ಕರ್ನಾಟಕ

karnataka

ETV Bharat / bharat

ಅಮೇಥಿ ಜನರ ಕ್ಷಮೆ ಕೇಳಿ, ರಾಹುಲ್ ವಿರುದ್ಧ ಕಾಂಗ್ರೆಸ್​ ಶಾಸಕಿ ಅದಿತಿ ಸಿಂಗ್ ವಾಗ್ದಾಳಿ!

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ಅದೇ ಪಕ್ಷದ ಶಾಸಕಿ ಅದಿತಿ ಸಿಂಗ್ ವಾಗ್ದಾಳಿ ನಡೆಸಿದ್ದು, ಅಮೇಥಿ ಜನರ ಕ್ಷಮೆಯಾಚನೆ ಮಾಡುವಂತೆ ಹೇಳಿದ್ದಾರೆ.

MLA Aditi Singh
MLA Aditi Singh

By

Published : Feb 24, 2021, 7:21 PM IST

Updated : Feb 24, 2021, 7:30 PM IST

ಅಮೇಥಿ (ಉತ್ತರ ಪ್ರದೇಶ):ಪ್ರಸ್ತುತ ವೈನಾಡು ಸಂಸದೀಯ ಕ್ಷೇತ್ರವನ್ನ ತಮ್ಮ ಹಿಂದಿನ ಅಮೇಥಿ ಕ್ಷೇತ್ರಕ್ಕೆ ಹೋಲಿಕೆ ಮಾಡಿರುವ ರಾಹುಲ್​ ಗಾಂಧಿ ವಿರುದ್ಧ ರೆಬೆಲ್​​ ಕಾಂಗ್ರೆಸ್​ ಶಾಸಕಿ ಅದಿತಿ ಸಿಂಗ್​ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್​ ಗಾಂಧಿ ವಿರುದ್ಧ ಅಮೇಥಿ ಶಾಸಕಿ ಅದಿತಿ ವಾಗ್ದಾಳಿ

ರಾಜಕೀಯ ಎಬಿಸಿಡಿ ಕಲಿಸಿರುವ ಅಮೇಥಿ ಬಗ್ಗೆ ರಾಹುಲ್ ಗಾಂಧಿ ಈ ರೀತಿಯಾಗಿ ಮಾತನಾಡಿರುವುದು ಸರಿಯಲ್ಲ, ಇದಕ್ಕಾಗಿ ಅವರು ಇಲ್ಲಿನ ಜನರ ಕ್ಷಮೆಯಾಚನೆ ಮಾಡಬೇಕು ಎಂದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ವೈನಾಡು ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಅಮೇಥಿ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇದೇ ವಿಚಾರವಾಗಿ ಮಾತನಾಡಿರುವ ಅದಿತಿ ಸಿಂಗ್​, ಅಮೇಥಿಯಲ್ಲಿ ನಿಮ್ಮ ಪೂರ್ವಜರು ಗೌರವ ಮತ್ತು ವಿಜಯ ಪಡೆದಿದ್ದಾರೆ. ನಿಮಗೆ ದೆಹಲಿ ತಲುಪಿಸಲು ಸಹಾಯ ಮಾಡಿದ್ದು ಅದೇ ಕ್ಷೇತ್ರ. ಈ ರೀತಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಲವ್​ ಜಿಹಾದ್​ಗೆ ತಡೆ​; ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತಾಂತರ ಮಸೂದೆಗೆ ಅಂಗೀಕಾರ!

ರಾಹುಲ್​ ಗಾಂಧಿ ಹೇಳಿದ್ದೇನು!?

ಐಶ್ವರ್ಯ ಕೇರಳ ಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ್ದ ರಾಹುಲ್​ ಗಾಂಧಿ ಉತ್ತರದಿಂದ 15 ವರ್ಷಗಳ ಕಾಲ ಸಂಸದನಾಗಿದ್ದೆನು ಅಲ್ಲಿ ವಿಭಿನ್ನ ರೀತಿಯ ರಾಜಕೀಯ ಬಳಕೆಯಾಗುತ್ತಿತ್ತು. ಆದರೆ ಕೇರಳಕ್ಕೆ ಬಂದಿರುವುದು ತುಂಬಾ ಉಲ್ಲಾಸ ತುಂಬಿದೆ ಎಂದು ಹೇಳಿದ್ದರು.

ಈ ಹಿಂದೆ ಕೂಡ ಆರ್ಟಿಕಲ್​ 370 ರದ್ದತಿ ಬಗ್ಗೆ ಮಾತನಾಡಿದ್ದ ಅದಿತಿ, ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದಿದ್ದರು. ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಇವರು ಭಾಗಿಯಾಗಿದ್ದರು.

Last Updated : Feb 24, 2021, 7:30 PM IST

ABOUT THE AUTHOR

...view details