ಶ್ರೀನಗರ: ಜಮ್ಮು-ಕಾಶ್ಮೀರದ ಅರ್ನಿಯಾ ವಲಯದ ಅಂತರಾಷ್ಟ್ರೀಯ ಗಡಿಯಲ್ಲಿ ಇಂದು ಮುಂಜಾನೆ 5.30ರ ಸುಮಾರಿಗೆ ಆಕಾಶದಲ್ಲಿ ಕೆಂಪು ಹಾಗೂ ಹಳದಿ ಬಣ್ಣದ ಬೆಳಕು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಭಾರತೀಯ ಸೇನೆ ಕೂಡಲೇ 25 ಎಲ್‌ಎಂಜಿ ಸುತ್ತಿನ ಗುಂಡು ಹಾರಿಸಿದರು ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.
ಕಾಶ್ಮೀರ ಗಡಿಯಲ್ಲಿ ಮುಂಜಾನೆ ಬಣ್ಣದ ಲೈಟ್: ಸೇನೆಯ ಗುಂಡಿನ ದಾಳಿಗೆ ಕಾಲ್ಕಿತ್ತ ಪಾಕ್
ಜಮ್ಮುಕಾಶ್ಮೀರದ ಅರ್ನಿಯಾ ವಲಯದ ಅಂತರಾಷ್ಟ್ರೀಯ ಗಡಿಯಲ್ಲಿ ಇಂದು ಮುಂಜಾನೆ 5.30ರ ಕೆಂಪು ಹಾಗೂ ಹಳದಿ ಬಣ್ಣದ ಲೈಟ್ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಬಿಎಸ್‌ಎಫ್ ಅದರತ್ತ ಫೈರಿಂಗ್ ಮಾಡಿದ್ದಾರೆ. ಬಳಿಕ ಆ ವಸ್ತು ಪಾಕಿಸ್ತಾನದತ್ತ ಹೋಗಿದೆ ಎಂದು ಬಿಎಸ್‌ಎಫ್ ಹೇಳಿದೆ.
ಕಾಶ್ಮೀರದ ಅರ್ನಿಯಾ ಗಡಿಯಲ್ಲಿ ಮುಂಜಾನೆ ಬಣ್ಣದ ಲೈಟ್; ಸೇನೆಯ ಗುಂಡಿನ ದಾಳಿಗೆ ಬೆಚ್ಚಿ ಪಾಕ್‌ನತ್ತ ಎಸ್ಕೇಪ್
ಬಿಎಸ್‌ಎಫ್ ಫೈರಿಂಗ್ ಮಾಡುತ್ತಿದ್ದಂತೆ ಆಕಾಶದಲ್ಲೇ ಸ್ವಲ್ಪ ಎತ್ತರಕ್ಕೆ ಹಾರಿದ ವಸ್ತು ಬಳಿಕ ಪಾಕಿಸ್ತಾನದ ಕಡೆಗೆ ಹೋಗಿದೆ. ಪೊಲೀಸರ ನೆರವಿನಿಂದ ಪ್ರದೇಶವನ್ನು ಸುತ್ತುವರಿದು ಶೋಧಕಾರ್ಯ ನಡೆಸುತ್ತಿರುವುದಾಗಿ ಗಡಿ ಭದ್ರತಾ ಪಡೆಗಳು ಮಾಹಿತಿ ನೀಡಿವೆ.