ಕರ್ನಾಟಕ

karnataka

ETV Bharat / bharat

2017 ರಲ್ಲಿ ಐಸಿಸ್​ನಿಂದ ರಕ್ಷಿಸಿದ್ದ ಯುವಕ ಮತ್ತೆ ಭಯೋತ್ಪಾದನಾ ಬಲೆಯೊಳಗೆ!? - ಐಸಿಸ್

ಅಧಿಕಾರಿಗಳ ಪ್ರಕಾರ ಪರ್ವೇಜ್, ಅಫ್ಘಾನಿಸ್ತಾನದಲ್ಲಿರುವ ಐಸಿಸ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿಂದ ದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕಾರ್ಯಸೂಚಿಯನ್ನು ಮುಂದುವರಿಸುವ ಸೂಚನೆಗಳನ್ನು ಪಡೆಯುತ್ತಿದ್ದ. 2017ರಲ್ಲಿ ಕಾಲೇಜಿಗೆ ಸೇರಲು ಬಯಸಿದ್ದ ತನ್ನ ತಂದೆಯೊಂದಿಗೆ ಜಗಳವಾಡಿದ ನಂತರ ಪರ್ವೇಜ್ ಅವರು ಮನೆ ಬಿಟ್ಟು ಹೋಗಿದ್ದರು..

ಐಸಿಸ್​
ಐಸಿಸ್​

By

Published : Oct 17, 2021, 8:46 PM IST

ಶ್ರೀನಗರ(ಜಮ್ಮು-ಕಾಶ್ಮೀರ): 2017ರಲ್ಲಿ ಟರ್ಕಿಯಿಂದ ನಿಷೇಧಿತ ಐಸಿಸ್ ಭಯೋತ್ಪಾದಕ ಗುಂಪಿನಿಂದ ರಕ್ಷಿಸಲ್ಪಿಟ್ಟಿದ್ದ ಅಫ್ಯಾನ್ ಪರ್ವೇಜ್​, ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕ ಘಟಕದ ಸ್ಲೀಪರ್ ಸೆಲ್​ ಆಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

2017ರಲ್ಲಿ ಖನ್ಶಾರ್​ನ ಪೇಟೆ ನಿವಾಸಿ ಪರ್ವೇಜ್​(ಆಗ 21 ವರ್ಷ) ಐಸಿಸ್​ ಗುಂಪು ಸೇರಿದ್ದ. ಈ ವೇಳೆ ಆತನ ಪೋಷಕರು, ನನ್ನ ಮಗನನ್ನು ಕರೆತನ್ನಿ ಎಂದು ಜಮ್ಮು-ಕಾಶ್ಮೀರದ ಪೊಲೀಸರಿಗೆ ಮನವಿ ಮಾಡಿದ್ದರು.

ಮಾನವೀಯತೆ ಆಧಾರದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಪರ್ವೇಜ್​ನನ್ನು ಅಂಕಾರಾದಿಂದ ರಕ್ಷಿಸಿ ಕರೆ ತಂದರು. ಬಳಿಕ ಆತ ತನ್ನ ಪಾಡಿಗೆ ತಾನಿದ್ದ. ಆದರೆ, ಇತ್ತೀಚೆಗೆ ಪರ್ವೇಜ್​​ ( ಈಗ 25 ವರ್ಷ) ನಿಷೇಧಿತ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

ಗುಪ್ತಚರ ಸಂಸ್ಥೆಗಳು ಕಳೆದ ವರ್ಷ ಕಾಶ್ಮೀರದ ಅಹ್ಮದ್ ನಗರದ ಭಯೋತ್ಪಾದಕ ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಐಸಿಸ್ ಪ್ರಚಾರವನ್ನು ಬೆಂಬಲಿಸುವ 'ವಾಯ್ಸ್ ಆಫ್ ಹಿಂದ್' ಎಂಬ ವೆಬ್ ನಿಯತಕಾಲಿಕೆಯಲ್ಲಿ ಧ್ವನಿ ಮಾದರಿ ಮತ್ತು ಬರಹಗಳನ್ನು ಗಮನಿಸಿದಾಗ ಪರ್ವೇಜ್ ವಿರುದ್ಧ ಅನುಮಾನಗಳು ಮತ್ತಷ್ಟು ಹೆಚ್ಚಾದವು.

ಈ ಹಿನ್ನೆಲೆ ತನಿಖೆಯನ್ನು ತೀವ್ರಗೊಳಿಸಿದಾಗ, ಆತ ವರ್ಚುವಲ್ ಪ್ರೈವೇಟ್ ನೆಟ್​ವರ್ಕ್​​ ಬಳಸುತ್ತಿದ್ದ ಎನ್ನಲಾಗಿದೆ. ಇದರಲ್ಲಿ ವಿಡಿಯೋ ತುಣುಕೊಂದನ್ನು ಅಪ್​ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ, ಭದ್ರತಾ ಏಜೆನ್ಸಿ ಆತನನ್ನು ವಶಕ್ಕೆ ಪಡೆದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳು ಒದಗಿಸಿದ ಗುಪ್ತಚರ ಮಾಹಿತಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ಪರ್ವೇಜ್ ಗುರುತಿಸಿದ ತೌಹೀದ್ ಲತೀಫ್ ಮತ್ತು ಸುಹೇಲ್ ಅಹ್ಮದ್ ಎಂಬುವರನ್ನು ಬಂಧಿಸಲಾಯಿತು. ಪರ್ವೇಜ್​​ ಐಸಿಸ್​​ ಸಂಘಟನೆಯ ಆಪರೇಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ, ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಅಧಿಕಾರಿಗಳ ಪ್ರಕಾರ ಪರ್ವೇಜ್, ಅಫ್ಘಾನಿಸ್ತಾನದಲ್ಲಿರುವ ಐಸಿಸ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿಂದ ದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕಾರ್ಯಸೂಚಿಯನ್ನು ಮುಂದುವರಿಸುವ ಸೂಚನೆಗಳನ್ನು ಪಡೆಯುತ್ತಿದ್ದ. 2017ರಲ್ಲಿ ಕಾಲೇಜಿಗೆ ಸೇರಲು ಬಯಸಿದ್ದ ತನ್ನ ತಂದೆಯೊಂದಿಗೆ ಜಗಳವಾಡಿದ ನಂತರ ಪರ್ವೇಜ್ ಅವರು ಮನೆ ಬಿಟ್ಟು ಹೋಗಿದ್ದರು.

ಜತೆಗೆ ಧಾರ್ಮಿಕ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವರ್ಷದ ಮಾರ್ಚ್‌ನಲ್ಲಿ ಇರಾನ್‌ಗೆ ತೆರಳಿದ್ದ ಪರ್ವೇಜ್​, ಅಲ್ಲಿಂದ ಏಪ್ರಿಲ್ 9ರಂದು ದೆಹಲಿಗೆ ಹಿಂದಿರುಗುವ ವೇಳೆಗೆ ಯುರೋಪಿನಲ್ಲಿ ಧಾರ್ಮಿಕ ಅಧ್ಯಯನದ ಮಾರ್ಗಗಳನ್ನು ಅನ್ವೇಷಿಸಿದ್ದ. ಬಳಿಕ ಕುಟುಂಬಸ್ಥರು, ಆತ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ದೂರನ್ನಾಧರಿಸಿದ ನಂತರ ಪೊಲೀಸರು ಆತನ ಪತ್ತೆಗಾಗಿ ತನಿಖೆ ಆರಂಭಿಸಿದರು. ಜತೆಗೆ ಇರಾನಿನಲ್ಲಿದ್ದ ಆತನ ಸಹವರ್ತಿಗಳನ್ನೂ ಸಂಪರ್ಕಿಸಿದ್ರು. ಆಗ, ಅವರು ಅಂಕಾರಾಗೆ ತೆರಳಿರುವುದು ಬೆಳಕಿಗೆ ಬಂದಿತು. ನಮ್ಮ ದೇಶದ ಅಧಿಕಾರಿಗಳು ಅಂಕಾರಾದ ಅಧಿಕಾರಿಗಳನ್ನ ಸಂಪರ್ಕಿಸಿ, ಟರ್ಕಿಶ್ ರಾಜಧಾನಿಯಿಂದ ಪರ್ವೇಜ್​ರನ್ನು ಕರೆ ತಂದರು. ಮೇ 25, 2017ರಂದು ಟರ್ಕಿಶ್ ಏರ್​ಲೈನ್ಸ್​ ವಿಮಾನದಿಂದ ಆತನನ್ನು ಭಾರತಕ್ಕೆ ಕಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕುಲ್ಗಾಂನಲ್ಲಿ ಉಗ್ರರ ಅಟ್ಟಹಾಸ.. ಇಬ್ಬರು ಅಪರಿಚಿತರ ಹತ್ಯೆ, ಓರ್ವನ ಸ್ಥಿತಿ ಗಂಭೀರ..

ABOUT THE AUTHOR

...view details