ನವದೆಹಲಿ: ಸರಕು ಸಾಗಣೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆ ರಿಲಯನ್ಸ್ ಆಯಿಲ್ ಗುಜರಾತ್ನ ಜಮ್ನಾಘರ್ನಲ್ಲಿರುವ ತೈಲ ಸಂಸ್ಕರಣಾ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ. ಸರಕುಗಳು ಸರಿಯಾದ ಸಮಯಕ್ಕೆ ತಲುಪದೆ ಸಮಸ್ಯೆಯಾಗುತ್ತಿರುವುದರಿಂದ ಇಲ್ಲಿನ 2ನೇ ತೈಲ ಸಂಸ್ಕರಣ ಘಟಕವನ್ನು ಮುಚ್ಚಲಾಗುವುದು ಎಂದು ಕಂಪನಿ ತಿಳಿಸಿದೆ.
ಜಮ್ನಾಘರ್ನಲ್ಲಿರುವ ಫ್ಲೂಯಿಲೈಜಡ್ ಕ್ಯಾಟಲಿಕ್ ಕ್ರ್ಯಾಕರ್ ಯುನಿಟ್ (ಎಫ್ಸಿಸಿಯು) ಸೇವೆಯನ್ನ ತುರ್ತಾಗಿ ಬಂದ್ ಮಾಡುತ್ತಿರುವುದಾಗಿ ಸಂಸ್ಥೆ ಹೇಳಿದೆ.