ಕರ್ನಾಟಕ

karnataka

By

Published : Jul 11, 2022, 10:54 AM IST

ETV Bharat / bharat

ಬೀದಿಪ್ರಾಣಿಗಳ ಕೊರಳಿಗೆ ಪ್ರತಿಫಲಿತ ಪಟ್ಟಿ: ಚೆನ್ನೈ ಪ್ರಾಣಿಪ್ರೇಮಿಗಳಿಂದ ವಿನೂತನ ಯೋಜನೆ

ಪೀಪಲ್ ಫಾರ್ ಕ್ಯಾಟಲ್ ಇನ್ ಇಂಡಿಯಾ ಸಂಸ್ಥೆಯು ಚೆನ್ನೈನ ಸುಮಾರು 4,000 ಬೀದಿನಾಯಿಗಳು ಹಾಗೂ 500 ಜಾನುವಾರುಗಳ ಕೊರಳಿಗೆ ಪ್ರತಿಫಲಿತ ಪಟ್ಟಿಗಳನ್ನು ಜೋಡಿಸುವ ಯೋಜನೆಗೆ ಭಾನುವಾರ ಚಾಲನೆ ನಿಡಿದೆ.

stray animal
ಬೀದಿನಾಯಿ

ಚೆನ್ನೈ: ರಾತ್ರಿ ವೇಳೆ ಅತೀ ವೇಗವಾಗಿ ಚಲಿಸುವ ವಾಹನಗಳಿಗೆ ಬೀದಿನಾಯಿಗಳು ಹಾಗೂ ದನಕರುಗಳು ಬಲಿಯಾಗುತ್ತಿರುವುದನ್ನು ತಪ್ಪಿಸಲು ಚೆನ್ನೈನ ಸುಮಾರು 4,000 ಬೀದಿನಾಯಿಗಳು ಹಾಗೂ 500 ಜಾನುವಾರುಗಳ ಕೊರಳಿಗೆ ಪ್ರತಿಫಲಿತ ಕೊರಳಪಟ್ಟಿಗಳನ್ನು ಹಾಕುವ ವಿನೂತನ ಯೋಜನೆಗೆ ಚೆನ್ನೈನ ಪ್ರಾಣಿಪ್ರೇಮಿಗಳು ಭಾನುವಾರ ಚಾಲನೆ ನೀಡಿದ್ದಾರೆ.

2016 ರಲ್ಲಿ ಮ್ಯಾಜಿಕ್ ಕಾಲರ್ ಅಭಿಯಾನವನ್ನು ಪ್ರಾರಂಭಿಸಿದ್ದ ಪೀಪಲ್ ಫಾರ್ ಕ್ಯಾಟಲ್ ಇನ್ ಇಂಡಿಯಾ (PFCI)ಸಂಸ್ಥೆಯೇ ಈ ಯೋಜನೆಯನ್ನು ಕೂಡ ರೂಪಿಸಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯ ಅಡಿಯಲ್ಲಿ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಪಿಎಫ್‌ಸಿಐನ ಪ್ರಾಣಿ ಪ್ರೇಮಿ ನೀಲ್ ರಾಬರ್ಟ್ಸ್ ಪ್ರತಿಕ್ರಿಯಿಸಿ, ನಾನು ನೆರೆಹೊರೆಯ ಸುಮಾರು 80 ನಾಯಿಗಳಿಗೆ ಆಹಾರ ನೀಡುತ್ತಿದ್ದೇನೆ. ಅವುಗಳು ನನ್ನೊಂದಿಗೆ ಸ್ನೇಹಪರವಾಗಿದ್ದು, ನಮ್ಮ ಮೇಲೆ ದಾಳಿ ಮಾಡುವ ಸಂಭವ ಕಡಿಮೆ. ಹಾಗಾಗಿ ಅವುಗಳಿಂದಲೇ ಈ ಯೋಜನೆಗೆ ಚಾಲನೆ ನೀಡಿದ್ದೇವೆ. ಅದಲ್ಲದೆ ಕೋವಿಡ್ ಬಂದ ನಂತರ ಅನೇಕರು ಸ್ವಯಂಪ್ರೇರಿತರಾಗಿ ತಮ್ಮ ಪ್ರದೇಶಗಳ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಇದರಿಂದ ಅವರ ಹಾಗೂ ಪ್ರಾಣಿಗಳ ಮಧ್ಯೆ ಬಾಂಧವ್ಯ ಬೆಳೆದಿದೆ. ಇದನ್ನೇ ಬಳಸಿಕೊಂಡು ಅವುಗಳ ಕೊರಳಿಗೆ ಈ ಪ್ರತಿಫಲಿತ ಕೊರಳಪಟ್ಟಿಗಳನ್ನು ಹಾಕಲಾಗುವುದು ಎಂದರು.

ಪಿಎಫ್‌ಸಿಐ ಸಂಸ್ಥಾಪಕ ಅರುಣ್ ಪ್ರಸನ್ನ ಜಿ. ಮಾತನಾಡಿ, ಕಳೆದ ಕೆಲವು ತಿಂಗಳುಗಳಲ್ಲಿ ಪ್ರಾಣಿಗಳ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಗೆ ಬೀದಿಯಲ್ಲಿ ಬೀದಿ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ನಗರದಲ್ಲಿ ಸಂಸ್ಥೆಯ ಸುಮಾರು 200 ಸ್ವಯಂಸೇವಕರಿದ್ದು, ಅವರೆಲ್ಲರೂ ಸ್ಥಳೀಯ ಬೀದಿನಾಯಿಗಳೊಂದಿಗೆ ಪರಿಚಿತರಾಗಿದ್ದಾರೆ. ಆ ಪರಿಚಯವನ್ನೇ ನಾಯಿಗಳಿಗೆ ಕೊರಳಪಟ್ಟಿಗಳನ್ನು ಹಾಕಲು ಬಳಸಿಕೊಳ್ಳುತ್ತಾರೆ. ಇದರೊಂದಿಗೆ ಗರಿಷ್ಠ ಸಂಖ್ಯೆಯಲ್ಲಿ ಬೀದಿ ಪ್ರಾಣಿಗಳನ್ನು ಸಾವಿನಿಂದ ತಪ್ಪಿಸಲು ವಾರಾಂತ್ಯದಲ್ಲಿ ಪ್ರತಿ ಪ್ರದೇಶದಲ್ಲಿ ಪ್ರತಿಫಲಿತ ಕಾಲರ್​ ಕಾರ್ಯಕ್ರಮ ನಡೆಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪತಿ - ಪ್ರಧಾನಮಂತ್ರಿಗಳ ಭದ್ರತಾ ಕರ್ತವ್ಯ ನಿರ್ವಹಿಸಿದ್ದ ಶ್ವಾನ 'ಸ್ವಾತಿ' ಸಾವು

ABOUT THE AUTHOR

...view details