ಕರ್ನಾಟಕ

karnataka

ETV Bharat / bharat

ಕೇದಾರನಾಥ ಧಾಮ: ಮೇ 25 ರವರೆಗೆ ಹೊಸ ಯಾತ್ರಾರ್ಥಿಗಳ ನೋಂದಣಿ ನಿಷೇಧ - ಹೇಮಕುಂಡ್ ಸಾಹಿಬ್ ಯಾತ್ರೆ

ಮೇ 26ರಿಂದ ಹೊಸ ಯಾತ್ರಾರ್ಥಿಗಳ ನೋಂದಣಿ ಪ್ರಾರಂಭವಾಗಲಿದೆ.

Kedarnath Dham
ಕೇದಾರನಾಥ ಧಾಮ

By

Published : May 15, 2023, 8:18 PM IST

ಡೆಹ್ರಾಡೂನ್ (ಉತ್ತರಾಖಂಡ್​): ಕೇದಾರನಾಥದಲ್ಲಿ ಕ್ಷಣ ಕ್ಷಣಕ್ಕೂ ವಾತಾವರಣದಲ್ಲಿ ಬದಲಾವಣೆ ಆಗುತ್ತಿದ್ದು, ಮಳೆ, ಹಿಮಪಾತ ಸಂಭವಿಸುತ್ತಲೇ ಇದೆ. ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ಯಾತ್ರೆಗೆ ಈ ಹಿಂದೆ ಮೇ 15 ರವರೆಗೆ ಹೊಸ ನೋಂದಣಿಯನ್ನು ನಿಷೇಧಿಸಲಾಗಿತ್ತು. ಇದೀಗ ಮೇ 25ರ ವರೆಗೆ ಇದ ಮುಂದೂಡಲಾಗಿದೆ. ಮೇ 26 ರಿಂದ ಮತ್ತೆ ಹೊಸ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಆದರೆ ಚಾರ್ಧಾಮ್‌ ಯಾತ್ರೆಗಾಗಿ ಈ ಹಿಂದೆ ಯಾರು ನೋಂದಣಿ ಮಾಡಿಕೊಂಡಿದ್ದಾರೆಯೋ ಆ ಯಾತ್ರಾರ್ಥಿಗಳು ಮಾತ್ರ ದರ್ಶನ ಪಡೆಯಲು ಅವಕಾಶವಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮೇ 20 ರಂದು ಹೇಮಕುಂಡ್ ಸಾಹಿಬ್‌ನ ಬಾಗಿಲು ತೆರೆಯಲಿದ್ದು, ಚಮೋಲಿ ಆಡಳಿತವು ಪವಿತ್ರ ಹೇಮಕುಂಡ್ ಸಾಹಿಬ್ ಯಾತ್ರೆಯಲ್ಲಿ ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಿದೆ. ಅಲ್ಲದೆ, ಆಡಳಿತದ ಮುಂದಿನ ಆದೇಶದವರೆಗೆ ಅನಾರೋಗ್ಯ ಪೀಡಿತರು. ಮಕ್ಕಳು ಮತ್ತು ವೃದ್ಧರು ಪ್ರಯಾಣಿಸಲು ಅನುಮತಿ ಇಲ್ಲ.

ಇದನ್ನೂ ಓದಿ:ಹಿಮಪಾತದ ನಡುವೆಯೇ ತೆರೆದ ಕೇದಾರನಾಥನ ಮಹಾದ್ವಾರ: ಉತ್ತರಾಖಂಡ ಸಿಎಂ ಭಾಗಿ

ABOUT THE AUTHOR

...view details