ಗಾಂಧಿನಗರ(ಗುಜರಾತ್):ಶಾಲೆಯಲ್ಲಿ ನೀಡಿರುವ ಹೋಮ್ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಮಗನ ಮೇಲೆ ನಿವೃತ್ತ ಸೇನಾಧಿಕಾರಿ ಗುಂಡು ಹಾರಿಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಓದುವ ಬದಲಾಗಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡ್ತಿದ್ದರಿಂದ ರೋಸಿ ಹೋಗಿರುವ ತಂದೆ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ಹೇಳಲಾಗ್ತಿದೆ. ಕಳೆದ ಸೋಮವಾರ ಈ ಘಟನೆ ನಡೆದಿದೆ.
ನಿವೃತ್ತ ಸೇನಾಧಿಕಾರಿ ಧರ್ಮೇಂದ್ರ ಓಂಪ್ರಕಾಶ್ ಕಾಮ್ರೇಜ್ವಾವ್ನಲ್ಲಿ ವಾಸವಾಗಿದ್ದಾರೆ. ಇವರ ಮಗ 9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ಅಧ್ಯಯನ ಮಾಡುವ ಬದಲು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದನು. ಇದರಿಂದ ಮಗನ ಮೇಲೆ ಗದರಿದ್ದಾನೆ. ತಂದೆ ಗದರಿಸಿದ್ದಕ್ಕಾಗಿ ಕೋಪಗೊಂಡಿರುವ ಮಗ ವೈಪರ್ನಿಂದ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡಿರುವ ತಂದೆ ಲೈಸನ್ಸ್ ಆಧಾರಿಕ ರಿವಾಲ್ವರ್ನಿಂದ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಹೀಗಾಗಿ, ಆತನ ಬಲಗೈ ಗಾಯಗೊಂಡಿದೆ. ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂಲತಃ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯವರಾದ ನಿವೃತ್ತ ಸೇನಾಧಿಕಾರಿ ಧರ್ಮೇಂದ್ರ ಓಂಪ್ರಕಾಶ್ ಸದ್ಯ ತಮ್ಮ ಪತ್ನಿ ಸಂಗೀತಾಬೆನ್, ಮಗ ಹಾಗೂ ಮಗಳೊಂದಿಗೆ ಗುಜರಾತ್ನಲ್ಲಿ ವಾಸವಾಗಿದ್ದಾರೆ. ನಿವೃತ್ತ ಸೇನಾಧಿಕಾರಿ ಸದ್ಯ ಸೂರತ್ನಲ್ಲಿ ಪಿಯೂಷ್ಭಾಯ್ ಎಂಬುವವರ ಅಂಗರಕ್ಷಕನಾಗಿ ಕೆಲಸ ಮಾಡ್ತಿದ್ದಾನೆ. ಕಳೆದ ಸೋಮವಾರ ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಮಗ ಮೊಬೈಲ್ ನೋಡುತ್ತ ಕುಳಿತಿದ್ದನು. ಈ ವಿಚಾರದಲ್ಲಿ ಗದರಿಸಿದ್ದು, ಮೊಬೈಲ್ ಫೋನ್ ಹೆಚ್ಚು ಬಳಸುವ ಬದಲು, ಓದಿನ ಕಡೆ ಗಮನ ಹರಿಸುವಂತೆ ಹೇಳಿದ್ದಾರೆ.