದಂತೆ ಅಪರಾಧಿಗೆ ನಿರ್ಬಂಧ ವಿಧಿಸಿತು.
ತನ್ನ ಅನುಮತಿ ಇಲ್ಲದೇ ಖಾಸಗಿ ವಿಡಿಯೋವನ್ನು ಹಂಚಿಕೊಂಡು ತನ್ನ ಮಾನಹಾನಿ ಮಾಡಲಾಗಿದೆ. ವ್ಯಕ್ತಿಗೆ ನೀಡಿದ ಶಿಕ್ಷೆಗಿಂತಲೂ ತನಗಾದ ನಷ್ಟ ದೊಡ್ಡದು ಎಂದು ಸಂತ್ರಸ್ತೆ ವಾದಿಸಿದ್ದಾಳೆ. ಕೋರ್ಟ್ ಸಂತ್ರಸ್ತೆಯ ವಾದವನ್ನು ಸಂಪೂರ್ಣವಾಗಿ ಆಲಿಸಿತು. ಬಳಿಕ ಇದು ಸೇಡಿನ ಅಶ್ಲೀಲತೆಯಾಗಿದೆ. ವ್ಯಕ್ತಿಯ ನಡೆ ತಕ್ಕುದಲ್ಲ ಎಂದು ಶಿಕ್ಷೆ ಘೋಷಿಸಿದೆ. ವಿಶೇಷವೆಂದರೆ, ಅಂತರ್ಜಾಲ ಬಳಕೆಗೆ ನಿಷೇಧ ಹೇರಿದ್ದು ದೇಶದಲ್ಲೇ ಇದೇ ಮೊದಲಾಗಿದೆ. ಇಂತಹ ವಿಶೇಷ ತೀರ್ಪು ಚರ್ಚೆಗೆ ಗ್ರಾಸವಾಗಿದೆ.
ಸೇಡಿನ ಪೋರ್ನ್ ಅಂದರೆ..:ಸಮ್ಮತಿಯಿಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಚಿತ್ರ, ವಿಡಿಯೋಗಳನ್ನು ಪ್ರಕಟಿಸುವುದು ಅಥವಾ ಅದನ್ನು ವೈರಲ್ ಮಾಡುವುದು ಸೇಡಿನ ಅಶ್ಲೀಲತೆಯಾಗಿದೆ. ಒಪ್ಪಿಗೆಯಿಲ್ಲದೆ ಬೇರೊಬ್ಬರ ಚಿತ್ರವನ್ನು ಹಂಚಿಕೊಂಡರೆ ಅದು ಅವರ ವಿರುದ್ಧ ಸೇಡು ತೀರಿಸಿಕೊಂಡಂತಾಗುತ್ತದೆ. ಇದು ವಾಸ್ತವದಲ್ಲಿ ತಪ್ಪು ವ್ಯಾಖ್ಯಾನವಾಗಿದೆ. ಆದರೆ, ಮಹಿಳೆಯರ ಪ್ರಕರಣದಲ್ಲಿ ಘೋರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಯಾವುದೇ ಮಹಿಳೆಯ ಖಾಸಗಿ ಕ್ಷಣಗಳ ಚಿತ್ರಗಳು ಒಮ್ಮೆ ಹೊರಬಂದರೆ, ಅದು ಅವರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಒಪ್ಪಿಗೆ ರಹಿತವಾಗಿ ಚಿತ್ರಗಳ ಹಂಚಿಕೆ ಅಪರಾಧವಾಗಲಿದೆ.
ವಿಚಿತ್ರವೆಂದರೆ, ಸಂತ್ರಸ್ತೆಯ ಖಾಸಗಿ ವಿಡಿಯೋವನ್ನು ಹಂಚಿಕೊಂಡಿದ್ದಕ್ಕೆ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗಿದೆ. ಆದರೆ, ವಿಡಿಯೋದಲ್ಲಿದ್ದ ವ್ಯಕ್ತಿ ಯುವತಿ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಯಾವುದೇ ಶಿಕ್ಷೆ ನೀಡಲಾಗಿಲ್ಲ. ಇದು ಸಂತ್ರಸ್ತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಪೊಲೀಸರ ಮೊರೆ ಹೋಗಿ ಮತ್ತೆ ಕೇಸ್ ದಾಖಲಿಸುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಮಾನಸಿಕ ಒತ್ತಡದ ಕೌನ್ಸೆಲಿಂಗ್ನಲ್ಲಿ ಮೂಡಿದ ಪ್ರೀತಿ.. ಲಿವ್ ಇನ್ನಲ್ಲಿ ವಾಸ.. ವಿಚ್ಛೇದಿತ ಮಹಿಳೆಯ ಪತಿಗೆ ನಟನಿಂದ ಜೀವ ಬೆದರಿಕೆ