ಮುಂಬೈ, ಮಹಾರಾಷ್ಟ್ರ: ಖ್ಯಾತ ಡೆವಲಪರ್ ಪರಸಭಾಯ್ ಪೋರ್ವಾಲ್ ಇಂದು ಬೆಳಗ್ಗೆ 7 ಗಂಟೆಗೆ 24 ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
24ನೇ ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಉದ್ಯಮಿ ಆತ್ಮಹತ್ಯೆ - ಕಲಾಚೌಕಿ ಪ್ರದೇಶದ ಶಾಂತಿಕಮಲ್ ಟವರ್
ಖ್ಯಾತ ಉದ್ಯಮಿಯೊಬ್ಬರು 24 ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
24 ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಉದ್ಯಮಿ ಆತ್ಮಹತ್ಯೆ
ಪರಾಸಭಾಯ್ ಪೋರ್ವಾಲ್ ಅವರು ಕಲಾಚೌಕಿ ಪ್ರದೇಶದ ಶಾಂತಿಕಮಲ್ ಟವರ್‌ನಲ್ಲಿ ವಾಸಿಸುತ್ತಿದ್ದರು. ಈ ಟವರ್‌ನ ಮೇಲಿನ ಮೂರು ಮಹಡಿಗಳು ಪೋರ್ವಾಲ್ ಹೆಸರಿನಲ್ಲಿವೆ. ಆರ್ಥಿಕ ಸಮಸ್ಯೆ ಹಾಗೂ ಒತ್ತಡದಿಂದಾಗಿ ಕಟ್ಟಡದ 24ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪೋರ್ವಾಲ್ ಬರೆದಿರುವ ಡೆತ್ನೋಟ್ ಪೊಲೀಸರು ಪತ್ತೆ ಹಚ್ಚಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಓದಿ:ಅರೆ ನಗ್ನ ಫೋಟೋ ಹರಿಬಿಡುವುದಾಗಿ ಇನ್‌ಸ್ಟಾಗ್ರಾಮ್ ಯುವತಿಯಿಂದ ಬೆದರಿಕೆ: ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ