ಕರ್ನಾಟಕ

karnataka

ETV Bharat / bharat

ಸಿಗರೇಟ್ ಖರೀದಿಯ ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯಾಕೆಯ ಕತ್ತು ಸೀಳಿ ಕೊಂದ ಪ್ಲಂಬರ್ - ಅಂಗಡಿ ಮಾಲೀಕಳ ಕತ್ತು ಸೀಳಿದ ವ್ಯಕ್ತಿ ಪರಾರಿ

ಸಿಗರೇಟ್ ಖರೀದಿಸಿದ ಬಾಕಿ ಹಣ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಅಂಗಡಿಯಲ್ಲಿದ್ದ ಮಹಿಳೆಯ ಕತ್ತು ಸೀಳಿದ ಘಟನೆ ದೆಹಲಿಯಲ್ಲಿ ನಡೆಯಿತು.

Refused cigarettes over non-payment of dues, man kills woman shopkeeper in Delhi
ಸಿಗರೇಟ್​ನ ಬಾಕಿ ಹಣ ಕೇಳಿದ್ದಕ್ಕೆ ಮಹಿಳೆಯ ಕತ್ತು ಸೀಳಿದ ಪ್ಲಂಬರ್!

By

Published : Oct 5, 2021, 8:29 AM IST

ನವದೆಹಲಿ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ ಅಂಗಡಿ ಮಾಲೀಕಳ ಕತ್ತು ಸೀಳಿದ್ದಾನೆ. ದುಷ್ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದ ವ್ಯಕ್ತಿ ನೈರುತ್ಯ ದೆಹಲಿಯ ಡಾಬ್ರಿ ಪ್ರದೇಶದಲ್ಲಿರುವ ಸೋಮ್​ ಬಜಾರ್ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆಕೆ ಆ ವೇಳೆಗಾಗಲೇ ಮೃತಪಟ್ಟಿದ್ದರು. ಸಾವನ್ನಪ್ಪಿದ ಮಹಿಳೆಯನ್ನು ವಿಭಾ ಎಂದು ಗುರುತಿಸಲಾಗಿದೆ.

ಆರೋಪಿ ದಿಲೀಪ್ (45) ಪ್ಲಂಬರ್ ಆಗಿದ್ದು ತನ್ನ ಬ್ಯಾಗ್​ನಲ್ಲಿದ್ದ ಚಾಕುವನ್ನು ತೆಗೆದು ಮಹಿಳೆಯ ಕತ್ತು ಸೀಳಿದ್ದ. ದಿಲೀಪ್ ವಿಭಾ ಅವರಿದ್ದ ಅಂಗಡಿಯಲ್ಲಿ ಸಿಗರೇಟ್ ಮತ್ತು ದಿನಸಿ ವಸ್ತುಗಳನ್ನು ಕೊಳ್ಳುತ್ತಿದ್ದನು. ಆಕೆಗೆ ಕೊಡಬೇಕಾದ ಹಣ ಸ್ವಲ್ಪ ಬಾಕಿ ಇತ್ತು. ಭಾನುವಾರ ಸಂಜೆ ಅಂಗಡಿಯ ಬಳಿ ಆಗಮಿಸಿ ಸಿಗರೇಟ್ ಕೇಳಿದ್ದಾನೆ. ಈ ವೇಳೆ ಹಳೆ ಬಾಕಿ ನೀಡುವಂತೆ ಕೇಳಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದಾದ ಬಳಿಕ ಆರೋಪಿ ಸಿಟ್ಟಿಗೆದ್ದು ಮಹಿಳೆಯ ಕತ್ತು ಸೀಳಿದ್ದಾನೆ.

ಇದಾದ ನಂತರ ಸಾರ್ವಜನಿಕರು ಆತನನ್ನು ಹಿಡಿಯಲು ಮುಂದಾದರು. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದರು.

ಮತ್ತೊಂದು ಕೇಸ್​

ಪೊಲೀಸರು ದಿಲೀಪ್​ನನ್ನು ವಶಕ್ಕೆ ಪಡೆದ ನಂತರ ಆರೋಪಿಯನ್ನು ತಮಗೆ ಒಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಘಟನೆ ಸಂಬಂಧ ದೂರು ದಾಖಲಾಗಿದ್ದು, ಓರ್ವ ಮಹಿಳೆ ಸೇರಿದಂತೆ ಐವರನ್ನು ಸಿಸಿಟಿವಿ ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಲಖಿಂಪುರ ಖೇರಿ ಹಿಂಸಾಚಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ?

ABOUT THE AUTHOR

...view details