ಕರ್ನಾಟಕ

karnataka

By

Published : Jul 5, 2023, 6:59 PM IST

ETV Bharat / bharat

ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್​ಡಿ ಕಡ್ಡಾಯವಲ್ಲ: NET/ SET/ SLET ಪಾಸ್​ ಆಗಿದ್ದರೆ ಸಾಕು..!

ಯುಜಿಸಿ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್​ಡಿ ಕಡ್ಡಾಯವಲ್ಲ ಎಂದು ಟ್ವಿಟರ್​ ಮೂಲಕ ತಿಳಿಸಿದ್ದಾರೆ.

requirement-of-phd-has-been-removed-for-assistant-professor-in-university-in-new-guidelines-of-ugc
ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್​ಡಿ ಕಡ್ಡಾಯವಲ್ಲ: NET/ SET/ SLET ಪಾಸ್​ ಆಗಿದ್ದರೆ ಸಾಕು..

ನವದೆಹಲಿ:ಪಿಹೆಚ್​ಡಿ ಪೂರ್ಣಗೊಳಿಸದೇ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈಗ ನೆಟ್, ಎಸ್ಇಟಿ , ಎಸ್ಎಲ್ಇಟಿ ಪರೀಕ್ಷೆ ತೇರ್ಗಡೆಯಾಗಿದ್ದರೆ ಸಹಾಯಕ ಪ್ರಾಧ್ಯಾಪಕರಾಗಲು ಅಭ್ಯರ್ಥಿಗಳು ಅರ್ಹತೆಯನ್ನು ಪಡೆಯಬಹುದಾಗಿದೆ. ಯುಜಿಸಿ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ದೇಶದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಪಿಹೆಚ್​ಡಿ ಕಡ್ಡಾಯ ಎಂಬ ನಿಯಮವನ್ನು ಈಗ ರದ್ದುಪಡಿಸಲಾಗಿದೆ.

ಯುಜಿಸಿ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಅವರು ಈ ಕುರಿತು ಟ್ವಿಟರ್‌ನಲ್ಲಿ ಸುತ್ತೋಲೆ ಪ್ರತಿಯನ್ನು ಪೋಸ್ಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜುಲೈ 1 ರಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಪಿಎಚ್‌ಡಿ ಐಚ್ಛಿಕವಾಗಿರುತ್ತದೆ ಎಂದು ಹೇಳಿದ್ದಾರೆ. NET/SET/SLET ಪರೀಕ್ಷೆಯನ್ನು ತೇರ್ಗಡೆಯಾಗಿರವುದು ಸಹಾಯಕ ಪ್ರಾಧ್ಯಾಪಕರಾಗಲು ಕನಿಷ್ಠ ಮತ್ತು ಕಡ್ಡಾಯ ಅರ್ಹತೆಯಾಗಿದೆ. ಅಂದರೆ, ಈ ಅರ್ಹತೆಯನ್ನು ಹೊಂದಿರುವವರು ಸಹಾಯಕ ಪ್ರಾಧ್ಯಾಪಕರಾಗಲು ಈಗ ಸಾಧ್ಯವಾಗುತ್ತದೆ.

ಯುಜಿಸಿ ಸುತ್ತೋಲೆ

ಸಹಾಯಕ ಪ್ರಾಧ್ಯಾಪಕ ಮತ್ತು ಡಿಯುಟಿಎ ಕಾರ್ಯಕಾರಿ ಸಮಿತಿಯ ಸದಸ್ಯ ಆನಂದ್ ಪ್ರಕಾಶ್ ಮಾತನಾಡಿ, ಈ ಹಿಂದೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಪಿಹೆಚ್​ಡಿ ಪದವಿ ಕಡ್ಡಾಯವಾಗಿರಲಿಲ್ಲ. ಆದರೆ, 2021 ರಲ್ಲಿ, ಯುಜಿಸಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಲು ಪಿಹೆಚ್​ಡಿ ಕಡ್ಡಾಯಗೊಳಿಸುವ ತಿದ್ದುಪಡಿಯನ್ನು ಮಾಡಿತ್ತು. ಕೋವಿಡ್ ಸಮಯದಲ್ಲಿ, ಯುಜಿಸಿಯು ಪಿಎಚ್‌ಡಿಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಗೆ ಎರಡು ವರ್ಷಗಳ ಸಡಿಲಿಕೆ ನೀಡಿತ್ತು. ಈಗ NET/SLET/SET ಇಲ್ಲದ ಮತ್ತು ಪಿಎಚ್‌ಡಿ ಪದವಿ ಪಡೆದಿರುವ ಶಿಕ್ಷಕರು ಅಥವಾ ಅಭ್ಯರ್ಥಿಗಳಿಗೆ ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಲಾಂಚ್ ವೆಹಿಕಲ್​ನೊಂದಿಗೆ ಪೇಲೋಡ್ ಜೋಡಣೆ: ಜು.13 ರಂದು Chandrayaan-3 ಉಡಾವಣೆ ಸಾಧ್ಯತೆ

ಭಾರತದಲ್ಲಿ ಈ ಉದ್ಯೋಗಗಳಿಗೆ ಭಾರಿ ಡಿಮ್ಯಾಂಡ್:ಕೋವಿಡ್​ ಸಮಯದಲ್ಲಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಇದಾಗಿ ಮೂರು ವರ್ಷಗಳ ಬಳಿಕ ನಿಧಾನವಾಗಿ ಉದ್ಯೋಗ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಯುವಜನತೆಗೆ ಹೊಸ ಹೊಸ ಅವಕಾಶಗಳು ಲಭ್ಯವಾಗುತ್ತಿವೆ. ಕೋವಿಡೋತ್ತರ ಕಾಲದಲ್ಲಿ ಸಂಸ್ಥೆಗಳಲ್ಲಿ ಹುದ್ದೆಗಳ ಸ್ವರೂಪವೂ ಕೊಂಚ ಬದಲಾವಣೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಯುವ ಜನತೆ ಕೌಶಲ್ಯ ಹೊಂದಬೇಕಿದೆ. ಸದ್ಯ ಮಾರುಕಟ್ಟೆಯಲ್ಲಿ ಯಾವ ಕ್ಷೇತ್ರದಲ್ಲಿ ಉದ್ಯೋಗ ಬೇಡಿಕೆ ಇದೆ ಎಂಬ ಮಾಹಿತಿಯನ್ನು ವೃತ್ತಿಪರ ನೆಟ್​ವರ್ಕಿಂಗ್​ ಫ್ಲಾಟ್​ಫಾರ್ಮ್​ ಆಗಿರುವ 'ಲಿಂಕ್ಡಿನ್'​ ಹಂಚಿಕೊಂಡಿದೆ.

ಕೋವಿಡ್​ ಬಳಿಕ ಸವಾಲುಗಳನ್ನು ಎದುರಿಸುವಂತಹ ರಿಸ್ಕ್​​ ಕನ್ಸ್​ಲ್ಟೆಂಟ್​, ಇನ್ವೆಸ್ಟ್​​ ಮ್ಯಾನೇಜರ್​ ಮತ್ತು ಫೈನಾನ್ಸ್​ ಅಡ್ಮಿನಿಸ್ಟ್ರೇಷನ್​ ಹುದ್ದೆಗಳು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಹೆಚ್ಚು ಬೇಡಿಕೆ ಹೊಂದಿವೆ. ಪದವೀಧರ ಅಭ್ಯರ್ಥಿಗಳಿಗೆ ಇವು ಅತ್ಯಂತ ಸೂಕ್ತ ಹುದ್ದೆಗಳಾಗಿ ರೂಪುಗೊಂಡಿವೆ ಎಂದು ವರದಿ ಹೇಳುತ್ತದೆ.

ಇದರ ಜೊತೆಗೆ ವೃತ್ತಿಯ ಆರಂಭದಲ್ಲೇ ಅನಾಲಿಟಿಕ್ಸ್​ ಮತ್ತು ಜಾವಾ ಸ್ಕ್ರಿಪ್ಟ್​ ಕಲಿಕೆ ಅವಶ್ಯವಾಗಿದ್ದು, ಇದು ಕೂಡಾ ಬಹುಬೇಡಿಕೆ ಹೊಂದಿರುವ ಪ್ರಮುಖ ಕೌಶಲ್ಯ. ಎಂಬಿಎ ಪದವೀಧರರು ಟೆಕ್ನಾಲಜಿ ಅಸೋಸಿಯೇಟ್​, ಕ್ಯಾಟಲಾಗ್​ ಸ್ಪೆಷಲಿಸ್ಟ್​ ಮತ್ತು ಬ್ಯುಸಿನೆಸ್​ ಇಂಟಿಗ್ರೇಷನ್​ ಅನಾಲಿಸ್ಟ್​ನಂತಹ ಹುದ್ದೆಗಳ ಅವಕಾಶ ದಕ್ಕಿಸಿಕೊಳ್ಳಬಹುದು. ಪದವಿ ಇಲ್ಲ ಎನ್ನುವವರಿಗೂ ಕೂಡ ಭರಪೂರ ಅವಕಾಶಗಳಿದ್ದು, ಪ್ಲೇಸ್​ಮೆಟ್​ ಕೊರ್ಡಿನೇಟರ್​, ಯೂಸರ್​ ಇಂಟರ್​ಫೇಸ್​ ಡಿಸೈನರ್​ ಮತ್ತು ಅಪ್ಲಿಕೇಷನ್​ ಇಂಜಿನಿಯರ್‌ನಂತಹ ಹುದ್ದೆಗಳು ಬೇಡಿಕೆ ಪಡೆದಿವೆ ಎಂದು ವರದಿ ತಿಳಿಸಿದೆ.

ABOUT THE AUTHOR

...view details