ಪಣಜಿ:ಶಿವಸೇನೆ ಬಂಡಾಯ ಶಾಸಕರು ಅಂದರೆ ಏಕನಾಥ್ ಶಿಂದೆ ಗುಂಪಿನ ಶಾಸಕರು ಕಳೆದ ರಾತ್ರಿಯೇ ಗೋವಾಗೆ ಆಗಮಿಸಿದ್ದಾರೆ. ಪಣಜಿಯ ತಾಜ್ ಕನ್ವೆನ್ಷನ್ ಸೆಂಟರ್ ಹೊಟೇಲಿನಲ್ಲಿ ಎಲ್ಲರಿಗೂ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಬಂಡಾಯ ಶಾಸಕರು ಮಹತ್ವದ ಸಭೆ ನಡೆಸಲಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಶಾಸಕರು ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಈ ಮಧ್ಯೆ ಕೆಲವೇ ಸಮಯದಲ್ಲಿ ಏಕನಾಥ್ ಶಿಂದೆ ಸ್ವತಃ ಮುಂಬೈಗೆ ತೆರಳಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ತಮ್ಮ ಬೆಂಬಲಕ್ಕೆ ನಿಂತಿರುವ ಎಲ್ಲ ಶಾಸಕರ ಬೆಂಬಲದ ಸಹಿ ಇರುವ ಪತ್ರದೊಂದಿಗೆ ಏಕನಾಥ್ ಶಿಂದೆ ಮುಂಬೈಗೆ ಆಗಮಿಸಲಿದ್ದಾರೆ.