ಕರ್ನಾಟಕ

karnataka

ETV Bharat / bharat

ಟೀಕೆಯ ಭಯದಿಂದ ಜಾಮೀನು ನೀಡಲು ಹಿಂಜರಿಕೆ: ಸಿಜೆಐ - ತಳಮಟ್ಟದ ನ್ಯಾಯಾಲಯಗಳ ನ್ಯಾಯಾಧೀಶ

ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಕೀಲರು ಸಿಜೆಐ ಅವರನ್ನು ಭೇಟಿಯಾಗಲು ಬಯಸುತ್ತಾರೆ ಎಂದು ನಾನು ಕೇಳಿದ್ದೇನೆ. ಇದು ವೈಯಕ್ತಿಕ ಸಮಸ್ಯೆಯಾಗಿರಬಹುದು. ಆದರೆ ಸರ್ಕಾರದಿಂದ ಬೆಂಬಲಿತವಾಗಿರುವ ಕೊಲಿಜಿಯಂನ ಪ್ರತಿಯೊಂದು ನಿರ್ಧಾರಕ್ಕೂ ಇಂಥ ಕ್ರಿಯೆ ಪುನರಾವರ್ತಿತವಾಗುತ್ತಿದ್ದರೆ ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಗೊತ್ತಾಗುತ್ತಿಲ್ಲ. ಸಂಪೂರ್ಣ ಆಯಾಮವೇ ಬದಲಾಗಬಹುದು ಎಂದು ಕೇಂದ್ರ ಸಚಿವ ರಿಜಿಜು ಹೇಳಿದರು.

ಟೀಕೆಯ ಭಯದಿಂದ ಜಾಮೀನು ನೀಡಲು ಹಿಂಜರಿಕೆ: ಸಿಜೆಐ
reluctance-to-grant-bail-for-fear-of-criticism-cji

By

Published : Nov 20, 2022, 11:22 AM IST

ನವದೆಹಲಿ: ಟೀಕೆಗೆ ಗುರಿಯಾಗುವ ಭಯದಿಂದ ತಳಮಟ್ಟದ ನ್ಯಾಯಾಲಯಗಳ ನ್ಯಾಯಾಧೀಶರು ಗಂಭೀರ ಪ್ರಕರಣಗಳಲ್ಲಿ ಜಾಮೀನು ನೀಡಲು ಹಿಂಜರಿಯುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ.

ಗಂಭೀರ ಪ್ರಕರಣಗಳಲ್ಲಿ ಜಾಮೀನು ನೀಡಲು ಗುರಿಯಾಗುತ್ತಾರೆ ಎಂಬ ಭಯದ ಭಾವನೆಯಿಂದ ತಳಮಟ್ಟದ ನ್ಯಾಯಾಧೀಶರು ಜಾಮೀನು ನೀಡಲು ಹಿಂಜರಿಯುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಶನಿವಾರ ಹೇಳಿದ್ದಾರೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್, ಜಾಮೀನು ನೀಡಲು ತಳಮಟ್ಟದಲ್ಲಿರುವ ನಿರಾಸಕ್ತಿಯಿಂದಾಗಿ ಉನ್ನತ ನ್ಯಾಯಾಂಗವು ಜಾಮೀನು ಅರ್ಜಿಗಳಿಂದ ತುಂಬಿದೆ. ತಳಮಟ್ಟದ ನ್ಯಾಯಾಧೀಶರು ಜಾಮೀನು ನೀಡಲು ಹಿಂಜರಿಯುತ್ತಾರೆ. ಹಾಗಂತ ಅವರಿಗೆ ಅಪರಾಧದ ತೀವ್ರತೆ ಅರ್ಥವಾಗಿಲ್ಲ ಎಂದರ್ಥವಲ್ಲ. ಆದರೆ ಟೀಕೆಗೆ ಗುರಿಯಾಗುವ ಕಾರಣದಿಂದ ಅವರು ಜಾಮೀನು ನೀಡುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೂಡ ಉಪಸ್ಥಿತರಿದ್ದರು. ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ವಕೀಲರು ಸಿಜೆಐ ಅವರನ್ನು ಭೇಟಿಯಾದ ಬಗ್ಗೆ ಸಚಿವ ರಿಜಿಜು ಇದೇ ಸಮಯದಲ್ಲಿ ಕಳವಳ ವ್ಯಕ್ತಪಡಿಸಿದರು.

ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಕೀಲರು ಸಿಜೆಐ ಅವರನ್ನು ಭೇಟಿಯಾಗಲು ಬಯಸುತ್ತಾರೆ ಎಂದು ನಾನು ಕೇಳಿದ್ದೇನೆ. ಇದು ವೈಯಕ್ತಿಕ ಸಮಸ್ಯೆಯಾಗಿರಬಹುದು. ಆದರೆ ಸರ್ಕಾರದಿಂದ ಬೆಂಬಲಿತವಾಗಿರುವ ಕೊಲಿಜಿಯಂನ ಪ್ರತಿಯೊಂದು ನಿರ್ಧಾರಕ್ಕೂ ಇಂಥ ಕ್ರಿಯೆ ಪುನರಾವರ್ತಿತವಾಗುತ್ತಿದ್ದರೆ ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಗೊತ್ತಾಗುತ್ತಿಲ್ಲ. ಸಂಪೂರ್ಣ ಆಯಾಮವೇ ಬದಲಾಗಬಹುದು ಎಂದು ರಿಜಿಜು ಹೇಳಿದರು.

ನವೆಂಬರ್ 9 ರಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್​ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ನವೆಂಬರ್ 10, 2024 ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ.

ಇದನ್ನೂ ಓದಿ: ನಾಗರಿಕರು ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯನ್ನು ನಂಬಬೇಕು: ಸಿಜೆಐ ಡಿ ವೈ ಚಂದ್ರಚೂಡ್

ABOUT THE AUTHOR

...view details