ಅಂಬಾಲ(ಹರಿಯಾಣ): ಭಾರತೀಯ ವಾಯುಪಡೆ (ಐಎಎಫ್) ತನ್ನ ಯುದ್ಧ ವಿಮಾನಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು, ಇದೇ ವೇಳೆ ಐಎಎಫ್ ವಾಯುನೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಮಕ್ಕಳು ರಿಮೋಟ್ ಹೆಲಿಕಾಪ್ಟರ್ಗಳನ್ನು ಆಟಿಕೆಗೆ ಬಳಸುತ್ತಿರುವುದು ಅಪಾಯವನ್ನುಂಟು ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಯುದ್ದ ವಿಮಾನಗಳಿಗೆ ಅಡ್ಡಿಯಾದ ಆಟಿಕೆ ಹೆಲಿಕಾಪ್ಟರ್: ಅಂಬಾಲ ವಾಯುನೆಲೆಗೆ ಮಕ್ಕಳ ಆಟಿಕಿಯದ್ದೇ ಟೆನ್ಶನ್ - ಯುದ್ದ ವಿಮಾನಗಳಿಗೆ ಹೆಲಿಕಾಪ್ಟರ್
ಅಂಬಾಲದ ಭಾರತೀಯ ವಾಯುಪಡೆ ಸಮೀಪದಲ್ಲಿ ಚಿಣ್ಣರು ಹೆಚ್ಚಾಗಿ ಆಟಿಕೆ ಹೆಲಿಕಾಪ್ಟರ್ಗಳನ್ನು ಬಳಸತೊಡಗಿದ್ದು, ಇದೀಗ ಐಎಎಫ್ ಅಧಿಕಾರಿಗಳಿಗೆ ಇದೊಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಇತ್ತೀಚಿನ ದಿನಗಳಲ್ಲಿ, ಕೆಲವು ಮಕ್ಕಳು ತಮ್ಮ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್‌ಗಳೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದು, ಐಎಎಫ್ ವಾಯುನೆಲೆ ಸುತ್ತಮುತ್ತಲಿನ ಹಲವು ಚಿಣ್ಣರು ಈ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್ನೊಂದಿಗೆ ಆಟವಾಡುತ್ತಿದ್ದಾರೆ. ಮಕ್ಕಳಿಗೆ ಇದರಿಂದಾಗಿ ಅತೀವ ಸಂತಸ ಉಂಟಾಗಲಿದೆ, ಆದರೆ, ರಫೆಲ್ ಜೆಟ್‌ಗಳ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ಇದು ಪರಿಣಾಮ ಬೀರಲಿದೆ ಎಂದು ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ನಡೆಸಿದ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.
ಇನ್ನು ಈ ಸಭೆ ಬಳಿಕ ಮಾತನಾಡಿದ ಮುನ್ಸಿಪಲ್ ಕಾರ್ಪೊರೇಶನ್ ಕಮಿಷನರ್ ಪಾರ್ತ್ ಗುಪ್ತಾ, ನಾವು ರಫೇಲ್ ಜೆಟ್‌ಗಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ವಾಯುನೆಲೆ ಬಳಿ ದೊಡ್ಡ ಮತ್ತು ಸಣ್ಣ ಪಕ್ಷಿಗಳ ಹಾರಾಟವನ್ನು ನಿಯಂತ್ರಿಸಲು ನಾವು ತಂಡಗಳನ್ನು ರಚಿಸಿದ್ದೇವೆ. ಅದಲ್ಲದೇ, ಇದೀಗ ಮಕ್ಕಳು ಆಟಿಕೆಗಾಗಿ ಬಳಸುವ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್ನಿಂದಾಗಿ ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಇದ್ದು, ಈ ಬಗ್ಗೆಯೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.