ನವದೆಹಲಿ :ಪ್ರಧಾನಿ ಮೋದಿ ದೇಶದ ಎಲ್ಲಾ ನಾಗರಿಕರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದು, ಯೇಸು ಕ್ರಿಸ್ತನ ಜೀವನ ಮತ್ತು ಬೋಧನೆಗಳನ್ನು ಸ್ಮರಿಸಿದ್ದಾರೆ. ಇದರೊಂದಿಗೆ ಕ್ರಿಸ್ತ ಸೇವೆ, ದಯೆ ಮತ್ತು ಮಾನವೀಯತೆಗೆ ಹೆಚ್ಚು ಒತ್ತು ನೀಡಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸೇವೆ, ದಯೆ ಮತ್ತು ಮಾನವೀಯತೆಗೆ ಹೆಚ್ಚಿನ ಒತ್ತು ನೀಡಿದ ಯೇಸು ಕ್ರಿಸ್ತನ ಜೀವನ ಮತ್ತು ಉದಾತ್ತ ಬೋಧನೆಗಳನ್ನು ನಾವು ಸ್ಮರಿಸುತ್ತೇವೆ. ಎಲ್ಲರಿಗೂ ಆರೋಗ್ಯ ಲಭಿಸಲಿ ಮತ್ತು ಸಾಮರಸ್ಯ ನೆಲೆಸಲಿ ಎಂದು ಆಶಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಕೂಡ ಕ್ರಿಸ್ಮಸ್ಗೆ ಶುಭಾಶಯಗಳನ್ನು ಕೋರಿದ್ದು, ಭಾರತ ಮತ್ತು ವಿದೇಶಗಳಲ್ಲಿರುವ ಕ್ರೈಸ್ತ ಸಮುದಾಯದ ಸಹೋದರ ಮತ್ತು ಸಹೋದರಿಯರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.