ಕಾನ್ಪುರ (ಉತ್ತರ ಪ್ರದೇಶ): ಬಾಲಕನೊಬ್ಬನನ್ನು ಮತಾಂತರಗೊಳಿಸಿ ಎರಡು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಿರುವ ಆರೋಪ ಕಾನ್ಪುರದಲ್ಲಿ ಕೇಳಿ ಬಂದಿದೆ. ಕಾಕದೇವ್‌ನ ಓಂ ಚೌರಾಹಾ ಬಳಿ ವಾಸಿಸುತ್ತಿರುವ ನ್ಯಾನ್ಸಿ ಎಂಬುವವರು ಸೋಮವಾರ ತಡರಾತ್ರಿ ಕಾಕದೇವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ.
ದೂರಿನಲ್ಲಿ ತಮ್ಮ 16 ವರ್ಷದ ಮಗ ಮತಾಂತರಗೊಂಡಿದ್ದಾನೆ. ಮತಾಂತರದ ನಂತರ ಇಬ್ಬರು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಭಾನುವಾರದಿಂದ ಮಗ ಮನೆಗೆ ಬಂದಿಲ್ಲ. ಆತನಿಗಾಗಿ ಹುಡುಕಾಟ ನಡೆಸಿದಾಗ ಯಾರೋ ಧರ್ಮಗುರುಗಳು ಆತನನ್ನು ಮತಾಂತರಿಸಿ ಮದುವೆ ಕೂಡ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ನಿಖಿಲ್ ಧರ್ಮಗುರುಗಳ ಮುಂದೆ ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.