ಕರ್ನಾಟಕ

karnataka

ETV Bharat / bharat

'ರಫ್ತಿಗಾಗಿ ಬ್ರಹ್ಮೋಸ್ ಉತ್ಪಾದನೆ ಹೆಚ್ಚಿಸಲು ಸಿದ್ಧ' - ಬ್ರಹ್ಮೋಸ್ ಎರೋಸ್ಪೇಸ್​ ಸಿಇಓ ಸುದೀರ್ ಕುಮಾರ್ ಮಿಶ್ರಾ

ನಮ್ಮ ಸಂಸ್ಥೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತದೆ. ರಫ್ತು ಮಾಡಲು ಬ್ರಹ್ಮೋಸ್​ ಉತ್ಪಾದನೆಯನ್ನು ಹೆಚ್ಚಿಸಲು ಸಿದ್ಧವಾಗಿದೆ ಎಂದು ಬ್ರಹ್ಮೋಸ್ ಎರೋಸ್ಪೇಸ್ ಸಿಇಒ ಭರವಸೆ ನೀಡಿದ್ದಾರೆ.

Sudhir Kumar Mishra
ಸಿಇಓ ಸುದೀರ್ ಕುಮಾರ್ ಮಿಶ್ರಾ

By

Published : Feb 4, 2021, 6:44 PM IST

Updated : Feb 4, 2021, 6:58 PM IST

ಬೆಂಗಳೂರು:ಭವಿಷ್ಯದಲ್ಲಿ ಆಕಾಶ್​ ಕ್ಷಿಪಣಿ ರಫ್ತು ಮಾಡುವುದನ್ನು ಪ್ರೋತ್ಸಾಹಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದ್ದು, ಈ ನಿರ್ಧಾರವನ್ನು ಬ್ರಹ್ಮೋಸ್ ಎರೋಸ್ಪೇಸ್​ ಸಿಇಒ ಸುಧೀರ್ ಕುಮಾರ್ ಮಿಶ್ರಾ ಸ್ವಾಗತಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಅವರು, ನಮ್ಮ ಸಂಸ್ಥೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತದೆ. ರಫ್ತು ಮಾಡಲು ಬ್ರಹ್ಮೋಸ್​ ಉತ್ಪಾದನೆಯನ್ನು ಹೆಚ್ಚಿಸಲು ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಫೆಬ್ರವರಿ 6 ರಂದು ಮೂರು ಗಂಟೆಗಳ ಕಾಲ 'ಚಕ್ಕಾ ಜಾಮ್': ಟಿಕಾಯತ್​ ಘೋಷಣೆ

ಮುಂದಿನ ಐದು ವರ್ಷಗಳಲ್ಲಿ ಐದು ಬಿಲಿಯನ್ ಡಾಲರ್​ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ನಿಗದಿಪಡಿಸಿದ್ದು, ಕಳೆದ ವರ್ಷವೇ ಆಕಾಶ್ ಕ್ಷಿಪಣಿಯನ್ನು ರಫ್ತು ಮಾಡಲು ಅವಕಾಶ ನೀಡಲಾಗಿತ್ತು. ಈಗ ಆ ರಫ್ತು ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ರಫ್ತಿಗೆ ತ್ವರಿತ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗಿತ್ತು. 2025ರ ವೇಳೆಗೆ 1.75 ಲಕ್ಷ ಕೋಟಿ ರೂ. ವ್ಯವಹಾರ ನಡೆಸಲು ಚಿಂತನೆ ನಡೆಸಲಾಗಿದೆ.

ಆಕಾಶ್ ಕ್ಷಿಪಣಿಗಳು ಶೇಕಡಾ 96ರಷ್ಟು ಸ್ವದೇಶಿಯವಾಗಿದ್ದು, ಸುಮಾರು 25 ಕಿಲೋ ಮೀಟರ್ ವ್ಯಾಪ್ತಿಯ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿವೆ.

Last Updated : Feb 4, 2021, 6:58 PM IST

ABOUT THE AUTHOR

...view details