ಕರ್ನಾಟಕ

karnataka

ETV Bharat / bharat

ಅಮರನಾಥ ಮೇಘಸ್ಫೋಟ ಸಾವಿನ ಸಂಖ್ಯೆ 17ಕ್ಕೆ ಏರಿಕೆ: 123 ಯಾತ್ರಿಕರನ್ನು ರಕ್ಷಿಸಲಾಗಿದೆ ಎಂದ ಐಎಎಫ್​ - ಅಮರನಾಥ ಮೇಘಸ್ಫೋಟ

ಅಮರನಾಥ ಮೇಘಸ್ಫೋಟ ದುರಂತದ ನಂತರ ರಕ್ಷಣಾ ಕಾರ್ಯಾಚರಣೆಯಲ್ಲಿ 123 ಜನರನ್ನು ಸ್ಥಳಾಂತರಿಸಲಾಗಿದೆ. 29 ಟನ್ ಪರಿಹಾರ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ಐಎಎಫ್ ಸೋಮವಾರ ತಿಳಿಸಿದೆ. ಇದೇ ವೇಳೆ ಅಮರನಾಥ ಯಾತ್ರೆಯನ್ನು ಮರು ಆರಂಭಿಸಲಾಗಿದೆ.

ಐಎಎಫ್​
ಐಎಎಫ್​

By

Published : Jul 11, 2022, 8:45 PM IST

ಶ್ರೀನಗರ: ಭಾರತೀಯ ವಾಯುಪಡೆ (ಐಎಎಫ್) ದೇಗುಲ, ಗುಹೆ ಮತ್ತು ಪಂಜತರ್ನಿಯಿಂದ 123 ಜನರನ್ನು ಸ್ಥಳಾಂತರಿಸಿದೆ. ಅಲ್ಲದೇ 29 ಟನ್ ಪರಿಹಾರ ಮತ್ತು ರಕ್ಷಣಾ ಸಾಮಗ್ರಿಗಳನ್ನು ಪವಿತ್ರ ಗುಹೆಗೆ ಒದಗಿಸಲಾಗಿದೆ ಎಂದು ಐಎಎಫ್ ಉನ್ನತ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Mi-17 V5 ಮತ್ತು ಚೀಟಲ್ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಸ್ಥಳಾಂತರ ಪ್ರಕ್ರಿಯೆಯನ್ನು ನಡೆಸಲಾಗಿದೆ. ಐಎಎಫ್​​ ಚಾಪರ್​ಗಳು 20 ಎನ್​ಡಿಆರ್​ಎಫ್​​ ಸಿಬ್ಬಂದಿ ಮತ್ತು ಆರು ನಾಯಿಗಳನ್ನು ಏರ್​ಲಿಫ್ಟ್​ ಮಾಡಿದ್ದಾರೆ. ಇವು ಅವಶೇಷಗಳಡಿಯಲ್ಲಿ ಸಿಲುಕಿರುವ ನಾಪತ್ತೆಯಾದ ಜನರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು ಎಂದು ಏರ್ ಕಮೋಡೋರ್ ಪಂಕಜ್ ಮಿತ್ತಲ್ ಹೇಳಿದ್ದಾರೆ.

ಇದನ್ನೂ ಓದಿ:ಜನಸಂಖ್ಯೆ ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿ : ಜನಸಂಖ್ಯೆ ಕುಸಿತದ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಆತಂಕ!

ಚೀಟಲ್ ಹೆಲಿಕಾಪ್ಟರ್‌ಗಳು 45 ವಿಹಾರ ನೌಕೆಗಳನ್ನು ಹಾರಿಸಿ, ಐದು ಎನ್‌ಡಿಆರ್‌ಎಫ್, ಸೇನಾ ಸಿಬ್ಬಂದಿ, 3.5 ಟನ್ ಪರಿಹಾರ ಸಾಮಗ್ರಿಗಳು ಮತ್ತು ಪವಿತ್ರ ಗುಹೆಯಿಂದ 48 ಜನರನ್ನು ಸ್ಥಳಾಂತರಿಸಿವೆ ಎಂದು ಅಧಿಕಾರಿ ಹೇಳಿದರು. ಗುಹೆಯಲ್ಲಿ ಈಗಾಗಲೇ ರಕ್ಷಣಾ ಕಾರ್ಯಾಚರಣೆಯ ಪ್ರಮುಖ ಭಾಗ ಪೂರ್ಣಗೊಂಡಿದೆ. ಹವಾಮಾನ ವೈಪರೀತ್ಯದ ನಡುವೆಯೂ ಛಲ ಬಿಡದೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದರು.

ಇದೇ ವೇಳೆ ಮೇಘಸ್ಪೋಟದಿಂದ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆ ಆಗಿದೆ. ಮತ್ತೊಂದು ಕಡೆ ಅಮರನಾಥ ಯಾತ್ರೆಗೆ ಮರು ಚಾಲನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details