ನವದೆಹಲಿ:ಇತ್ತೀಚೆಗಷ್ಟೇ ಜಿಯೋ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳು ಕರೆ ಮತ್ತು ಡೇಟಾ ದರ ಹೆಚ್ಚಳ ಮಾಡಿವೆ. ಈ ಮಧ್ಯೆಯೇ ರಿಲಾಯನ್ಸ್ ಜಿಯೋ ತನ್ನ ಚಂದಾದಾರರಿಗೆ ವಿಶ್ವದಲ್ಲಿಯೇ ಅತಿ ಅಗ್ಗದ ದರದಲ್ಲಿ ಡೇಟಾ ಪ್ಯಾಕ್ ಯೋಜನೆ ಪರಿಚಯಿಸಿದೆ.
ಮಂಗಳವಾರ ರಾತ್ರಿಯಿಂದ ಜಾರಿಯಾಗುವಂತೆ 1 ರೂಪಾಯಿಗೆ 100 ಎಂಬಿ 4 ಜಿ ಡೇಟಾ ಯೋಜನೆಯನ್ನು ಪರಿಚಯಿಸಿದೆ. ಇದು 64 kbps ವೇಗದಲ್ಲಿ ಬ್ರೌಸ್ ಆಗಲಿದೆ. 30 ದಿನಗಳವರೆಗೆ ಕಾಲಮಿತಿ ನೀಡಿದೆ. ಇದು ನೀರಿನ ಪ್ಯಾಕೆಟ್ ಗಿಂತಲೂ(ಕನಿಷ್ಠ 1 ರಿಂದ 4 ರೂ.) ಅಗ್ಗದ ಯೋಜನೆಯಾಗಿದೆ ಎಂದು ಜಿಯೋ ಹೇಳಿದೆ.
1 ರೂ.ಗೆ 100 ಎಂಬಿ ಡೇಟಾ ಸಿಗಲಿರುವುದರಿಂದ 1 ಜಿಬಿ ಡೇಟಾಗೆ 10 ರೂ. ಆಗಲಿದೆ. ಇದು ಈಗಿರುವ (15 ರೂ.ಗೆ 1 ಜಿಬಿ) ಯೋಜನೆಗಿಂತ ಶೇ.50 ರಷ್ಟು ಅಗ್ಗವಾಗಿದೆ. ಇದು ಯಾವ ಟೆಲಿಕಾಂ ಕಂಪನಿಗಳು ನೀಡಿರದ ವಿಶಿಷ್ಟವಾದ ಮತ್ತು ಸಾಮಾನ್ಯ ಗ್ರಾಹಕರಿಗೆ ಸಹಕಾರಿಯಾದ ಯೋಜನೆ ಇದಾಗಿದೆ ಎಂದು ಜಿಯೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.