ಅಯೋಧ್ಯಾ(ಉತ್ತರ ಪ್ರದೇಶ):ಧರ್ಮವು ರಾಜಕೀಯದಿಂದ ಪ್ರತ್ಯೇಕವಾಗಿಲ್ಲ, ಎರಡೂ ಕೂಡಾ ಒಂದಕ್ಕೊಂದು ಪೂರಕ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಭಿಪ್ರಾಯಪಟ್ಟರು.
'ಬಾಲ್ಯದಿಂದಲೂ ನಾವು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಕನಸು ಕಾಣುತ್ತಿದ್ದೆವು. ಈಗ ಅದು ನಿಜವಾಗುತ್ತಿದೆ. ನಾನು ಲಖನೌ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವ ವೇಳೆ ಅಯೋಧ್ಯೆಗೆ ಹಲವಾರು ಸಲ ಭೇಟಿ ನೀಡಿದ್ದೇನೆ. ಆದರೆ ಈ ಬಾರಿಯ ಭೇಟಿ ಅತ್ಯಂತ ವಿಭಿನ್ನ' ಎಂದು ಧಾಮಿ ಹೇಳಿದರು.
'ನಾನು ರೈತ ಕುಟುಂಬಕ್ಕೆ ಸೇರಿದವನು. ನನ್ನ ಕುಟುಂಬದ ಜನರು ಕೂಡಾ ಸೇನೆಯಲ್ಲಿದ್ದಾರೆ. ನಮ್ಮ ಸರ್ಕಾರಗಳು ರೈತರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿವೆ. ರೈತರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಎಲ್ಲಾ ಯೋಜನೆಗಳನ್ನು ಉತ್ತರಾಖಂಡದಲ್ಲಿ ಜಾರಿಗೊಳಿಸಲಾಗುತ್ತಿದೆ. ಕಿಸಾನ್ ಸಮ್ಮಾನ್ ನಿಧಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗಳನ್ನು ಅನಾವರಣಗೊಳಿಸಲಾಗುತ್ತಿದೆ' ಎಂದು ಸಿಎಂ ವಿವರಿಸಿದರು.
ಮುಂದಿನ ದಿನಗಳಲ್ಲಿ ಬರಲಿರುವ ಉತ್ತರಾಖಂಡದ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿದ ಪುಷ್ಕರ್ ಸಿಂಗ್ ಧಾಮಿ, 'ಉತ್ತರಾಖಂಡದಲ್ಲಿ 5 ಲೋಕಸಭಾ ಮತ್ತು ಇಬ್ಬರು ರಾಜ್ಯಸಭಾ ಸಂಸದರಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 'ಈ ಬಾರಿ, 60 ಗಡಿ' (Is bar 60 par) ಎಂಬ ಸ್ಲೋಗನ್ನೊಂದಿಗೆ ಚುನಾವಣಾ ಪ್ರಚಾರ ಮಾಡಲಾಗುತ್ತದೆ' ಎಂದು ಹೇಳಿದರು.
ಇದನ್ನೂ ಓದಿ:ಸಿಂಘು ಗಡಿ ಭೀಕರ ಹತ್ಯೆಯ ತಪ್ಪೊಪ್ಪಿಕೊಂಡ ನಿಹಾಂಗರು: ಉನ್ನತ ತನಿಖೆಗೆ ಲಖ್ಬಿರ್ ಕುಟುಂಬಸ್ಥರ ಆಗ್ರಹ