ಗುವಾಹಟಿ (ಅಸ್ಸೋಂ):ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಏಕನಾಥ್ ಶಿಂದೆ ಬಣದ ಬಂಡಾಯ ಶಾಸಕರು ಇಂದು ಗುವಾಹಟಿಯಿಂದ ತೆರಳಲಿದ್ದಾರೆ. ರಾಡಿಸನ್ ಬ್ಲೂ ಹೋಟೆಲ್ನಲ್ಲಿ ತಂಗಿರುವ 48 ಶಾಸಕರು ಗೋವಾಕ್ಕೆ ಶಿಫ್ಟ್ ಆಗಲಿದ್ದಾರೆ. ಬಂಡಾಯ ಎದ್ದಿರುವವರು ಗೋವಾಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಗುವಾಹಟಿಯ ಎಲ್‌ಜಿಬಿಐ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಮಧ್ಯಾಹ್ನ 3.30ಕ್ಕೆ ವಿಮಾನದಲ್ಲಿ ಗೋವಾಗೆ ತೆರಳಲಿದ್ದಾರೆ. ಇದೀಗ ರಾಡಿಸನ್ ಬ್ಲೂನಿಂದ ಹೊರಟಿದ್ದಾರೆ. ಗೋವಾದ ಹೋಟೆಲ್ ತಾಜ್ನಲ್ಲಿ 71 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್‌ಜಿಬಿಐ ಏರ್ಪೋರ್ಟ್ನಲ್ಲಿ ಬಿಗಿ ಭದ್ರತೆ ಇದರ ನಡುವೆ ಎಲ್‌ಜಿಬಿಐ ವಿಮಾನ ನಿಲ್ದಾಣದಲ್ಲಿ ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಪರಿಸ್ಥಿತಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅವಲೋಕಿಸುತ್ತಿದ್ದು, ಸೂಕ್ತ ಭದ್ರತೆಗೆ ಮತ್ತು ಅವಘಡಗಳ ನಿಯಂತ್ರಣಕ್ಕೆ ಕ್ರಮ ವಹಿಸಿದ್ದಾರೆ.
ನಾಳೆ ಮುಂಬೈಗೆ? ಏಕನಾಥ್ ಶಿಂದೆ ಸೇರಿದಂತೆ ನಾಲ್ವರು ಬಂಡಾಯ ಶಾಸಕರು ಬೆಳಗ್ಗೆ 7.45ಕ್ಕೆ ಹೋಟೆಲ್ ರಾಡಿಸನ್ ಬ್ಲೂನಿಂದ ಕಾಮಾಖ್ಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದರು. ಮತ್ತೆ ಅವರು ಕಾಮಾಖ್ಯ ದೇವಸ್ಥಾನದಿಂದ ಹೋಟೆಲ್ ರಾಡಿಸನ್ ಬ್ಲೂಗೆ ಮರಳಿದರು. ನಿಯೋಗ ಎರಡು ಭಾಗವಾಗಿ ಹೊರಡಲಿದೆ ಎನ್ನಲಾಗ್ತಿದೆ. ಶಾಸಕರು ನಾಳೆ ಗೋವಾದಿಂದ ಮುಂಬೈಗೆ ತೆರಳಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ರಾಜ್ಯಪಾಲರು ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ: ನಾವು ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದ ರಾವುತ್