ಕರ್ನಾಟಕ

karnataka

ETV Bharat / bharat

ಆಸ್ಪತ್ರೆ ಸ್ಟೋರ್​ ರೂಮ್ ಬೀಗ ಒಡೆದು ರೆಮ್​ಡಿಸಿವಿರ್ ಕಳ್ಳತನ

ರೆಮ್​ಡಿಸಿವಿರ್ ಔಷಧಿಗೆ ಭಾರಿ ಬೇಡಿಕೆಯಿದ್ದು, ದೇಶದ ಹಲವೆಡೆ ಈ ಔಷಧಿಗೆ ಕೆಲ ಖದೀಮರು ಕನ್ನ ಹಾಕುತ್ತಿದ್ದಾರೆ. ಈಗ ಇಂಥಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.​

Remdesivir injection stolen from Kaushambi district hospital store room
ಆಸ್ಪತ್ರೆ ಸ್ಟೋರ್​ ರೂಮ್ ಬೀಗ ಒಡೆದು ರೆಮ್ಡಿಸಿವಿರ್ ಕಳ್ಳತನ

By

Published : Apr 27, 2021, 3:28 PM IST

ಕೌಶಂಬಿ(ಉತ್ತರ ಪ್ರದೇಶ): ರೆಮ್​ಡಿಸಿವಿರ್ ಔಷಧವನ್ನು ಕಳ್ಳತನ ಮಾಡುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಕೆಲವು ದುಷ್ಕರ್ಮಿಗಳು ಕೌಶಂಬಿಯ ಮಂಜನ್​ಪುರ ಪ್ರದೇಶದಲ್ಲಿರುವ ರೆಮ್​ಡಿಸಿವಿರ್ ಔಷಧಿಯ ಬಾಟಲ್​ಗಳನ್ನು ಎಗರಿಸಿದ್ದಾರೆ. ಈ ಔಷಧಿಗಳನ್ನು ಆಸ್ಪತ್ರೆಯ ಸ್ಟೋರ್ ರೂಮ್​ನಲ್ಲಿ ಇಡಲಾಗಿತ್ತು.

ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ರೋಗಿಗಳಿಗಾಗಿ ರೂಪಿಸಲಾಗಿದ್ದ ವಾರ್ಡ್​ಗಳ ಸ್ಟೋರ್​​​ ರೂಮ್​ ಬಾಗಿಲಿನ ಬೀಗ ಮುರಿದು ರೆಮ್​ಡಿಸಿವಿರ್ ಬಾಟಲಿಗಳನ್ನು ಕದ್ದಿದ್ದಾರೆ.

ಇದನ್ನೂ ಓದಿ:ಕೋವಿಡ್​ಗೆ ಹೆದರಿ 55 ವರ್ಷದ ಮಹಿಳೆ ಆತ್ಮಹತ್ಯೆ

ಕಳ್ಳತನದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ದೀಪಕ್ ಸೇಠ್ ಮಾಹಿತಿ ಸಂಗ್ರಹಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಳ್ಳಲು ಸ್ಟೋರ್​​ ರೂಮ್​ನ ಬೀಗವನ್ನು ಮುರಿದು ರೆಮ್​ಡಿಸಿವಿರ್ ಚುಚ್ಚುಮದ್ದಿನ ಬಾಟಲಿಗಳೊಂದಿಗೆ ಪರಾರಿಯಾಗಿರುವುದು ಕಂಡುಬಂದಿದೆ.

ಮಂಜನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ.

ಇದಕ್ಕೂ ಮೊದಲು ಕೆಲವು ತಿಂಗಳ ಹಿಂದೆ ಈ ಆಸ್ಪತ್ರೆಯಲ್ಲಿ 5 ಲ್ಯಾಪ್‌ಟಾಪ್​ಗಳು ಕಳ್ಳತನವಾಗಿದ್ದವು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಲ್ಯಾಪ್‌ಟಾಪ್​​ಗಳನ್ನು ವಶಪಡಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದರು.

ABOUT THE AUTHOR

...view details