ಆಂಧ್ರ ಪ್ರದೇಶ: ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಕೊರೊನಾ ಚಿಕಿತ್ಸೆಗಾಗಿ ಆನಂದಯ್ಯ ಅವರು ನೀಡುತ್ತಿದ್ದ ಆಯುರ್ವೇದ ಔಷಧದ ಕಾರ್ಯಕ್ಷಮತೆ ಕುರಿತು ಸಂಶೋಧನೆ ಪ್ರಾರಂಭವಾಗಿದೆ.
ರಾಷ್ಟ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (ಸಿಸಿಆರ್‌ಎಎಸ್) ಔಷಧಿಯನ್ನು 4 ಹಂತಗಳಲ್ಲಿ ವಿಶ್ಲೇಷಿಸಲಿದೆ. ಮೊದಲ ಹಂತದ ಭಾಗವಾಗಿ ಔಷಧಿ ತೆಗೆದುಕೊಂಡವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ.
ಔಷಧದ ಕಾರ್ಯಕ್ಷಮತೆಯ ಸಂಶೋಧನೆ ಸಿಸಿಆರ್‌ಎಎಸ್ ಈ ಜವಾಬ್ದಾರಿಯನ್ನು ವಿಜಯವಾಡದ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಕೇಂದ್ರ ಮತ್ತು ತಿರುಪತಿಯ ಎಸ್‌ವಿ ಆಯುರ್ವೇದ ಆಸ್ಪತ್ರೆಗೆ ಹಸ್ತಾಂತರಿಸಿದೆ.
ವಿಜಯವಾಡ ಪ್ರಾದೇಶಿಕ ಸಂಶೋಧನಾ ಕೇಂದ್ರ ಹಾಗೂ ಎಸ್‌ವಿ ಆಯುರ್ವೇದ ಆಸ್ಪತ್ರೆಯ ವೈದ್ಯರು ಔಷಧಿ ತೆಗೆದುಕೊಂಡ 500 ಜನರನ್ನು ಕರೆದು ಅವರ ವಿವರಗಳನ್ನು ತಿಳಿದುಕೊಳ್ಳಲಿದ್ದಾರೆ. ಈಗಾಗಲೇ ಔಷಧಿ ತೆಗೆದುಕೊಂಡವರ ಫೋನ್ ನಂಬರ್ಗಳನ್ನು ಸಂಗ್ರಹಿಸಲಾಗುತ್ತಿದೆ.
ಕೊರೊನಾ ಪರೀಕ್ಷಾ ವರದಿ ಹಾಗೂ ಔಷಧ ಸೇವನೆಯ ನಂತರದ ಸ್ಥಿತಿಯನ್ನು ತನಿಖೆ ಮಾಡಲಾಗುತ್ತದೆ. ಪ್ರಸ್ತುತ ವೈದ್ಯಕೀಯ ವರದಿ ಕುರಿತು ವಿವರಗಳನ್ನು ಸಂಗ್ರಹಿಸಲಾಗುವುದು. ಎರಡು ದಿನಗಳಲ್ಲಿ ಇದನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ ಆಯುರ್ವೇದ ವೈದ್ಯರಿಗೆ ನಿರ್ದೇಶನ ನೀಡಿದೆ.
ಪೂರ್ಣ ತನಿಖೆಗಾಗಿ 4 ರಿಂದ 5 ವಾರಗಳು ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ.