ಬಸ್ತಾರ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಸ್ತಾರ್ ವಿಭಾಗದಲ್ಲಿ ನಿಷೇಧಿತ ಸಂಘಟನೆಯಾದ ಸಿಪಿಐ (ಮಾವೋವಾದಿ) ಭದ್ರಕೋಟೆ ವೇಗವಾಗಿ ಕುಸಿಯುತ್ತಿರುವಂತೆ ಕಾಣುತ್ತಿದೆ. ಪ್ರತಿ ವರ್ಷ 400 ಮಂದಿ ಬಂಡುಕೋರರು ಭದ್ರತಾ ಪಡೆಗಳ ಮುಂದೆ ಶರಣಾಗುತ್ತಿದ್ದಾರೆ ಎಂಬ ಅಂಶದಿಂದ ಇದನ್ನು ಅಳೆಯಬಹುದಾಗಿದೆ.
ನಕ್ಸಲ್ ಕೇಡರ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ಇದರಿಂದ ಬೇಸತ್ತಿರುವ ಬಂಡುಕೋರರು ಸಮಾಜದ ಮುಖ್ಯವಾಹಿನಿಗೆ ಬರಲು ಆರಂಭಿಸಿದ್ದಾರೆ. ಸಿಪಿಐ (ಮಾವೋವಾದಿ)ಯ ಕಠಿಣ ತತ್ವಗಳಿಂದ ಸಂಪೂರ್ಣ ವಿಚಲಿತರಾಗಿರುವ ಕೆಂಪು ಉಗ್ರರು, ಸರ್ಕಾರ ಕೈಗೊಂಡಿರುವ ಪುನರ್ವಸತಿ ನೀತಿಯನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಜೀವನದ ಮುಖ್ಯವಾಹಿನಿಗೆ ಬರಲು ಇಚ್ಛಿಸಿ, ಅಪಾರ ಸಂಖ್ಯೆಯಲ್ಲಿ ಅರೆಸೇನಾ ಪಡೆಗಳ ಮುಂದೆ ಶರಣಾಗುತ್ತಿದ್ದಾರೆ ಎಂದು ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.