ಕರ್ನಾಟಕ

karnataka

ETV Bharat / bharat

ಮಧುರೈ ಸರ್ಕಾರಿ ಕೋವಿಡ್​ ಆಸ್ಪತ್ರೆಯಲ್ಲಿ ರೆಮ್​ಡೆಸಿವಿರ್ ಔಷಧಿ ಕಳವು.. ಪೊಲೀಸರ ತನಿಖೆ - Remdesivir drug robbery in Tamil Nadu

ರೆಮ್​ಡೆಸಿವಿರ್​ನ ತೀವ್ರ ಕೊರತೆಯ ಮಧ್ಯೆ ಕೊರೊನಾ ರೋಗಿಗಳಿಗೆ ಸೂಚಿಸಲಾದ ರೆಮ್ಡೆಸಿವಿರ್ ಔಷಧಿಗಳನ್ನು ಹೆಚ್ಚಿನ ಲಾಭಕ್ಕಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ..

Remdesivir
Remdesivir

By

Published : May 4, 2021, 6:10 PM IST

ಮಧುರೈ : ಸರ್ಕಾರಿ ರಾಜಾಜಿ ಆಸ್ಪತ್ರೆಯಿಂದ ರೆಮ್‌ಡೆಸಿವಿರ್ ಔಷಧಿ ಕಳವು ಮಾಡಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊರೊನಾ ಸೋಂಕಿನ ಎರಡನೇ ಅಲೆಯು ಭಾರತದಾದ್ಯಂತ ವ್ಯಾಪಿಸಿದೆ. ತೀವ್ರವಾದ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ರೆಮ್​ಡೆಸಿವಿರ್ ಬಳಸಲಾಗುತ್ತದೆ. ಇತ್ತೀಚಿನ ಕಾರ್ಪೊರೇಟ್ ಹಗರಣಗಳ ಪರಿಣಾಮವಾಗಿ ಇದಕ್ಕೆ ಭಾರೀ ಬೇಡಿಕೆ ಬಂದಿದೆ.

ಇಂತಹ ಸನ್ನಿವೇಶದಲ್ಲಿ ಮಧುರೈ ಸರ್ಕಾರಿ ಕೊರೊನಾ ವಿಶೇಷ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲು ಇರಿಸಲಾಗಿರುವ 8 ರೆಮ್​​ಡೆಸಿವಿರ್​ ಔಷಧಗಳು ಕಾಣೆಯಾಗಿವೆ ಎಂದು ಆಸ್ಪತ್ರೆ ಆಡಳಿತ ಪೊಲೀಸರಿಗೆ ಮಾಹಿತಿ ನೀಡಿದೆ.

ಈ ದೂರಿನ ಬಳಿಕ ಆಸ್ಪತ್ರೆಯ ಔಷಧಿ ಶೇಖರಣಾ ಸಿಬ್ಬಂದಿ, ಆಸ್ಪತ್ರೆಯ ದಾದಿಯರು ಸೇರಿದಂತೆ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯ ಗಮನಿಸಿ ಬಾಕ್ಸ್​ ಮೇಲಿನ ಬೆರಳಚ್ಚು ಆಧರಿಸಿ ಔಷಧಿಗಳನ್ನು ದೋಚಿದ ವ್ಯಕ್ತಿಗಳ ಬಗ್ಗೆ ಮಾಧಿಚಿಯಂ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರೆಮ್​ಡೆಸಿವಿರ್​ನ ತೀವ್ರ ಕೊರತೆಯ ಮಧ್ಯೆ ಕೊರೊನಾ ರೋಗಿಗಳಿಗೆ ಸೂಚಿಸಲಾದ ರೆಮ್ಡೆಸಿವಿರ್ ಔಷಧಿಗಳನ್ನು ಹೆಚ್ಚಿನ ಲಾಭಕ್ಕಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ABOUT THE AUTHOR

...view details