ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ‘ತೈಲದಿಂದ ರಾಸಾಯನಿಕ’ (ಒ 2 ಸಿ) ವ್ಯವಹಾರವನ್ನು ಸ್ವತಂತ್ರ ಅಂಗಸಂಸ್ಥೆಯಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ಶೇಕಡಾ 100 ರಷ್ಟು ನಿರ್ವಹಣಾ ನಿಯಂತ್ರಣ ಉಳಿಸಿಕೊಳ್ಳಲಿದೆ.
ಎಲ್ಲ ಸಂಸ್ಕರಣೆ, ಮಾರ್ಕೆಟಿಂಗ್ ಮತ್ತು ಪೆಟ್ರೋಕೆಮಿಕಲ್ ಸ್ವತ್ತುಗಳನ್ನು ಒ 2 ಸಿ ಅಂಗಸಂಸ್ಥೆಗೆ ವರ್ಗಾಯಿಸಲಾಗುವುದು ಎಂದು ಸೋಮವಾರ ತಡರಾತ್ರಿ ಷೇರು ವಿನಿಮಯ ಕೇಂದ್ರಗಳಲ್ಲಿ ನಿಯಂತ್ರಕ ದಾಖಲಾತಿಗಳಲ್ಲಿ ತಿಳಿಸಲಾಗಿದೆ.
ಪ್ರವರ್ತಕ ಗುಂಪು ಒ2ಸಿ ವ್ಯವಹಾರದಲ್ಲಿ ಶೇ 49.14 ರಷ್ಟು ಪಾಲನ್ನು ಮುಂದುವರಿಸಲಿದೆ ಮತ್ತು ಈ ಪ್ರಕ್ರಿಯೆಯು ಕಂಪನಿಯ ಷೇರುದಾರರಲ್ಲಿ ಯಾವುದೇ ಬದಲಾವಣೆಗೆ ಕಾರಣವಾಗುವುದಿಲ್ಲ. ಅಸ್ತಿತ್ವದಲ್ಲಿರುವ ಒ2ಸಿ ಆಪರೇಟಿಂಗ್ ತಂಡವು ವ್ಯವಹಾರದ ವರ್ಗಾವಣೆಯೊಂದಿಗೆ ಹೊಸದಾಗಿ ರಚಿಸಲಾದ ಅಂಗಸಂಸ್ಥೆಗೆ ಸ್ಥಳಾಂತರಗೊಳ್ಳುತ್ತದೆ. ಆದರೆ ಗಳಿಕೆಯ ಹಣದ ಹರಿವಿನ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಆರ್‌ಐಎಲ್ ತಿಳಿಸಿದೆ.
ಆರ್‌ಐಎಲ್ ಮತ್ತು ಅದರ ಒ 2 ಸಿ ಅಂಗಸಂಸ್ಥೆಯು 2035 ರ ವೇಳೆಗೆ ನಿವ್ವಳ ಇಂಗಾಲದ ಶೂನ್ಯ ಗುರಿಗಳತ್ತ ಸಾಗಲು ಒಟ್ಟಾಗಿ ಕೆಲಸ ಮಾಡುತ್ತಿದೆ. ಕಾರ್ಬನ್ ಡೈ ಆಕ್ಸೈಡ್ ಅನ್ನು ಉಪಯುಕ್ತ ಉತ್ಪನ್ನಗಳು ಮತ್ತು ರಾಸಾಯನಿಕಗಳಾಗಿ ಪರಿವರ್ತಿಸಲು ಒ 2 ಸಿ ವ್ಯವಹಾರವು ಮುಂದಿನ ಪೀಳಿಗೆಯ ಇಂಗಾಲದ ಸೆರೆ ಹಿಡಿಯುವಿಕೆ ಮತ್ತು ಶೇಖರಣಾ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತದೆ.