ಕರ್ನಾಟಕ

karnataka

ETV Bharat / bharat

ಮಗ ಅಕಾಲಿಕ ಮರಣ.. ವಿಧವೆಯಾದ ಸೊಸೆಗೆ ಮರು ಮದುವೆ ಮಾಡಿಸಿ ಮಾದರಿಯಾದ ಅತ್ತೆ ಮಾವ - ವಿಧವೆಯಾದ ಸೊಸೆಗೆ ಮರು ಮದುವೆ

ವಿಧವೆಯಾದ ಸೊಸೆಗೆ ವರನನ್ನು ಹುಡುಕಿ ಅತ್ತೆ ಹಾಗೂ ಮಾವ ಪೋಷಕರಂತೆ ಮುಂದೆ ನಿಂತು ಮದುವೆ ಮಾಡಿಸಿರುವ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ವಿಧವೆಯಾದ ಸೊಸೆ ಮತ್ತು ಅಳಿಯನಿಗೆ ಮದುವೆ ಮಾಡಿಸಿದ ಅತ್ತೆ ಮಾವ
ವಿಧವೆಯಾದ ಸೊಸೆಗೆ ಮರು ಮದುವೆ ಮಾಡಿಸಿ ಮಾದರಿಯಾದ ಅತ್ತೆ ಮಾವ

By

Published : Nov 27, 2022, 8:09 PM IST

Updated : Nov 27, 2022, 8:49 PM IST

ಖಾಂಡ್ವಾ(ಮಧ್ಯಪ್ರದೇಶ): ತಮ್ಮ ಮಗ ಅಕಾಲಿಕವಾಗಿ ತೀರಿಹೋದ ನಂತರ ವಿಧವೆಯಾದ ಸೊಸೆಯ ಬದುಕಿನಲ್ಲಿ ಮತ್ತೆ ಮಂದಹಾಸ ಮೂಡುವಂತೆ ಅತ್ತೆ ಮತ್ತು ಮಾವ ಮಾಡಿದ್ದಾರೆ. ಸೊಸೆಗೆ ವರನನ್ನು ಹುಡುಕಿದ್ದಲ್ಲದೆ ಮರು ಮದುವೆಯನ್ನು ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿ ಆಗಿರುವ ವಿಶಿಷ್ಟ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.

ಪೋಷಕರಂತೆ ಜವಾಬ್ದಾರಿ ನಿರ್ವಹಣೆ.. ಸೊಸೆಗೆ ಹೊಸ ಸಂಬಂಧ ಹುಡುಕುವುದರಿಂದ ಹಿಡಿದು ಅವರಿಗೆ ಮದುವೆ ಮಾಡಿಸುವವರೆಗೆ ಅತ್ತೆ ಮತ್ತು ಮಾವ ಪೋಷಕರಂತೆ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ವರನೂ ವಿಧುರ: ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರ ಮಗ ಅಕಾಲಿಕವಾಗಿ ನಿಧನ ಹೊಂದಿದ್ದರು. ಪುತ್ರನ ಅಗಲಿಕೆ ಬಳಿಕ ಹಿರಿಯರಾದ ದಂಪತಿ ತಮ್ಮ ಸೊಸೆಯನ್ನು ಮಗಳಂತೆ ನೋಡಿಕೊಂಡರು. ಅಲ್ಲದೆ, ಅವಳ ಭವಿಷ್ಯದ ಬಗ್ಗೆಯೂ ಆಲೋಚಿಸಿದರು. ನಂತರ ಸೊಸೆಗೆ ಮರು ಮದುವೆ ಮಾಡಿಸುವ ಬಗ್ಗೆ ನಿರ್ಧರಿಸಿದರು.

ವಿಧವೆಯಾದ ಸೊಸೆಗೆ ಮರು ಮದುವೆ ಮಾಡಿಸಿ ಮಾದರಿಯಾದ ಅತ್ತೆ ಮಾವ

ಈ ನಿಟ್ಟಿನಲ್ಲಿ ಪತ್ನಿಯನ್ನು ಕಳೆದುಕೊಂಡು ವಿಧುರನಾಗಿದ್ದ ವ್ಯಕ್ತಿಯನ್ನು ಹುಡುಕಿದರು. ಇಂದು ಗಾಯತ್ರಿ ದೇವಸ್ಥಾನದಲ್ಲಿ ನಡೆದ ಈ ಮರುಮದುವೆ ಸಮಾಜಕ್ಕೆ ಸಂದೇಶ ನೀಡುವುದರ ಜತೆಗೆ ಜನಜಾಗೃತಿ ಮೂಡಿಸುವ ಕೆಲಸವೂ ಆಗಿರುವುದು ಒಳ್ಳೆಯ ಬೆಳವಣಿಗೆ.

ಓದಿ:ಪೊಲೀಸ್ ಭದ್ರತೆಯಲ್ಲಿ ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಬಂದ ದಲಿತ ವರ!

Last Updated : Nov 27, 2022, 8:49 PM IST

ABOUT THE AUTHOR

...view details