ತಿರುವನಂತಪುರಂ (ಕೇರಳ):ನನ್ನ ಪತ್ನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆದ ಬಳಿಕ ನನ್ನನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ದಿಂದ ಕಿತ್ತೊಗೆಯಲಾಗಿದೆ ಎಂದು ಸಿಪಿಎಂ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಿಪಿಎಂ, ಪಕ್ಷ-ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಇವರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದೆ.
'ಬಲವಂತದ ಮತಾಂತರ'
ನಾನು ಇಲ್ಲದ ವೇಳೆಯಲ್ಲಿ ಪಕ್ಷದ ಇಬ್ಬರು ವ್ಯಕ್ತಿಗಳು ನನ್ನ ಹೆಂಡತಿಯನ್ನು ಕರೆಯಿಸಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಬಲವಂತ ಮಾಡಿದ್ದಾರೆ. ಅವಳು ಜೂನ್ 9 ರಂದು ಮನೆಬಿಟ್ಟು ಹೋಗಿದ್ದು, ಕಾಣೆಯಾಗಿರುವ ಬಗ್ಗೆ ಸಿಪಿಎಂ ಮುಖಂಡರ ಬಳಿ ಹೇಳಿದರೆ ಯಾರೂ ಸಹಾಯಕ್ಕೆ ಬಂದಿಲ್ಲ. ಅಲ್ಲದೇ ನನ್ನನ್ನು ದೂರು ದಾಖಲಿಸಲು ಪೊಲೀಸ್ ಠಾಣೆಗೂ ಹೋಗಲು ಬಿಟ್ಟಿಲ್ಲ. ನನ್ನನ್ನು ಪಕ್ಷದಿಂದ ತೆಗೆದು ಹಾಕಿರುವ ಬಗ್ಗೆ ಕೂಡ ಪಕ್ಷದ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಗೊತ್ತಾಯಿತು ಎಂದು ಮಲ್ಲಪುರಂ ಜಿಲ್ಲೆಯ ಸಿಪಿಎಂ ಸದಸ್ಯ ಪಿ ಟಿ ಗಿಲ್ಬರ್ಟ್ ಗಂಭೀರ ಆರೋಪ ಮಾಡಿದ್ದಾರೆ.