ಹೈದರಾಬಾದ್: ಹಿಂದೆ ಸಾಲ ಪಡೆಯುವುದು ತುಂಬಾ ಕಷ್ಟವಾಗಿತ್ತು. ಆದರೆ, ಈಗ ಸಮಯವು ಬದಲಾಗಿದೆ. ಸಾಲಗಳನ್ನು ತಕ್ಷಣವೇ ಮಂಜೂರು ಮಾಡಲಾಗುತ್ತದೆ ಮತ್ತು ಸೆಕೆಂಡುಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ. ಹಾಗಾಗಿ ಹಳೆಯ ಸಾಲವನ್ನು ತೀರಿಸುವವರೆಗೆ ಹೊಸ ಸಾಲಗಳತ್ತ ಸುಳಿಯಬೇಡಿ.
ಈ ಮೂಲಕ ಸಾಲದ ವಿಷಯದಲ್ಲಿ ಅತ್ಯಂತ ನಿಯಂತ್ರಣದ ಜೊತೆ ಸಾಲದಲ್ಲಿದ್ದಾಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ. ಬಹು ಮುಖ್ಯವಾಗಿ, ಆ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಯಾವುದನ್ನೇ ಆಗಲಿ ಖರೀದಿಸಲು ನಗದು ಹಣದ ಅಗತ್ಯವಿಲ್ಲ. ಯಾಕೆಂದರೆ ಪ್ರತೀ ಖರೀದಿಗೆ ಇಎಮ್ಐ ಸೌಲಭ್ಯ ದೊರಕುತ್ತದೆ. ಹಬ್ಬಗಳ ಸಂದರ್ಭದಲ್ಲಂತೂ ಇಎಂಐ ಮೂಲಕ ಸಾಲ ಹೆಚ್ಚಾಗಿ ಇರುತ್ತದೆ. ಆದರೆ, ಹಬ್ಬ ಎನ್ನುವ ಖುಷಿಯಿಂದ ಈ ರೀತಿಯ ಸಾಲಗಳನ್ನು ಬೇಗ ತೆಗೆದುಕೊಳ್ಳಬೇಡಿ. ಇದೇ ಸಾಲಗಳು ಮುಂದೆ ನಿಮ್ಮ ಹಣಕಾಸಿನ ಸಮತೋಲನ ಹಳಿ ತಪ್ಪಿಸಬಹುದು. ಮೊದಲು ಹಬ್ಬ ಹರಿದಿನಗಳಲ್ಲಿ ಎಷ್ಟು ಹಣ ಖರ್ಚಾಗಿದೆ ಎಂಬ ಸ್ಪಷ್ಟ ಅಂದಾಜು ಪಡೆಯಿರಿ.
ತೆಗೆದುಕೊಂಡ ಸಾಲಗಳ ಒಟ್ಟು ಮೊತ್ತ ಮತ್ತು ಅವುಗಳ ನಿಯಮಗಳು ಎಷ್ಟು? ಪ್ರತಿ ಸಾಲಕ್ಕೆ ನೀವು ಎಷ್ಟು ಬಡ್ಡಿಯನ್ನು ಪಾವತಿಸುತ್ತಿದ್ದೀರಿ ಎಂಬುದನ್ನು ಪರೀಕ್ಷಿಸಿ. ಸ್ಪಷ್ಟತೆ ಪಡೆಯಲು ಹಳೆಯ ಮತ್ತು ಹೊಸ ಸಾಲಗಳ ಪಟ್ಟಿಯನ್ನು ಒಂದೇ ಸ್ಥಳದಲ್ಲಿ ಬರೆಯಿರಿ. ನಂತರ ನಿಮ್ಮ ಆದಾಯದಿಂದ ಹೆಚ್ಚುವರಿಯಾಗಿ ಈ ಸಾಲಗಳನ್ನು ಹೇಗೆ ಪಾವತಿಸಬೇಕು ಎಂದು ಯೋಜಿಸಿ.