ಕರ್ನಾಟಕ

karnataka

ETV Bharat / bharat

2ನೇ ವಿಶ್ವಯುದ್ಧ ಸೇರಿ 3 ಕದನದಲ್ಲಿ ಭಾಗಿಯಾಗಿದ್ದ ಮೇಜರ್​ ಕಿಮ್​ ಸಿಂಗ್​ಗೆ 100ರ ಸಂಭ್ರಮ - ಉತ್ತರಾಖಂಡದ ನಿವೃತ್ತ ಮೇಜರ್​ ಕಿಮ್​ ಸಿಂಗ್​ ಕರ್ಕಿ

ವಿಶ್ವ ಮಹಾಯುದ್ಧ ಸೇರಿದಂತೆ ಮೂರು ಕದನಗಳ ವೀರ ಉತ್ತರಾಖಂಡದ ನಿವೃತ್ತ ಮೇಜರ್​ ಕಿಮ್​ ಸಿಂಗ್​ ಕರ್ಕಿ ಅವರು 100 ವರ್ಷಗಳನ್ನು ಪೂರೈಸಿದ್ದು, ಕುಟುಂಬಸ್ಥರು- ಗ್ರಾಮಸ್ಥರು ಸೇರಿ ಸಾಮೂಹಿಕ ಅನ್ನಸಂತರ್ಪಣೆ ಮಾಡುವ ಮೂಲಕ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.

ನಿವೃತ್ತ ಮೇಜರ್​ ಕಿಮ್​ ಸಿಂಗ್​ಗೆ 100 ವರ್ಷದ ಸಂಭ್ರಮ
ನಿವೃತ್ತ ಮೇಜರ್​ ಕಿಮ್​ ಸಿಂಗ್​ಗೆ 100 ವರ್ಷದ ಸಂಭ್ರಮ

By

Published : Jun 23, 2022, 4:20 PM IST

ಬೇರಿನಾಗ್:ಎರಡನೇ ಮಹಾಯುದ್ಧ ಸೇರಿದಂತೆ ಮೂರು ಕದನಗಳಲ್ಲಿ ಭಾಗಿಯಾಗಿದ್ದ ನಿವೃತ್ತ ಮೇಜರ್​, ಉತ್ತರಾಖಂಡ ಕಿಮ್​ ಸಿಂಗ್​ ಕರ್ಕಿ ಅವರು 100 ವರ್ಷಗಳನ್ನು ಪೂರೈಸಿದ್ದಾರೆ. ಈ ಶತಕದ ಸಂಭ್ರಮವನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಒಟ್ಟುಗೂಡಿ ಆಚರಿಸಿದ್ದಾರೆ.

ಉತ್ತರಾಖಂಡದ ಪಿಥೋರಗಢ್‌ನ ಬೇರಿನಾಗ್ ಬುಗಾಡ್ ಗ್ರಾಮದಲ್ಲಿ ವಾಸಿಸುತ್ತಿರುವ ಮೇಜರ್ ಕಿಮ್ ಸಿಂಗ್ ಕರ್ಕಿ 1922ರಲ್ಲಿ ಜನಿಸಿದ್ದರು. ಇಂದು ಗ್ರಾಮದಲ್ಲಿ ಸಾಮೂಹಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು.

ವಿಶ್ವ ಯುದ್ಧದಲ್ಲಿ ಭಾಗಿ:ಕಿಮ್ ಸಿಂಗ್ ಕರ್ಕಿ 2ನೇ ವಿಶ್ವ ಮಹಾಯುದ್ಧ, 1965ರ ಚೀನಾದೊಂದಿಗಿನ ಯುದ್ಧ, 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಭಾಗವಹಿಸಿದ್ದರು. ಭಾರತೀಯ ಸೇನೆಯ ಆರ್ಮಿ ಮೆಡಿಕಲ್​ ಕಾರ್ಪ್ಸ್(ಎಎಂಸಿ)ಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

1944 ರಲ್ಲಿ ಎಎಂಸಿಗೆ ಸೇರಿದ ಕಿಮ್​ ಸಿಂಗ್​ 1976ರಲ್ಲಿ ನಿವೃತ್ತರಾದರು. ಮೊಮ್ಮಗ ಕುಲದೀಪ್ ಕರ್ಕಿ ಪ್ರಸ್ತುತ ಬಿಎಸ್‌ಎಫ್‌ನಲ್ಲಿ ಯೋಧರಾಗಿದ್ದಾರೆ.

ಇದನ್ನೂ ಓದಿ:ಏಕನಾಥ್ ಶಿಂದೆ ಮುಂದಿರುವ ಆಯ್ಕೆಗಳೇನು? ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಾ ಹೊಸ ಸರ್ಕಾರ?

ABOUT THE AUTHOR

...view details