ಕರ್ನಾಟಕ

karnataka

ETV Bharat / bharat

ಭಾರತದ ವಾಯುವ್ಯ ರಾಜ್ಯಗಳಲ್ಲಿ ದಾಖಲೆ ಮೀರಿದ ಮಳೆ; ಐಎಂಡಿ - ಅನೇಕ ಪ್ರದೇಶಗಳು ಮಳೆಕೊರತೆ

ದೇಶದ ಪ್ರಮುಖ ರಾಜ್ಯಗಳು ಭಾರೀ ಮಳೆಯಿಂದ ನಲುಗಿದರೆ, ಇನ್ನೂ ಅನೇಕ ಪ್ರದೇಶಗಳು ಮಳೆಕೊರತೆ ಅನುಭವಿಸಿವೆ.

Record breaking rains in India's northwest states; IMD
Record breaking rains in India's northwest states; IMD

By

Published : Jul 18, 2023, 3:41 PM IST

ನವದೆಹಲಿ: 2023ರ ಮಾನ್ಸೂನ್​ ಮಾರುತಗಳು ಭಾರತದ ಹಲವು ಭಾಗದಲ್ಲಿ ಭಾರೀ ಮಳೆಯನ್ನು ತಂದಿದೆ. ಜುಲೈ1ರಿಂದ ಜುಲೈ 12ರ ವರೆಗೆ ದಾಖಲೆಯ ಮಳೆ ಸುರಿದಿದ್ದು, ಅನೇಕ ಹಾನಿಗೆ ಇದು ಕಾರಣವಾಗಿದೆ. ಅನೇಕ ಪ್ರದೇಶಗಳು ಅಧಿಕ ಮಳೆಗೆ ತತ್ತರಿಸಿದರೆ, ಇತರೆ ಪ್ರದೇಶದಲ್ಲಿ ಒಣ ಪರಿಸ್ಥಿತಿ ಮುಂದುವರೆದಿದೆ.

ದೆಹಲಿ, ಚಂಢೀಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ದಾಖಲೆ ಮಳೆ ಸುರಿದಿದ್ದರೆ, ಇನ್ನಿತರ ಪ್ರದೇಶದಲ್ಲಿ ಮಳೆಯ ಕೊರತೆ ಅನುಭವಿಸಿದೆ. ಜುಲೈ 1 ರಿಂದ ಜುಲೈ 12ರವರೆಗೆ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶದಲ್ಲಿ ಅಧಿಕ ಮಳೆಗೆ ಸಾಕ್ಷಿಯಾಗಿದೆ. ಇದರಲ್ಲಿ 29 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಅಚ್ಚರಿ ಅಂಶ ಎಂದರೆ, ಸಾಮಾನ್ಯ ಮಟ್ಟಕ್ಕಿಂತ ಇಲ್ಲಿ 1,000 ಪ್ರತಿಶತ ಹೆಚ್ಚು ಮಳೆಯಾಗಿದೆ.

ಈ ಕುರಿತು ತಿಳಿಸಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), -19 ನಿಂದ 19 ಪ್ರತಿಶನ ಮಳೆ ಸಾಮಾನ್ಯವಾಗಿದೆ. -59ರಿಂದ -20ಪ್ರತಿಶತದ ಮಳೆ ಕೊರತೆ ಆಗಿದ್ದು, ಅಧಿಕ ಮಳೆ ಕೊರತೆಯೂ -99ರಿಂದ -60ರ ವರೆಗೆ ಇರಲಿದೆ ಎಂದಿದ್ದಾರೆ.

ಅಧಿಕ ಮಳೆಯ ಪ್ರಮಾಣವೂ ಶೇ 20ರಿಂದ 59ರಷ್ಟು ಪ್ರತಿಶತವಾಗಿದ್ದು, ಇದು ಸರಾಸರಿಗಿಂತ ಹೆಚ್ಚಿರಲಿದೆ. ಹೆಚ್ಚಿನ ಮಳೆಯೂ ಶೇ 60ರಷ್ಟು ಪ್ರತಿಶತಕ್ಕಿಂತ ಅಧಿಕವಾಗಿರಲಿದೆ.

ಜುಲೈ 9ರಂದು ಚಂಢೀಗಢ, ದೆಹಲಿ ಮತ್ತು ಹಿಮಾಚಲ ಪ್ರದೇಶವೂ ಅಧಿಕ ಮಳೆಗೆ ಸಾಕ್ಷಿಯಾಗಿದ್ದು, ಈ ಹಿಂದಿನ ದಾಖಲೆ ಮಳೆಯ ಸಂಪೂರ್ಣ ಇತಿಹಾಸವನ್ನು ತೊಡೆದುಹಾಕಿದೆ. ಪಂಜಾಬ್​ ಕೂಡ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಮಳೆ ಪಡೆದಿದ್ದು, ಇಲ್ಲಿನ 22 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ ಎಂದು ಐಎಂಡಿ ದತ್ತಾಂಶ ತಿಳಿಸಿದೆ.

ಜುಲೈ 9ರಂದು ಪಂಜಾಬ್​ ಮತ್ತು ಫಾಜಿಲ್ಕಾದಲ್ಲಿ 7,650 ಪ್ರತಿಶತ ಅಂದರೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ. ಫರಿದ್​ಕೋಟ್​ 3,335 ಪ್ರತಿಶತ ಮತ್ತು ರುಪ್ನಾಗರ್​​ 3,156 ಪ್ರತಿಶತ ಮಳೆ ಪಡೆದಿದೆ. ಈ ಅಂಕಿ ಅಂಶಗಳು ಪ್ರಾದೇಶಿಕವಾಗಿ ವಿವಿಧ ಕಡೆ ಈ ರೀತಿಯ ವಿಪರೀತ ಮಳೆಯಂತ ಘಟನೆ ಎದುರಿಸಲು ಸಜ್ಜಾಗಿರಬೇಕಿದೆ ಎಂಬುದನ್ನು ತೋರಿಸಿದೆ.

ದೆಹಲಿ ಕೂಡ ಅಧಿಕ ಮತ್ತು ತೀರ ಅಧಿಕ ಮಳೆಗೆ ಸಾಕ್ಷಿಯಾಗಿದ್ದು, ನಗರದಲ್ಲಿ 221.4 ಮಿಲಿಮೀಟರ್​ ಮಳೆಯಾಗಿದೆ. ಇದು ಜುಲೈನ ಅಧಿಕ ಮಳೆಯಾಗಿದ್ದು, 40 ವರ್ಷದ ದಾಖಲೆಯನ್ನು ಅಳಿಸಿ ಹಾಕಿದೆ.

ಜುಲೈ 6ರಂದು 22 ರಾಜ್ಯಗಳಲ್ಲಿ ಅಧಿಕ ಮಳೆಯಾಗಿದೆ. ಇದರಲ್ಲಿ 16 ರಾಜ್ಯದ ಎಲ್ಲಾ ಪ್ರದೇಶಗಳು ವಾಯುವ್ಯ, ಮಧ್ಯ, ದಕ್ಷಿಣ , ಪೂರ್ವ ಮತ್ತು ಈಶಾನ್ಯ ರಾಜ್ಯಗಳು ಅಧಿಕ ಮಳೆ ಪಡೆದಿದೆ. ಚಂಢೀಗಡದಲ್ಲಿ ಸಾಮಾನ್ಯವಾಗಿ 1.2 ಮಿಲಿಮೀಟರ್​ ಮಳೆ ಸಾಮಾನ್ಯವಾಗಿದ್ದು, ಇಲ್ಲಿ 20.4 ಮಿಲಿ ಮೀಟರ್​ ಮಳೆಯಾಗಿದೆ. ಜುಲೈ 4ರಂದು ಪುದುಚೇರಿ, ಲಕ್ಷದ್ವೀಪ್​, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳದಲ್ಲೂ ಕೂಡ ಭಾರೀ ಮಳೆಯನ್ನು ಪಡೆದಿದೆ.

ಜುಲೈ 3ರಂದು ಗೋವಾ ವಿಪರೀತ ಮಳೆಗೆ ಸಾಕ್ಷಿಯಾಗಿದ್ದು, ಇಲ್ಲಿ ಸಾಮಾನ್ಯಕ್ಕಿಂತ 186ರಷ್ಟು ಮಳೆ ಹೆಚ್ಚಿದೆ. ಮೇಘಾಲಯದಲ್ಲಿ 121 ಪ್ರತಿಶತ ಮತ್ತು ಬಿಹಾರನಲ್ಲಿ 84 ಪ್ರತಿಶತ ಮಳೆಯಾಗಿದೆ.

ಜುಲೈನಲ್ಲಿ ಅಧಿಕ ಮಳೆಯಾಗುವುದು ಸಾಮಾನ್ಯ. ಈ ವೀಪರಿತ ಮಳೆಯು ವಾರ್ಷಿಕ ಮಳೆಯ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ಈ ರೀತಿ ವಿಪರೀತಿ ಮಳೆಯಾಗುವುದಕ್ಕೆ ಎರಡು ಪ್ರಮುಖ ಘಟನೆಗಳಿಂದ. ಮಾನ್ಸೂನ್​ ವ್ಯವಸ್ಥೆಯು ದಕ್ಷಿಣ ಸಾಮಾನ್ಯವಾಗಿದ್ದು, ಪೂರ್ವ, ನೈರುತ್ಯದಲ್ಲಿ ತೇವಾಂಶದಿಂದ ಕೂಡಿರುತ್ತದೆ. ಇದು ನಿಧಾನವಾಗಿ ಪಶ್ಚಿಮದ ಕಡೆಗೆ ಚಲಿಸಿ ಇಲ್ಲಿ ಅಡಚಣೆಯನ್ನು ಹೊಂದುತ್ತದೆ. ಈಶಾನ್ಯ ಅರಬ್ಬಿ ಸಮುದ್ರದ ಗುಜರಾತ್​- ಪಶ್ಚಿಮ ರಾಜಸ್ಥಾನದ ಮಧ್ಯೆ ಕಡಿಮೆ ಒತ್ತಡದ ಪ್ರದೇಶ ರಚನೆಯಾಗುತ್ತದೆ. ಜುಲೈ 9-11ರಂದು ಕಡಿಮೆ ಒತ್ತಡದ ಪ್ರದೇಶದ ಜೊತೆಗೆ ಸೈಕ್ಲೋನ್​ ಕೂಡ ಸೇರಿ ರಾಜಸ್ಥಾನಕ್ಕೆ ಮಳೆ ತರುತ್ತದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಪ್ರದೇಶದಲ್ಲಿ ತೇವಾಂದಿಂದ ಕೂಡಿದ ಕಡಿಮೆ ಮಟ್ಟದ ವಾತವರಣದಿಂದ ಮಳೆ ತೀವ್ರತೆ ಹೆಚ್ಚಲಿದೆ.

ಇದರ ಜೊತೆಗೆ ಮತ್ತೊಂದು ಕಾರಣ ಎಂದರೆ ಎಲ್​ ನಿನೊ ಆಗಿದೆ. ಸಮುದ್ರದ ಮೇಲ್ಮೈ ಬೆಚ್ಚಗಿದ್ದು, ಇದು ಜಾಗತಿಕ ಮಳೆಯ ಮಾದರಿಗೆ ಕಾರಣವಾಗುತ್ತದೆ.

ಕೆಲವು ರಾಜ್ಯಗಳು ಅಧಿಕ ಮಟ್ಟದ ಮಳೆಯನ್ನು ಪಡೆದರೂ 20 ರಾಜ್ಯಗಳಲ್ಲಿ ಕಡಿಮೆ ಸಾಮಾನ್ಯ ಮಳೆಗೆ ಸಾಕ್ಷಿಯಾಗಿದೆ. ಇದು ದೇಶಾದ್ಯಂತ ಅಸಮಾತೋಲನಕ್ಕೆ ಕಾರಣವಾಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಮಳೆ ಕೊರತೆ ಉಂಟಾಗಿದೆ ಈ ವಿಪರೀತ ಮಾನ್ಸೂನ್ ಮಳೆಯ ಅನಿರೀಕ್ಷಿತ ಹವಾಮಾನ ಮಾದರಿಗಳಿಗೆ ತಯಾರಿ ಆಗುವ ತುರ್ತು ಸ್ಥಿತಿಯನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿ: ಸಮುದ್ರದ ಅಲೆಗೆ ಮಕ್ಕಳೆದುರೇ ಕೊಚ್ಚಿ ಹೋದ ಅಮ್ಮ.. ಮಮ್ಮಿ.. ಮಮ್ಮಿ.. ಎಂದು ಕಂದಮ್ಮಗಳ ಆಕ್ರಂದನ - ವಿಡಿಯೋ

ABOUT THE AUTHOR

...view details