ಕರ್ನಾಟಕ

karnataka

ETV Bharat / bharat

45 ವರ್ಷಗಳ ನಂತರ ಹಳೇ ವಿದ್ಯಾರ್ಥಿಗಳ ಸಮ್ಮಿಲನ.. ಶಾಲೆಯಲ್ಲೇ ಷಷ್ಟ್ಯಬ್ಧ ಆಚರಿಸಿಕೊಂಡ 108 ಜೋಡಿ - ಕಲ್ಲಕುರಿಚಿ ಸರ್ಕಾರಿ ಬಾಲಕರ ಪ್ರೌಢಶಾಲೆ

ಕಲ್ಲಕುರಿಚಿ ಸರ್ಕಾರಿ ಬಾಲಕರ ಪ್ರೌಢಶಾಲೆಯ 1977-1978ರ ಬ್ಯಾಚ್​ನ ವಿದ್ಯಾರ್ಥಿಗಳು 45 ವರ್ಷಗಳ ನಂತರ ಶಾಲೆಯಲ್ಲಿ ಸೇರಿದ್ದು, ತಮ್ಮ ಮಕ್ಕಳು, ಮೊಮ್ಮಕ್ಕಳ ಮುಂಭಾಗದಲ್ಲಿಯೇ ತಮ್ಮ ಷಷ್ಟ್ಯಬ್ಧ ಆಚರಿಸಿಕೊಂಡಿದ್ದಾರೆ.

60th wedding for 108 old students
ಶಾಲೆಯಲ್ಲೇ ಷಷ್ಟ್ಯಾಬ್ಧ ಆಚರಿಸಿಕೊಂಡ 108 ಜೋಡಿ

By

Published : Oct 3, 2022, 7:53 PM IST

Updated : Oct 3, 2022, 11:00 PM IST

ಕಲ್ಲಕುರಿಚಿ(ತಮಿಳುನಾಡು):ಕಲ್ಲಕುರಿಚಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 1977-1978ರ ಬ್ಯಾಚ್​ನ ವಿದ್ಯಾರ್ಥಿಗಳು 45 ವರ್ಷಗಳ ನಂತರ ಮತ್ತೆ ತಮ್ಮ ಶಾಲೆಯಲ್ಲಿ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ 60ನೇ ವಿವಾಹ ವಾರ್ಷಿಕೋತ್ಸವವನ್ನು ಶಾಲೆಯಲ್ಲೇ ಆಚರಿಸಿಕೊಂಡಿದ್ದಾರೆ. ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 108 ಹಳೇ ವಿದ್ಯಾರ್ಥಿಗಳು ತಮ್ಮ ಸಂಗಾತಿ ಕೊರಳಿಗೆ ಮಾಲೆ ಹಾಕಿದರು.

ಶಾಲೆಯಲ್ಲೇ ಷಷ್ಟ್ಯಾಬ್ಧ ಆಚರಿಸಿಕೊಂಡ 108 ಜೋಡಿ

ಷಷ್ಟ್ಯಾಬ್ಧ ಪೂಜೆ ನೆರವೇರಿಸಿ, ಮಾಂಗಲ್ಯಧಾರಣೆ ಮಾಡಿದರು. ಎಲ್ಲ 108 ಹಳೇ ವಿದ್ಯಾರ್ಥಿಗಳು ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಸ್ನೇಹಿತರ ಉಪಸ್ಥಿತಿಯಲ್ಲಿ ಒಂದೇ ಬಾರಿಗೆ ಮಾಂಗಲ್ಯ ಧಾರಣೆ ಮಾಡಿದರು. ಇದೇ ವೇಳೆ, ಆ ಶಾಲೆಯಲ್ಲಿ ಕಾರ್ಯನಿರ್ವಹಿಸಿ 1987ರಲ್ಲಿ ಸೇವೆಯಿಂದ ನಿವೃತ್ತರಾದವರ ಸ್ಮರಣಾರ್ಥ ಸಮಾರಂಭವೂ ನಡೆಯಿತು.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ತಿರಂಗಾ ಧ್ವಜ ರ‍್ಯಾಲಿ.. ವಿದ್ಯಾರ್ಥಿಗಳ ಜೊತೆಗೆ ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ ಜೋಶಿ

Last Updated : Oct 3, 2022, 11:00 PM IST

ABOUT THE AUTHOR

...view details