ಶಿಮ್ಲಾ (ಹಿಮಾಚಲ ಪ್ರದೇಶ):ಆಗಸ್ಟ್ 14 ರಂದು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ, ಈವರೆಗೆ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹಿಮಾಚಲ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಭಾನುವಾರ ತಿಳಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಮಾಹಿತಿ:ಶಿವ ಮಂದಿರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ 17 ಶವಗಳನ್ನು ಹೊರತೆಗೆಯಲಾಗಿದೆ. ಏಳು ಜನರ ಕುಟುಂಬದ ಎರಡು ಮೃತದೇಹಗಳು ಇನ್ನೂ ಪತ್ತೆಯಾಗಬೇಕಿದೆ. ಅವಶೇಷಗಳ ಅಡಿ ಇನ್ನೂ ಮೂರು ಶವಗಳಿರುವ ಸಾಧ್ಯತೆಯಿದೆ. ನಾನು ಜಿಲ್ಲಾಧಿಕಾರಿಗಳೊಂದಿಗೆ ಸೂಚನೆ ನೀಡಲಾಗಿದ್ದು, ಅವರು ಇನ್ನೂ 2ರಿಂದ 3 ದಿನಗಳಲ್ಲಿ ಈ ದೇಹಗಳನ್ನು ಹೊರಗೆ ತೆಗೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಕ್ಸೇನಾ ಹೇಳಿದರು.
4 ದಿನದೊಳಗೆ ಭಾರಿ ವಾಹನಗಳ ಸಂಚಾರ ಪ್ರಾರಂಭ:ಮುಂದಿನ 3ರಿಂದ 4 ದಿನಗಳಲ್ಲಿ ಕುಲುವಿನಲ್ಲಿ ಸೇಬುಗಳನ್ನು ಸಾಗಿಸುವ ವಾಹನಗಳು ಸೇರಿದಂತೆ ಭಾರಿ ವಾಹನಗಳ ಸಂಚಾರ ಪ್ರಾರಂಭವಾಗಲಿದೆ. ಪುನಃಸ್ಥಾಪನೆಯ ಬದಿಯಲ್ಲಿ, ಈಗ ಕುಲುವಿನಿಂದ ಸೇಬುಗಳ ಸಾಗಾಟಕ್ಕೆ ಒತ್ತು ನೀಡಲಾಗಿದೆ. ಕುಲುವಿನಲ್ಲಿ ಹಲವು ವರ್ಷಗಳಿಂದ ಬಳಕೆಯಾಗದೇ ಬಿದ್ದಿದ್ದ ಬಿಬಿಎಂಬಿ ರಸ್ತೆಯನ್ನು ಕಳೆದ ಎರಡು ದಿನಗಳಲ್ಲಿ ದುರಸ್ತಿ ಮಾಡಿದ್ದೇವೆ. ಈಗ ನಾವು ಎನ್ಎಚ್ನ ಇನ್ನೊಂದು ಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.