ಕರ್ನಾಟಕ

karnataka

ETV Bharat / bharat

ಅಂದು ಸಾವಿನ ದವಡೆಯಿಂದ ಪಾರಾದ ಜೋಸೆಫ್​, ಜೀವರಕ್ಷಕ 'ಆಕ್ಸಿಜನ್' ಶೋಧಿಸಿ ಇಂದಿಗೆ 247 ವರ್ಷವಾಯ್ತು! - ಜೋಸೆಫ್ ಪ್ರೀಸ್ಟ್‌ಲಿ ಆಕ್ಸಿಜನ್

ಧಾರ್ಮಿಕ ಅಂಧಶ್ರದ್ಧೆಯೇ ಮೇಲುಗೈ ಸಾಧಿಸಿದ್ದ ಫ್ರೆಂಚ್​ ಕ್ರಾಂತಿಯ ಯುಗವದು. ಧರ್ಮವನ್ನು ಪಲ್ಲಟಗೊಳಿಸಿ ವಿಜ್ಞಾನದ ಚಿಂತನೆಗಳನ್ನು ಸಂಶೋಧನೆಗಳ ಮೂಲಕ ಸಮಾಜದಲ್ಲಿ ಹರಿಬಿಟ್ಟು, ಸಂಪ್ರದಾಯವಾದಿಗಳ ಕೋಪಕ್ಕೆ ಗುರಿಯಾದ ಜೋಸೆಫ್ ಪ್ರೀಸ್ಟ್‌ಲಿ ಶತಮಾನಗಳು ಕಳೆದರೂ ಮರೆಯದ ಅನ್ವೇಷಣೆಗಳನ್ನು ಬಿಟ್ಟು ಹೋದ.

ಆಕ್ಸಿಜನ್
ಆಕ್ಸಿಜನ್

By

Published : Mar 24, 2021, 8:26 PM IST

ಅದೊಂದು ಮುಕ್ತ ಬೌದ್ಧಿಕತೆ ಹಾಗೂ ಕಾರ್ಯೋನ್ಮುಖತೆಯನ್ನು ನಾಶಪಡಿಸುವಂತಹ ವಿಷಕಾರಿ ಕಾಲಘಟ್ಟ. ಪ್ರಬುದ್ಧ ರಾಜಕೀಯ ವ್ಯವಸ್ಥೆ, ಮುಕ್ತ ವೈಜ್ಞಾನಿಕ ಮನಸ್ಸುಗಳು ಕಾರ್ಯನಿರ್ವಹಿಸಲು ಆಗದಂತಹ ಫ್ರೆಂಚ್ ಮಹಾಕ್ರಾಂತಿಯ ವೇಳೆ ಅಂದಿನ ಧಾರ್ಮಿಕ ನಂಬಿಕೆ ಹಾಗೂ ವೈಜ್ಞಾನಿಕ ಸತ್ಯಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಜೋಸೆಫ್ ಪ್ರೀಸ್ಟ್‌ಲಿ, ಬಹುದೊಡ್ಡ ದಾಳಿ ಎದುರಿಸಬೇಕಾಯಿತು. ಆತನ ಆಳ ಅಧ್ಯಯನದ ಸಿದ್ಧಾಂತ ಒಪ್ಪದ ದೊಡ್ಡ ಗುಂಪೊಂದು ಏಕಾಏಕಿ ಮನೆ ಮೇಲೆ ದಾಂಗುಡಿ ಇಟ್ಟುಬಿಟ್ಟಿತ್ತು. ಅರೆಕ್ಷಣ ತಬ್ಬಿಬ್ಬಾದ ಜೋಸೆಫ್​, ತನ್ನ ಕುಟುಂಬಸ್ಥರೊಂದಿಗೆ ಹುಟ್ಟಿದ ಊರು, ಬೆಳೆದ ದೇಶವನ್ನೇ ಬಿಟ್ಟು ಪೈಲಾಯನಗೈದ. ಅಂದು ಸಾವಿನ ದವಡೆಯಿಂದ ಪಾರಾದ ಜೋಸೆಫ್​ ಮುಂದೊಂದು ದಿನ ಮನುಕುಲಕ್ಕೆ ಬಹು ಉಪಕಾರಿಯಾದ ಜೀವರಕ್ಷಕ 'ಆಕ್ಸಿಜನ್​' ಶೋಧಿಸಿದ್ದ ಎಂಬುದನ್ನು ತಿಳಿಯದ ಹತ್ಯೆಯ ಸಂಚುಕೋರರಿಗೆ ನಾಚಿಕೆ ಆಗಿರಲಿಕ್ಕಿಲ್ಲ!.

ಧಾರ್ಮಿಕ ಅಂಧಶ್ರದ್ಧೆ ಮೇಲುಗೈ ಸಾಧಿಸಿದ್ದ ಫ್ರೆಂಚ್​ ಕ್ರಾಂತಿಯ ಯುಗವದು. ಧರ್ಮವನ್ನು ಪಲ್ಲಟಗೊಳಿಸಿ ವಿಜ್ಞಾನದ ಚಿಂತನೆಗಳನ್ನು ಸಂಶೋಧನೆಗಳ ಮೂಲಕ ಸಮಾಜದಲ್ಲಿ ಹರಿಬಿಟ್ಟು, ಸಂಪ್ರದಾಯವಾದಿಗಳ ಕೋಪಕ್ಕೆ ಗುರಿಯಾದ ಜೋಸೆಫ್ ಪ್ರೀಸ್ಟ್‌ಲಿ ಶತಮಾನಗಳು ಕಳೆದರೂ ಮರೆಯದ ಅನ್ವೇಷಣೆಗಳನ್ನು ಬಿಟ್ಟು ಹೋದ.

ಹತ್ತಿರ ಹತ್ತಿರ ಎರಡೂವರೆ ಶತಮಾನಗಳಷ್ಟು ವರ್ಷಗಳ ಹಿಂದೆ ಇದೇ ದಿನದಂದು ಜೋಸೆಫ್ ಪ್ರೀಸ್ಟ್‌ಲಿ ಆಕ್ಸಿಜನ್ ಕಂಡುಹಿಡಿದಿದ್ದರು. ಈ ದಿನಗಳಲ್ಲಿ ಗಾಳಿಯು ಅನಿಲದ ಅಂಶಗಳಿಂದ ಕೂಡಿದೆ ಎಂದು ನಾವು ಅರ್ಥೈಸಿಕೊಂಡಿದ್ದೇವೆ. ಆದರೆ, ಸುಮಾರು 2,500 ವರ್ಷಗಳ ಹಿಂದೆ ಪ್ರಾಚೀನ ಗ್ರೀಕರು ಭೂಮಿ, ಬೆಂಕಿ ಮತ್ತು ನೀರಿನ ಜೊತೆಗೆ ಗಾಳಿಯನ್ನು ಸೃಷ್ಟಿಯ ನಾಲ್ಕನೇ ಪ್ರಮುಖ ಅಂಶಗಳಲ್ಲಿ ಒಂದೆಂದು ಗುರುತಿಸಿದ್ದರು.

ಜೋಸೆಫ್ ಪ್ರೀಸ್ಟ್‌ಲಿ ಸಾಧನೆಯ ಪಥ...

ಆ ತಪ್ಪಾದ ಪರಿಕಲ್ಪನೆಯು 18ನೇ ಶತಮಾನದ ಉತ್ತರಾರ್ಧದವರೆಗೂ ಚಾಲ್ತಿಯಲ್ಲಿತ್ತು. ಪ್ರೀಸ್ಟ್‌ಲಿ ಹಲವು ಪ್ರಯೋಗಗಳನ್ನು ನಡೆಸಿದ ಮತ್ತು ಗಾಳಿಯು ಒಂದು ಪ್ರಾಥಮಿಕ ವಸ್ತುವಲ್ಲ. ಒಂದೊಂದು ಸಂಯೋಜನೆ ಅಥವಾ ಅನಿಲಗಳ ಮಿಶ್ರಣ ಎಂದು ಕಂಡುಹಿಡಿದ. ವಿವಿಧ ಪ್ರಯೋಗಗಳಿಂದ ಉತ್ಪತ್ತಿಯಾಗುವ ಅನಿಲಗಳನ್ನು ಸೆರೆಹಿಡಿಯುವ ಮೂಲಕ ವಿಭಿನ್ನ 'ಗಾಳಿಯ' ಗುಣಲಕ್ಷಣಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದ.

1733ರಲ್ಲಿ ಮಾರ್ಚ್ 24ರಂದು ಇಂಗ್ಲೆಂಡ್‌ನ ಬರ್ಸ್ಟಾಲ್ ಫೀಲ್ಡ್​ಹೆಡ್‌ನಲ್ಲಿ ಜನಿಸಿದ ಜೋಸೆಫ್ ಪ್ರೀಸ್ಟ್‌ಲಿ, ಚಿಕ್ಕ ವಯಸ್ಸಿನಿಂದಲೇ ಚತುರ. ಗಣಿತ, ತರ್ಕ, ಮೆಟಾಫಿಸಿಕ್ಸ್ ಮತ್ತು ನೈಸರ್ಗಿಕ ತತ್ವಶಾಸ್ತ್ರವನ್ನು ಕಲಿತ. ಬುದ್ಧಿವಂತ ಪ್ರೀಸ್ಟ್‌ಲಿ ಲ್ಯಾಟಿನ್, ಹೀಬ್ರೂ ಮತ್ತು ಗ್ರೀಕ್ ಸೇರಿದಂತೆ ಆರು ಅಧಿಕ ಭಾಷೆಗಳನ್ನು ಕರಗತ ಮಾಡಿಕೊಂಡ.

ಜೋಸೆಫ್ ಪ್ರೀಸ್ಟ್‌ಲಿ ಸಾಧನೆಯ ಪಥ...

ಆತ ಕಾರ್ಬೊನೇಟೆಡ್ ನೀರು ಮತ್ತು ರಬ್ಬರ್ / ಎರೇಸರ್ ಕಂಡುಹಿಡಿದ. ಒಂದು ಡಜನ್​ಗೂ ಅಧಿಕ ಪ್ರಮುಖ ರಾಸಾಯನಿಕ ಸಂಯುಕ್ತಗಳನ್ನು ಗುರುತಿಸಿದ. ವಿದ್ಯುಚ್ಛಕ್ತಿಯ ಬಗ್ಗೆ 'ದಿ ಹಿಸ್ಟರಿ ಆ್ಯಂಡ್​ ಪ್ರಸೆಂಟ್​ ಸ್ಟೇಟ್​ ಆಫ್​ ಎಲೆಕ್ಟ್ರಿಸಿಟ್' (ಇತಿಹಾಸ ಮತ್ತು ಪ್ರಸ್ತುತ ವಿದ್ಯುತ್ ಸ್ಥಿತಿಗತಿ) ಎಂಬ ಪೇಪರ್​ ಸಹ ಮಂಡಿಸಿದ್ದ. ಆತನ ಅಸಾಂಪ್ರದಾಯಿಕ ಧಾರ್ಮಿಕ ಬರಹಗಳು ಹಾಗೂ ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳಿಗೆ ನೀಡಿದ ಬೆಂಬಲವು ತನ್ನ ದೇಶವಾಸಿಗಳನ್ನು ಕೆರಳಿಸಿತ್ತು. ಇದರಿಂದಾಗಿ ಪ್ರೀಸ್ಟ್‌ಲಿ 1794ರಲ್ಲಿ ಇಂಗ್ಲೆಂಡ್‌ನಿಂದ ಪಲಾಯನಗೈದು, ಪೆನ್ಸಿಲ್ವೇನಿಯಾದಲ್ಲಿ ನೆಲೆಸಿ ತನ್ನ ಜೀವಿತದ ಅಂತ್ಯದ ತನಕ ಅಲ್ಲಿಯೇ ಸಂಶೋಧನೆ ಮುಂದುವರೆಸಿದ್ದ.

ಜೋಸೆಫ್ ಪ್ರೀಸ್ಟ್‌ಲಿ ಸಾಧನೆಯ ಪಥ...

ಪ್ರೀಸ್ಟ್‌ಲಿ ಹಲವು ದೈವತ್ವ, ತಾತ್ವಿಕ ಮತ್ತು ರಾಜಕೀಯ ಪ್ರಬಂಧಗಳನ್ನು ಬರೆದಿದ್ದಾರೆ. 'ರ್ಯಾಷನಲ್​ ಕ್ರಿಶ್ಚ್ಯಾನಿಟಿ' ಮತ್ತು 'ಲೈಸೆಜ್ ಫೇರ್ ಎಕನಾಮಿಕ್ಸ್' ಬಗೆಗಿನ ಆತನ ಸಿದ್ಧಾಂತಗಳಿಂದ ಇಂಗ್ಲಿಷ್ ಪತ್ರಿಕಾ ಮತ್ತು ಸರ್ಕಾರವನ್ನು ಕೋಪಗೊಳ್ಳುವಂತೆ ಮಾಡಿತ್ತು. ಆಕ್ರೋಶಗೊಂಡು ಕೆರಳಿದ ನೂರಾರು ಪ್ರತಿಭಟನಾಕಾರರು 1791ರಲ್ಲಿ ಪ್ರೀಸ್ಟ್‌ಲಿ ಮನೆಯ ಮೇಲೆ ದಾಳಿ ಮಾಡಿದ್ದರು. ಅದೃಷ್ಟವಶಾತ್ ಕುಟುಂಬ ಸದಸ್ಯರೊಂದಿಗೆ ದಾಳಿಯಿಂದ ತಪ್ಪಿಸಿಕೊಂಡ.

ಜಗತ್ತಿನ ದಿಕ್ಕೂ ಬದಲಿಸಿದ ಆಕ್ಸಿಜನ್ ಮತ್ತು ರಾಸಾಯನಿಕ ಅನ್ವೇಷಣೆ:

ಭೂಮಿ ಮೇಲಿನ ವಾತಾವರಣದಲ್ಲಿ ಸಕ್ರಿಯ ಘಟಕಾಂಶವಾಗಿರುವ (ಇನ್​​ಗ್ರೀಡಿಯಂಟ್​) ಆಮ್ಲಜನಕವನ್ನು ಕಂಡುಹಿಡಿದ ಜಗತ್ತಿನ ಮೊಟ್ಟ ಮೊದಲ ವ್ಯಕ್ತಿ ಪ್ರೀಸ್ಟ್‌ಲಿ. 1774ರಲ್ಲಿ ಜೋಸೆಫ್ ಪ್ರೀಸ್ಟ್‌ಲಿ ಆಮ್ಲಜನಕ ಕಂಡುಹಿಡಿದಾಗ, ಏಕೆ ಮತ್ತು ಹೇಗೆ ಎಂಬ ಹಳೆಯ ಸಿದ್ಧ ಸೂತ್ರದ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದ.

ಜೋಸೆಫ್ ಪ್ರೀಸ್ಟ್‌ಲಿ ಸಾಧನೆಯ ಪಥ...

1774ರಲ್ಲಿ ಅವಿರತ ಪ್ರಯೋಗಗಳ ಸರಣಿಯಲ್ಲಿ, ಪ್ರೀಸ್ಟ್‌ಲಿ ಗಾಳಿಯು ಒಂದು ಪ್ರಾಥಮಿಕ ವಸ್ತುವಲ್ಲ. ಆದರೆ ಅನಿಲಗಳ ಸಂಯೋಜನೆ ಅಥವಾ ಮಿಶ್ರಣವಾಗಿದೆ ಎಂಬುದನ್ನು ಕಂಡುಹಿಡಿದ. ಅವುಗಳಲ್ಲಿನ ಬಣ್ಣರಹಿತ ಮತ್ತು ಅತ್ಯಧಿಕ ಪ್ರತಿಕ್ರಿಯಾತ್ಮಕ ಅನಿಲವು 'ಡಿಫ್ಲೊಜಿಸ್ಟಿಕ್ ಏರ್​' (ಲೆಕ್ಕಿಸಲಾಗದು) ಎಂದು ಕರೆಯಲಾಗುತ್ತೆ ಎಂದ. ಇದಕ್ಕೆ ಮಹಾನ್ ಫ್ರೆಂಚ್ ರಸಾಯನಶಾಸ್ತ್ರಜ್ಞ ಆಂಟೊಯಿನ್ ಲಾವೊಸಿಯರ್ ತಕ್ಷಣವೇ 'ಆಕ್ಸಿಜೆನ್​' (ಆಮ್ಲಜನಕ) ಎಂಬ ಹೆಸರಿಟ್ಟ. ಗಾಳಿಯು 'ಸರಳವಾದ ಪ್ರಾಥಮಿಕ ವಸ್ತುವಾಗಿದ್ದು, ನಾಶಮಾಡಲು ಮತ್ತು ಬದಲಾಯಿಸಲೂ ಆಗದು' ಎಂದು ಬರೆದ.

ಜೋಸೆಫ್ ಪ್ರೀಸ್ಟ್‌ಲಿ ಸಾಧನೆಯ ಪಥ...

ಪ್ರೀಸ್ಟ್‌ಲಿ ಹಲವು ಹೊಸ ಅನಿಲಗಳನ್ನು ಪತ್ತೆಹಚ್ಚಿದ:

ಪ್ರೀಸ್ಟ್‌ಲಿಗೂ ಮುನ್ನ ಹಲವು ವಿಜ್ಞಾನಿಗಳು ಭೂಮಿಯ ಮೇಲಿನ ಗಾಳಿಯು ಇಂಗಾಲದ ಡೈಆಕ್ಸೈಡ್ ಮತ್ತು ಹೈಡ್ರೋಜನ್ ಮಾತ್ರವೇ ಒಳಗೊಂಡಿರುತ್ತದೆ ಎಂದೇ ಭಾವಿಸಿದ್ದರು. ನೈಟ್ರಿಕ್ ಆಕ್ಸೈಡ್, ಸಾರಜನಕ ಡೈಆಕ್ಸೈಡ್, ನೈಟ್ರಸ್ ಆಕ್ಸೈಡ್ (ನಗುವ ಅನಿಲ), ಹೈಡ್ರೋಜನ್ ಕ್ಲೋರೈಡ್, ಅಮೋನಿಯಾ, ಸಲ್ಫರ್ ಡೈಆಕ್ಸೈಡ್, ಸಿಲಿಕಾನ್ ಟೆಟ್ರಾಫ್ಲೋರೈಡ್, ಸಾರಜನಕ, ಆಮ್ಲಜನಕ, ಕಾರ್ಬನ್ ಮಾನಾಕ್ಸೈಡ್ ಸೇರಿ 10 ಅನಿಲಗಳನ್ನು ಪ್ರೀಸ್ಟ್‌ಲಿ ಈ ಪಟ್ಟಿಗೆ ಸೇರ್ಪಡೆಗೊಳಿಸಿದ್ದ. ಇಂತಹ ಬುದ್ಧಿವಂತಿಕೆಗೆ ಜಗತ್ತೇ ತಲೆದೂಗಿತ್ತು.

ಸೋಡಾ ನೀರು:

1767ರಲ್ಲಿ ಇಂಗ್ಲೆಂಡ್‌ನ ಲೀಡ್ಸ್​ನಲ್ಲಿ ಮದ್ಯದಂಗಡಿಯ ಬಳಿ ಪ್ರೀಸ್ಟ್‌ಲಿಗೆ ಒಂದು ಕಚೇರಿ ನೀಡಲಾಯಿತು. ಹೇರಳವಾದ ಮತ್ತು ಅನುಕೂಲಕರ 'ಫಿಕ್ಸಡ್​ ಏರ್​' (ಸ್ಥಿರ ಗಾಳಿ), ಇಂದು ನಾವು ಇಂಗಾಲದ ಡೈಆಕ್ಸೈಡ್ ಎಂದು ಅರ್ಥೈಸಿಕೊಂಡದ್ದು, 'ಚಯಾಪಚಯ (ಮೆಟಬಾಲಿಕ್) ಕ್ರಿಯೆಯ ಅನಿಲಗಳ ರಸಾಯನಶಾಸ್ತ್ರದ ಸಂಶೋಧನೆ' ಅವನಿಗೆ ಜೀವಮಾನದಲ್ಲಿ ಶ್ರೇಷ್ಠ ಗೌರವ ತಂದುಕೊಟ್ಟಿತ್ತು.

ಬಿಯರ್ ಮತ್ತು ಷಾಂಪೇನ್​ಗಳಲ್ಲಿ ನೈಸರ್ಗಿಕವಾಗಿ ಸಂಭವಿಸಿದದನ್ನು ಕೃತಕವಾಗಿ ಉತ್ಪಾದಿಸುವ ಮಾರ್ಗವನ್ನು ಆತ ಕಂಡುಕೊಂಡ. ಇಂಗಾಲದ ಡೈಆಕ್ಸೈಡ್​ನ ಅಂಶಗಳನ್ನು​ ಹೊಂದಿರುವ ನೀರು. ಈ ವಿಧಾನವು ರಾಯಲ್ ಸೊಸೈಟಿಯ ಅಸ್ಕರ್​ ಕೊಪ್ಲಿ ಪ್ರಶಸ್ತಿ ಅರಸಿ ಬಂತ್ತು. ಆಧುನಿಕ ತಂಪು ಪಾನೀಯ ಉದ್ಯಮದ ಮುನ್ನುಡಿಯಾಯಿತು.

ವಿದ್ಯುಚ್ಛಕ್ತಿಯಲ್ಲಿ ಕೆಲಸ:1767ರಲ್ಲಿ ಪ್ರೀಸ್ಟ್‌ಲಿ ಮತ್ತೊಂದು ಪ್ರಮುಖ ಆವಿಷ್ಕಾರ ಮಾಡಿದ್ದ. ಗ್ರ್ಯಾಫೈಟ್ (ಇದ್ದಿಲು) ವಿದ್ಯುತ್ ಅನ್ನು ಹೊರ ಸೂಸಬಲ್ಲದು ಎಂದು ಕಂಡುಹಿಡಿದನು. ಈಗ ಆಧುನಿಕ ವಿದ್ಯುತ್ ನಿರೋಧಕಗಳಲ್ಲಿ ಕಾರ್ಬನ್ ಪ್ರಮುಖ ಘಟಕಾಂಶವಾಗಿದೆ. ಈ ಪ್ರಯೋಗಗಳ ಆಧಾರದ ಮೇಲೆ 1766ರಲ್ಲಿ ಅವರು ರಾಯಲ್ ಸೊಸೈಟಿ ಆಫ್ ಲಂಡನ್​ನ ಸದಸ್ಯರಾಗಿ ಆಯ್ಕೆಯಾದರು.

ದ್ಯುತಿಸಂಶ್ಲೇಷಣೆ: ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ಗಮನಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರೀಸ್ಟ್‌ಲಿ ಪಾತ್ರರಾದರು. ಸಸ್ಯವು ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುತ್ತದೆ ಮತ್ತು ಆಮ್ಲಜನಕ ಬಿಡುಗಡೆ ಮಾಡುತ್ತದೆ ಎಂದು ಕಂಡುಹಿಡಿದ.

ಎರೇಸರ್ / ರಬ್ಬರ್:1770ರ ಏಪ್ರಿಲ್ 15 ರಂದು ಜೋಸೆಫ್ ಪ್ರೀಸ್ಟ್‌ಲಿ ತರಕಾರಿ ಗಮ್ ಕಪ್ಪು ಸೀಸದ ಪೆನ್ಸಿಲ್ ಗುರುತುಗಳನ್ನು ತೆಗೆದುಹಾಕಲು ಸಾಧ್ಯವಾಯಿತು ಎಂದು ವಿವರಿಸಿದ. ಆತ ಈ ವಸ್ತುವನ್ನು 'ರಬ್ಬರ್' ಎಂದು ಕರೆದ.

ಜೋಸೆಫ್ ಪ್ರೀಸ್ಟ್​ಲಿ 1794ರಲ್ಲಿ ಅಮೆರಿಕಕ್ಕೆ ಪಲಾಯನ ಗೈದ. 1804ರ ಫೆಬ್ರವರಿ 6ರಂದು 70ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ನಾರ್ತಂಬರ್​ಲ್ಯಾಂಡ್​ನಲ್ಲಿ ನಿಧನರಾದರು. ಫೆಬ್ರವರಿ 03ರಂದು ಅವರ ಸಾವಿಗೆ ಮೂರು ದಿನಗಳ ಮೊದಲು ಅವರು ಹೊಸ ಪ್ರಯೋಗವನ್ನು ಪ್ರಾರಂಭಿಸಿದ್ದರು. ಪ್ರೀಸ್ಟ್​ಲಿ ಅವರನ್ನು ಪೆನ್ಸಿಲ್ವೇನಿಯಾದ ನಾರ್ತಂಬರ್​ಲ್ಯಾಂಡ್​​ನ ರಿವರ್ ವ್ಯೂ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

ABOUT THE AUTHOR

...view details