ಪುದುಚೇರಿ: ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಜೀವಭಯದಲ್ಲೇ ನದಿ ದಾಟಿ ಹೋಗುತ್ತಿರುವ ಘಟನೆ ಪುದುಚೇರಿಯ ಕುರುವಿನತ್ತಂ ಗ್ರಾಮದಲ್ಲಿ ಕಂಡುಬಂದಿದೆ. ಇತ್ತೀಚೆಗೆ ನಿಧನರಾದ ಗ್ರಾಮದ ವೃದ್ಧರೊಬ್ಬರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಕುರುವಿನತ್ತಂ ಗ್ರಾಮಸ್ಥರು ಪರದಾಡಿದ್ದಾರೆ.
ಸೇತುವೆ ಕೊರತೆ: ಭಯದಲ್ಲೇ ಮೃತದೇಹ ಹೊತ್ತು ನದಿ ದಾಟಿದ ಗ್ರಾಮಸ್ಥರು - Puducherry villagers face trouble in burying the dead body
ಪುದುಚೇರಿಯ ಕುರುವಿನತ್ತಂ ಗ್ರಾಮಸ್ಥರು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಸ್ಮಶಾನ ಭೂಮಿ ತಲುಪಲು ನದಿ ದಾಟಿ ಹೋಗಬೇಕು. ಆದರೆ, ಸೇತುವೆ ಇಲ್ಲದ ಹಿನ್ನೆಲೆ ನದಿ ಮಧ್ಯೆಯೇ ಮೃತದೇಹ ಹೊತ್ತು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
dead body
ಸ್ಮಶಾನ ಭೂಮಿ ತಲುಪಲು ನದಿ ದಾಟಿ ಸಾಗಬೇಕು. ಆದರೆ ಯಾವುದೇ ಸೇತುವೆ ಇಲ್ಲದ ಹಿನ್ನೆಲೆ ಮೃತದೇಹ ಹೊತ್ತು ತೆನ್ಪೆನ್ನೈ ನದಿಯಲ್ಲೇ ಗ್ರಾಮಸ್ಥರು ಸರ್ಕಸ್ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ತೆನ್ಪೆನ್ನೈ ನದಿಗೆ ಸೇತುವೆ ನಿರ್ಮಿಸುವಂತೆ ನಾವು ಮನವಿ ಮಾಡುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
Last Updated : Nov 17, 2021, 10:15 AM IST