ತಿರುವನಂತಪುರಂ :ಕೇರಳದಲ್ಲಿ ಲಾಕ್ಡೌನ್ ತೆರವುಗೊಳಿಸಿದ ಬಳಿಕ ಒಂದೇ ದಿನ ದಾಖಲೆಯ ಮದ್ಯ ಮಾರಾಟವಾಗಿದೆ. ನಿನ್ನೆ ಒಂದೇ ದಿನ (ಜೂನ್ 17) ರಾಜ್ಯದ ಮದ್ಯದಂಗಡಿಗಳಲ್ಲಿ 52 ಕೋಟಿ ರೂ. ಮೌಲ್ಯದ ಮದ್ಯ ಸೇಲ್ ಆಗಿದೆ. ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಸುಮಾರು 42 ಬಾರ್ಗಳನ್ನು ಬಂದ್ ಮಾಡಲಾಗಿತ್ತು. ಆದರೂ, 52 ಕೋಟಿ ರೂಪಾಯಿ ಮದ್ಯ ಮಾರಾಟವಾಗಿರೋದು ಅಚ್ಚರಿಯೇ ಸರಿ.
ಒಂದೇ ದಿನದಲ್ಲಿ 52 ಕೋಟಿ ರೂ.ಮೌಲ್ಯದ ಲಿಕ್ಕರ್ ಮಾರಾಟ.. ಕೇರಳ ಸರ್ಕಾರದ ಆದಾಯಕ್ಕೆ 'ಕಿಕ್'!
ಆ್ಯಪ್ ಮೂಲಕ ಮದ್ಯ ಮಾರಾಟ ಮಾಡಲು ಸರ್ಕಾರ ಯೋಜಿಸುತ್ತಿತ್ತು. ಆ್ಯಪ್ ಮೂಲಕ ಮದ್ಯ ಮಾರಾಟ ಮಾಡುವುದರಿಂದ ಸರ್ಕಾರ ಟೀಕೆಗೆ ಕಾರಣವಾಗಬಹುದು ಎಂದು ಬೆವ್ಕೊ ಎಂಡಿ ಯೋಗೇಶ್ ಗುಪ್ತಾ ಈ ಹಿಂದೆ ಅಬಕಾರಿ ಸಚಿವರಿಗೆ ತಿಳಿಸಿದ್ದರು. ಕೋವಿಡ್ ಮಾರ್ಗಸೂಚಿ ಅನುಸರಿಸಿ ಮದ್ಯ ಖರೀದಿಗೆ ಅನುವು ಮಾಡಿಕೊಡಲಾಯಿತು. ಮದ್ಯದಿಂದಲೇ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 1 ಸಾವಿರ ಕೋಟಿ ರೂ. ಆದಾಯ ಹರಿದು ಬರುತ್ತಿದೆ..
ಈ ಹಿಂದೆ ಹಬ್ಬ ಹರಿದಿನಗಳಲ್ಲೂ 46 ರಿಂದ 48 ಕೋಟಿ ರೂ.ಮೌಲ್ಯದ ಮದ್ಯ ಮಾತ್ರ ಮಾರಾಟವಾಗುತ್ತಿತ್ತು. ಪಾಲಕ್ಕಾಡ್ ಜಿಲ್ಲೆಯ ತೆನ್ಕುರಿಸ್ಸಿ ಮತ್ತು ಮೆನನ್‌ಪರಾ ಮಳಿಗೆಗಳಲ್ಲಿ 69 ಲಕ್ಷ ರೂ. ಮೌಲ್ಯದ ಲಿಕ್ಕರ್ ಮಾರಾಟವಾಗಿ, ಮೊದಲ ಸ್ಥಾನದಲ್ಲಿವೆ. ತಿರುವನಂತಪುರಂನ ಪವರ್‌ಹೌಸ್ ರಸ್ತೆಯ ಔಟ್ಲೆಟ್ನಲ್ಲಿ 66 ಲಕ್ಷ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದು, ಎರಡನೇ ಸ್ಥಾನದಲ್ಲಿದೆ. ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದರಿಂದ ಅಂದಾಜು 50 ದಿನಗಳಿಂದ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು.
ಮೊದಲಿನಂತೆ, ಆ್ಯಪ್ ಮೂಲಕ ಮದ್ಯ ಮಾರಾಟ ಮಾಡಲು ಸರ್ಕಾರ ಯೋಜಿಸುತ್ತಿತ್ತು. ಆ್ಯಪ್ ಮೂಲಕ ಮದ್ಯ ಮಾರಾಟ ಮಾಡುವುದರಿಂದ ಸರ್ಕಾರ ಟೀಕೆಗೆ ಕಾರಣವಾಗಬಹುದು ಎಂದು ಬೆವ್ಕೊ ಎಂಡಿ ಯೋಗೇಶ್ ಗುಪ್ತಾ ಈ ಹಿಂದೆ ಅಬಕಾರಿ ಸಚಿವರಿಗೆ ತಿಳಿಸಿದ್ದರು. ಕೋವಿಡ್ ಮಾರ್ಗಸೂಚಿ ಅನುಸರಿಸಿ ಮದ್ಯ ಖರೀದಿಗೆ ಅನುವು ಮಾಡಿಕೊಡಲಾಯಿತು. ಮದ್ಯದಿಂದಲೇ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 1 ಸಾವಿರ ಕೋಟಿ ರೂ. ಆದಾಯ ಹರಿದು ಬರುತ್ತಿದೆ.