ಕರ್ನಾಟಕ

karnataka

By

Published : Jul 21, 2022, 8:07 AM IST

ETV Bharat / bharat

ಇಂದು ಹೊಸ ರಾಷ್ಟ್ರಪತಿ ಘೋಷಣೆ: ಒಡಿಶಾದಲ್ಲಿ ಸಿದ್ಧವಾದ ಗೆಲುವಿನ "ಸಿಹಿ"

ದ್ರೌಪದಿ ಮುರ್ಮು ಅವರು ದೇಶದ ನೂತನ ರಾಷ್ಟ್ರಪತಿಗಳಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಅವರ ತವರೂರಾದ ಒಡಿಶಾದಲ್ಲಿ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

droupadi-murmus-hometown
ಇಂದು ಹೊಸ ರಾಷ್ಟ್ರಪತಿ ಘೋಷಣೆ

ನವದೆಹಲಿ:ದೇಶಕ್ಕೆ ಹೊಸ ರಾಷ್ಟ್ರಪತಿ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಅಧ್ಯಕ್ಷರ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಎನ್​ಡಿಎ ಅಭ್ಯರ್ಥಿ, ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರ ಗೆಲುವು ಬಹುತೇಕ ಖಚಿತವಾಗಿದೆ. ಹೀಗಾಗಿ ಅವರ ತವರೂರಾದ ಒಡಿಶಾದ ರಾಯ್​ರಂಗಪುರ ರಂಗೇರಿದ್ದು, ಗೆಲುವಿನ ಸಂಭ್ರಮಾಚರಣೆಗೆ ಸಜ್ಜಾಗಿದೆ. ಗೆಲುವಿನ "ಸಿಹಿ" ಈಗಾಗಲೇ ಸಿದ್ಧಪಡಿಸಲಾಗಿದೆ. ಫಲಿತಾಂಶ ಹೊರಬಿದ್ದ ಬಳಿಕ ಹಂಚಿಕೆ ಮಾಡಿ, ಬುಡಕಟ್ಟು ನೃತ್ಯವನ್ನು ಮಾಡಲು ಯೋಜಿಸಲಾಗಿದೆ.

ಮುರ್ಮು ಅವರ ಗೆಲುವಿನ ಸಂಭ್ರಮಕ್ಕೆ ಸಿದ್ಧವಾದ ಸಿಹಿ
  1. ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸಂಭ್ರಮಾಚರಣೆ ನಡೆಸಲಿದೆ. ಗೆಲುವಿನ ಸಿಹಿ ಹಂಚಲು 20 ಸಾವಿರ ಲಡ್ಡುಗಳನ್ನು ಈಗಾಗಲೇ ತಯಾರಿಸಲಾಗಿದೆ. ಮುರ್ಮು ಅವರು ವಾಸಿಸುತ್ತಿದ್ದ ಪಟ್ಟಣದಲ್ಲಿ 100 ಬ್ಯಾನರ್​ಗಳನ್ನು ಅಳವಡಿಸಲಾಗಿದೆ.
  2. ದ್ರೌಪದಿ ಮುರ್ಮು ಅವರು ಓದಿದ ಶಾಲೆಯಲ್ಲೂ ಸಂಭ್ರಮ ಮನೆ ಮಾಡಿದೆ. "ಜನರ ಸೇವೆ ಮಾಡಬೇಕು ಎಂಬುದು ಆಕೆಯ ಬಯಕೆಯಾಗಿತ್ತು. ಇದನ್ನು ವಿದ್ಯಾರ್ಥಿ ದೆಸೆಯಲ್ಲೇ ಅವರು ನಿಶ್ಚಯಿಸಿದ್ದರು. ನನಗೆ ಆಕೆಯ ಬಗ್ಗೆ ತುಂಬಾ ಗೌರವ, ಹೆಮ್ಮೆಯ ಭಾವವಿದೆ. ನನ್ನ ವಿದ್ಯಾರ್ಥಿಯೊಬ್ಬರು ರಾಷ್ಟ್ರಪತಿಗಳಾಗುತ್ತಿದ್ದಾರೆ ಎಂಬುದೇ ರೋಮಾಂಚನಕಾರಿ ಸಂಗತಿ" ಎಂದು ದ್ರೌಪದಿ ಮುರ್ಮು ಅವರ ಶಿಕ್ಷಕರಾದ ಬಿಸ್ವೆಸ್ವರ್​ ಮೊಹಾಂತಿ ತಿಳಿಸಿದರು.
  3. ದ್ರೌಪದಿ ಮುರ್ಮು ಅವರು ಈ ಶಾಲೆಯಲ್ಲಿ ಓದಿದ್ದರು. ಅದೇ ಶಾಲೆಯಲ್ಲಿ ನಾವು ವ್ಯಾಸಂಗ ಮಾಡುತ್ತಿದ್ದೇವೆ ಎಂಬುದೇ ನಮಗೆ ಗರ್ವದ ಸಂಗತಿ. ಅವರಿಂದು ದೇಶದ ಅತ್ಯುನ್ನತ ಗೌರವದ ಹುದ್ದೆಗೆ ಏರಲಿದ್ದಾರೆ. ಅವರಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ಶಾಲೆಯ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡಿದ್ದಾರೆ.
  4. ಮುರ್ಮು ಅವರು ಜಾರ್ಖಂಡ್‌ನ ಮಾಜಿ ರಾಜ್ಯಪಾಲೆಯಾಗಿದ್ದಾರೆ. ಗೆಲುವಿನ ಬಳಿಕ ಅವರು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
  5. ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು. ನಂತರ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್​ಸಿಪಿ), ಆಮ್ ಆದ್ಮಿ, ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾ ದಳದಿಂದ ಸೇರಿದಂತೆ ವಿವಿಧ ಪಕ್ಷಗಳ ಬೆಂಬಲದಿಂದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು.
  6. ಫಲಿತಾಂಶದ ಬಳಿಕ ಬಿಜೆಪಿ ಬೃಹತ್ 'ಅಭಿನಂದನಾ ಯಾತ್ರೆ'ಯನ್ನು ಯೋಜಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ದ್ರೌಪದಿ ಮುರ್ಮು ಅವರ ಗೆಲುವಿನ ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ. ವಿಜಯವನ್ನು ಆಚರಿಸಲು ದೆಹಲಿ ಬಿಜೆಪಿ ಕಚೇರಿಯಿಂದ ರೋಡ್‌ಶೋ ನಡೆಯಲಿದೆ.
  7. ಸಂಸತ್ತಿನಲ್ಲಿ ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆದಿತ್ತು.

ABOUT THE AUTHOR

...view details